ಕೊಬ್ಬರಿನೂ ಮಾತಾಡ್ಸಂಗಿಲ್ಲ.. ಚಿಪ್ಪಿಗೂ ಡಿಮ್ಯಾಂಡಪ್ಪೋ ಡಿಮ್ಯಾಂಡ್.. 1 ಟನ್​​ಗೆ 34 ಸಾವಿರ ರೂ!

author-image
Veena Gangani
Updated On
ಕೊಬ್ಬರಿನೂ ಮಾತಾಡ್ಸಂಗಿಲ್ಲ.. ಚಿಪ್ಪಿಗೂ ಡಿಮ್ಯಾಂಡಪ್ಪೋ ಡಿಮ್ಯಾಂಡ್.. 1 ಟನ್​​ಗೆ 34 ಸಾವಿರ ರೂ!
Advertisment
  • ತೆಂಗು ರೈತರಲ್ಲಿ ಡಬಲ್ ಖುಷಿಗೆ ಕಾರಣವೇನು..?
  • ತೆಂಗು ಜೊತೆಗೆ ಕೊಬ್ಬರಿ ಬೆಲೆಯಲ್ಲೂ ಭಾರೀ ಏರಿಕೆ
  • 3 ದಿನದ ಅಂತರದಲ್ಲೇ ಗಗನಕ್ಕೇರಿದ ಕೊಬ್ಬರಿ ಬೆಲೆ

ರಾಜ್ಯದಲ್ಲಿ ತೆಂಗು ಮತ್ತು ಕೊಬ್ಬರಿಯ ಬೆಲೆ ದಿನೇ ದಿನೇ ಏರಿಕೆಯಾಗುತ್ತಿದೆ. ಇದು ತೆಂಗು ಬೆಳೆಗಾರರಲ್ಲಿ ಖುಷಿ ಮೂಡಿಸಿದೆ. ಸದಾ ತೆಂಗು ಬೆಲೆಯ ಕುಸಿತದಿಂದ ಕಂಗಲಾಗಿದ್ದ ಬಯಲು ಸೀಮೆಯ ರೈತರು ಅಪರೂಪಕ್ಕೆ ಬೆಲೆ ಏರಿಕೆಯಿಂದ ಖುಷಿಯಾಗಿದ್ದಾರೆ. ತೆಂಗು ಬೆಲೆಯ ಜೊತೆಗೆ ಕೊಬ್ಬರಿ ಬೆಲೆ ಕೂಡ ಏರಿಕೆ ಆಗಿರುವುದು ತೆಂಗು ರೈತರಲ್ಲಿ ಡಬಲ್ ಖುಷಿಗೆ ಕಾರಣವಾಗಿದೆ.

ಇದನ್ನೂ ಓದಿ: ಹಲ್ಲುಗಳು ಫಳಫಳ ಹೊಳಿಬೇಕಂತ ಅಪ್ಪಿತಪ್ಪಿಯೂ ಈ ತಪ್ಪು ಮಾಡ್ಬೇಡಿ.. ಈ ಟಿಪ್ಸ್ ಪಾಲಿಸಿ..!

ರಾಜ್ಯದ ಪ್ರಸಿದ್ದ ತಿಪಟೂರು ಕೊಬ್ಬರಿ ಮಾರುಕಟ್ಟೆಯಲ್ಲಿ ಕೊಬ್ಬರಿ ಬೆಲೆಯು 2 ತಿಂಗಳಲ್ಲಿ ಕ್ವಿಂಟಾಲ್​ಗೆ 11 ಸಾವಿರ ರೂಪಾಯಿ ಏರಿಕೆಯಾಗಿದೆ. ತಿಪಟೂರು ಎಪಿಎಂಸಿ ಯಲ್ಲಿ ಗುರುವಾರ ನಡೆದ ಹರಾಜಿನಲ್ಲಿ ಕ್ವಿಂಟಾಲ್ ಕೊಬ್ಬರಿ ಬೆಲೆ 29 ಸಾವಿರ ರೂಪಾಯಿಗೆ ಏರಿಕೆಯಾಗಿರುವುದು ವಿಶೇಷ. ಕೇವಲ 3 ದಿನಗಳ ಅಂತರದಲ್ಲಿ ಕ್ವಿಂಟಾಲ್ ಕೊಬ್ಬರಿ ಬೆಲೆ 3 ಸಾವಿರ ರೂಪಾಯಿ ಏರಿಕೆಯಾಗಿರುವುದು ವಿಶೇಷ. ಸೋಮವಾರ ಮತ್ತು ಗುರುವಾರ ಮಾತ್ರವೇ ತಿಪಟೂರು ಎಪಿಎಂಸಿ ಮಾರುಕಟ್ಟೆಯಲ್ಲಿ ಕೊಬ್ಬರಿಯ ಹರಾಜು ಮತ್ತು ಮಾರಾಟ ನಡೆಯುತ್ತೆ.

publive-image

ಕಳೆದ 2 ತಿಂಗಳಿನಿಂದ ಕೊಬ್ಬರಿ ಬೆಲೆ ಪ್ರತಿ ವಾರವೂ ಏರಿಕೆಯಾಗುತ್ತಿದೆ. ಕಳೆದ ಸೋಮವಾರ ಪ್ರತಿ ಕ್ವಿಂಟಾಲ್ ಕೊಬ್ಬರಿ ಬೆಲೆ 26 ಸಾವಿರ ರೂಪಾಯಿಗೆ ಏರಿಕೆಯಾಗಿತ್ತು. ಜೂನ್ 26ರ ಗುರುವಾರ ಕ್ವಿಂಟಾಲ್ ಕೊಬ್ಬರಿ ಬೆಲೆ 29,118 ರೂಪಾಯಿಗೆ ಏರಿಕೆಯಾಗಿದೆ. ಉತ್ತರ ಭಾರತದಿಂದ ಕೊಬ್ಬರಿಗೆ ಬೇಡಿಕೆ ಹೆಚ್ಚಾಗುತ್ತಿರುವುದೇ ಕೊಬ್ಬರಿ ಬೆಲೆ ಏರಿಕೆಗೆ ಕಾರಣ. ಜೊತೆಗೆ ರಾಜ್ಯದಲ್ಲಿ ಕೊಬ್ಬರಿಯ ಇಳುವರಿ ಕಡಿಮೆಯಾಗಿದ್ದರಿಂದ ಸಹಜವಾಗಿಯೇ ಬೆಲೆ ಏರಿಕೆಯಾಗುತ್ತಿದೆ. ಜೊತೆಗೆ ರಾಜ್ಯದ ಕೊಬ್ಬರಿಯೂ ಕೇರಳ, ತಮಿಳುನಾಡು ರಾಜ್ಯಕ್ಕೆ ಹೆಚ್ಚಾಗಿ ಪೂರೈಕೆಯಾಗುತ್ತಿದೆ. ಮಾರುಕಟ್ಟೆಯಲ್ಲಿ ನಡೆಯುತ್ತಿದ್ದ ಸೆಕೆಂಡ್ಸ್ ದಂಧೆಗೆ ಕಡಿವಾಣ ಬಿದ್ದಿದ್ದರಿಂದ ಕೂಡ ಕೊಬ್ಬರಿ ಬೆಲೆ ಏರಿಕೆಯಾಗುತ್ತಿದೆ ಎಂದು ಕೊಬ್ಬರಿ ವ್ಯಾಪಾರಿಗಳು ಹೇಳಿದ್ದಾರೆ.

ಈ ಹಿಂದೆ ಕೊಬ್ಬರಿಗೆ ಕ್ವಿಂಟಾಲ್ ಗೆ 15 ಸಾವಿರ ರೂಪಾಯಿ ಬೆಂಬಲ ಬೆಲೆ ನೀಡಿ ಎಂದು ರೈತರು ಕೇಂದ್ರ ಸರ್ಕಾರವನ್ನು ಕೇಳುತ್ತಿದ್ದರು. ಆದರೇ, ಈಗ ಅದರ ಪಟ್ಟು ಹೆಚ್ಚಿನ ಬೆಲೆಗೆ ಕೊಬ್ಬರಿ ಬೆಲೆ ತಲುಪಿದೆ. ಕೆಲವೊಮ್ಮೆ ಅಡಕೆ ಬೆಲೆಯೂ ಹೀಗೆ ಏರಿಕೆಯಾಗಿ ಇಳಿಕೆಯಾಗುತ್ತೆ. ಮಲೆನಾಡು, ಕರಾವಳಿ ಭಾಗದ ಅಡಕೆ ರೈತರು ಅಡಕೆ ಬೆಲೆ ಏರಿಕೆಯಿಂದ ಖುಷಿಯಾಗಿದ್ದರು. ಈಗ ತೆಂಗು ರೈತರ ಸರದಿ.

publive-image

ಮದುವೆಯ ವೇಳೆ ಫಲ ತಾಂಬೂಲವಾಗಿ ತೆಂಗು ಅನ್ನು ನೀಡಲಾಗುತ್ತೆ. ಇದರಿಂದಾಗಿಯೂ ತೆಂಗು ಮತ್ತು ಕೊಬ್ಬರಿ ಬೆಲೆ ಏರಿಕೆಯಾಗುತ್ತಿದೆ. ಕೊಬ್ಬರಿ ಬೆಲೆ ಏರಿಕೆಯಿಂದ ಕೊಬ್ಬರಿ ಎಣ್ಣೆಯ ಬೆಲೆಯೂ ಏರುಮುಖವಾಗಿದೆ. ತೆಂಗು ಅನ್ನು ಕಲ್ಪವೃಕ್ಷ ಎಂದು ಕರೆಯುತ್ತೇವೆ. ತೆಂಗಿನ ಎಲ್ಲ ಉತ್ಪನ್ನಗಳು ಒಂದಲ್ಲ, ಒಂದು ರೀತಿಯಲ್ಲಿ ಜನಕ್ಕೆ ಉಪಯೋಗಿ ಆಗಿವೆ. ತೆಂಗಿನ ಖಾಲಿ ಚಿಪ್ಪಿಗೂ ಟನ್‌ಗೆ 34 ಸಾವಿರ ರೂಪಾಯಿ ಬೆಲೆ ಇದೆ. ತುಮಕೂರು ಜಿಲ್ಲೆಯ ತಿಪಟೂರು ತಾಲ್ಲೂಕಿನ ಕೆ.ಬಿ.ಕ್ರಾಸ್ ನಲ್ಲಿ ತೆಂಗಿನ ಖಾಲಿ ಚಿಪ್ಪು 34 ಸಾವಿರ ರೂಪಾಯಿಗೆ ಮಾರಾಟವಾಗುತ್ತಿದೆ.

ಇನ್ನೂ ತಿಪಟೂರು ಪಕ್ಕದ ಚಿಕ್ಕನಾಯಕನಹಳ್ಳಿಯಲ್ಲಿ ರವಿ ಎಂಬ ರೈತರು ತೆಂಗಿನ ಚಿಪ್ಪು ಅನ್ನು ವಿಶಿಷ್ಟವಾಗಿ ವಿನ್ಯಾಸಗೊಳಿಸಿ ವಿದೇಶಕ್ಕೆ ರಫ್ತು ಕೂಡ ಮಾಡುತ್ತಿದ್ದಾರೆ. ಆನ್ ಲೈನ್ ವೇದಿಕೆಗಳಲ್ಲಿ ತೆಂಗಿನ ಕಾಯಿಯ ಖಾಲಿ ಚಿಪ್ಪು ಕೂಡ ಕೆಲವೊಮ್ಮೆ 100 ರೂಪಾಯಿ, 200 ರೂಪಾಯಿಗೆ ಮಾರಾಟವಾದ ಉದಾಹರಣೆಯೂ ಇದೆ. ಏನೂ ಸಿಗಲಿಲ್ಲ ಅಂದರೇ, ಚಿಕ್ಕನಾಯಕನಹಳ್ಳಿ ಚಿಪ್ಪು ಸಿಗುತ್ತೆ ಅಂತ ವ್ಯಂಗ್ಯವಾಗಿ ಜನರು ಹೇಳುತ್ತಿದ್ದರು. ಆದರೇ, ಅದೇ ಚಿಕ್ಕನಾಯಕನಹಳ್ಳಿ ಚಿಪ್ಪು ಕೂಡ ಟನ್ ಗೆ 34 ಸಾವಿರ ರೂಪಾಯಿಗೆ ಮಾರಾಟವಾಗುತ್ತಿದ್ದು, ಎಲ್ಲರೂ ಹುಬ್ಬೇರುವಂತೆ ಮಾಡಿದೆ. ಇನ್ನೂ, ಜೂನ್​ 27ರಂದು ಅರಸಿಕೇರೆಯಲ್ಲಿ ಕ್ವಿಂಟಾಲ್​ಗೆ 30 ಸಾವಿರಕ್ಕೆ ಮಾರಾಟವಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment