/newsfirstlive-kannada/media/post_attachments/wp-content/uploads/2024/03/RCB-UNbox.jpg)
ಬೆಂಗಳೂರು: RCB ಅಭಿಮಾನಿಗಳಿಗೆ ಇವತ್ತು ಹಬ್ಬದ ದಿನ. IPL ಹಣಾಹಣಿಗೂ ಮುನ್ನ ಇಂದು ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ RCB ಉತ್ಸವ ನಡೆಯುತ್ತಾ ಇದೆ. ಕೆಲವೇ ಕ್ಷಣದಲ್ಲಿ RCB ಅನ್‌ಬಾಕ್ಸ್ ಈವೆಂಟ್ ನಡೆಯುತ್ತಾ ಇದ್ದು, ಹುಚ್ಚೆದ್ದು ಕುಣಿಯೋಕೆ ಅಭಿಮಾನಿಗಳು ಕಾತರರಾಗಿದ್ದಾರೆ.
ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆಯುತ್ತಿರುವ RCB ಅನ್‌ಬಾಕ್ಸ್ ಈವೆಂಟ್‌ಗೆ ಈಗಾಗಲೇ ಅಭಿಮಾನಿಗಳ ದಂಡು ಹರಿದು ಬರ್ತಿದೆ. ಮೊದಲೇ ಟಿಕೆಟ್ ಬುಕ್ ಮಾಡಿಕೊಂಡಿದ್ದ ಫ್ಯಾನ್ಸ್ RCB ಸರ್‌ಪ್ರೈಸ್‌ಗಳನ್ನ ಕಣ್ತುಂಬಿಕೊಳ್ಳಲು ತುದಿಗಾಲಲ್ಲಿ ನಿಂತಿದ್ದಾರೆ. RCB ಅನ್‌ಬಾಕ್ಸ್ ಈವೆಂಟ್‌ನಲ್ಲಿ ನಾಯಕ ಫಾಫ್ ಡು ಪ್ಲೆಸಿಸ್, ಸ್ಟಾರ್ ಕ್ರಿಕೆಟರ್ ವಿರಾಟ್ ಕೊಹ್ಲಿ ಸೇರಿದಂತೆ ಹಲವು ಕ್ರಿಕೆಟ್ ತಾರೆಯರು ಭಾಗಿಯಾಗುತ್ತಿದ್ದಾರೆ.
ಅಭಿಮಾನಿಗಳಿಗೆ ಎರಡು ಸರ್‌ಪ್ರೈಸ್!
ಇಂದಿನ ಅನ್‌ಬಾಕ್ಸ್ ಈವೆಂಟ್‌ನಲ್ಲಿ ಪ್ರಮುಖವಾಗಿ RCBಯ ಹಲವು ಬದಲಾವಣೆಯನ್ನ ಘೋಷಣೆ ಮಾಡಲಾಗುತ್ತಿದೆ. ರಾಯಲ್ ಚಾಲೆಂಜರ್ಸ್ ಬೆಂಗಳೂರ್ ಹೋಗಿ ಬೆಂಗಳೂರು ಆಗಬಹುದು. RCB ಫ್ರಾಂಚೈಸಿಯ ಜೆರ್ಸಿ ಕೂಡ ಇಂದೇ ರಿವೀಲ್ ಆಗುವ ಸಾಧ್ಯತೆ ಇದೆ.
/newsfirstlive-kannada/media/post_attachments/wp-content/uploads/2024/03/rcb-3.jpg)
ಯಾವ್ಯಾವ ಸೆಲೆಬ್ರಿಟಿಗಳು ಬರ್ತಾರೆ?
RCB ಅನ್‌ಬಾಕ್ಸ್ ಈವೆಂಟ್‌ನಲ್ಲಿ ಅಲನ್ ವಾಕರ್, ರಘು ದೀಕ್ಷಿತ್, ನೀತಿ ಮೋಹನ್ ಬ್ರೋಧಾ, ವಿ. ಜೋರ್ಡಿಂಡಿಯನ್, ಬರ್ಫಿ ಕಚ್ಚೇರಿ ಅವರ ಕಾರ್ಯಕ್ರಮ ನಡೆಯಲಿದೆ. ನಟ ರಿಷಬ್ ಶೆಟ್ಟಿ, ಶಿವರಾಜ್‌ಕುಮಾರ್, ಅಶ್ವಿನಿ ಪುನೀತ್ ರಾಜ್‌ಕುಮಾರ್ ಮತ್ತು ನಟಿ ರಶ್ಮಿಕಾ ಮಂದಣ್ಣ ಅವರು RCB ಕಲರ್‌ಫುಲ್ ಕಾರ್ಯಕ್ರಮಕ್ಕೆ ಹಾಜರಾಗುವ ನಿರೀಕ್ಷೆಯಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us