ಜಮ್ಮು-ಕಾಶ್ಮೀರದಲ್ಲಿ 17 ಮಂದಿ ಜೀವ ತೆಗೆದ ವಿಚಿತ್ರ ಕಾಯಿಲೆ ಕೇಸ್​ಗೆ ಟ್ವಿಸ್ಟ್.. ಬ್ಯಾಕ್ಟಿರಿಯಾನೂ ಅಲ್ಲ, ವೈರಸ್ಸೂ ಅಲ್ಲ..

author-image
Gopal Kulkarni
Updated On
ಜಮ್ಮು-ಕಾಶ್ಮೀರದಲ್ಲಿ 17 ಮಂದಿ ಜೀವ ತೆಗೆದ ವಿಚಿತ್ರ ಕಾಯಿಲೆ ಕೇಸ್​ಗೆ ಟ್ವಿಸ್ಟ್.. ಬ್ಯಾಕ್ಟಿರಿಯಾನೂ ಅಲ್ಲ, ವೈರಸ್ಸೂ ಅಲ್ಲ..
Advertisment
  • ಜಮ್ಮು ಕಾಶ್ಮೀರದಲ್ಲಿ ಆತಂಕ ಸೃಷ್ಟಿಸಿದ್ದ ವಿಚಿತ್ರ ಕಾಯಿಲೆ
  • ವಿಚಿತ್ರ ಕಾಯಿಲೆಯಿಂದ ಜೀವ ಬಿಟ್ಟಿದ್ದ ಒಟ್ಟು 17 ಜನರು
  • ಜೀವಹಾನಿಗೆ ಯಾವುದೇ ವೈರಸ್, ಬ್ಯಾಕ್ಟಿರಿಯಾ ಕಾರಣವಲ್ಲ!

ಜಮ್ಮು ಕಾಶ್ಮೀರದ ರಜೌರಿ ಜಿಲ್ಲೆಯಲ್ಲಿ ಆತಂಕ ಸೃಷ್ಟಿಸಿ 17 ಜನರ ಸಾವಿಗೆ ಕಾರಣವಾಗಿದ್ದ ವಿಚಿತ್ರ ಕಾಯಿಲೆಗೆ ಯಾವುದೇ ವೈರಸ್ ಅಥವಾ ಬ್ಯಾಕ್ಟಿರಿಯಾ ಕಾರಣವಲ್ಲ ಎಂದು ತಿಳಿದು ಬಂದಿದೆ. ಇತ್ತೀಚೆಗೆ ರಜೌರಿ ಜಿಲ್ಲೆಯಲ್ಲಿ ವಿಚಿತ್ರೆ ಕಾಯಿಲೆಯಿಂದ ನರಳಿ 17 ಜನರು ಪ್ರಾಣ ಬಿಟ್ಟಿದ್ದ ಆತಂಕಕ್ಕೆ ಕಾರಣವಾಗಿತ್ತು. ಯಾವುದೋ ಆಗಂತುಕ ವೈರಸ್ ಇಲ್ಲ ಬ್ಯಾಕ್ಟಿರಿಯಾದ ಪ್ರವೇಶ ಈ ಪ್ರದೇಶದಲ್ಲಾಗಿದೆ ಎಂದು ಊಹಿಸಲಾಗಿತ್ತು. ಆದ್ರೆ ಈಗ ತಜ್ಞರು ಹೇಳುವ ಪ್ರಕಾರ ಈ ಸಾವಿಗೆ ಯಾವುದು ಕಾರಣವಲ್ಲ. ಕ್ಯಾಮಿಯಮ್ ಟಾಕ್ಸಿನ್​ ಈ ಸಾವಿಗೆಲ್ಲಾ ಕಾರಣ ಎಂದು ಹೇಳಿದ್ದಾರೆ.

ಕೇಂದ್ರ ಸಚಿವ ಜಿತೇಂದ್ರ ಸಿಂಗ್​​ ಮಾಧ್ಯಮಗಳಿಗೆ ಹೇಳಿಕೆ ನೀಡಿದ ಪ್ರಕಾರ ವಿಚಿತ್ರ ಕಾಯಿಲೆಯಿಂದ ಜೀವ ಕಳೆದುಕೊಂಡವರ ದೇಹದ ಸ್ಯಾಂಪಲ್​ಗಳನ್ನು ಇಂಡಿಯನ್ ಇನ್​ಸ್ಟಿಟ್ಯೂಟ್ ಆಫ್​ ಟೆಕ್ಸಿಲಕೊಲಜಿ ರಿಸರ್ಚ್​​​ ಲಖನೌನಲ್ಲಿ ಪರೀಕ್ಷಿಸಲಾಗಿದೆ. ಸಾವನ್ನಪ್ಪಿದವರ ದೇಹದಲ್ಲಿ ಕ್ಯಾಡಮಿಯಮ್ ಎಂಬ ವಿಷ ಪತ್ತೆಯಾಗಿದೆ ಎಂದು ಹೇಳಿದ್ದಾರೆ. ಅದು ಮಾತ್ರವಲ್ಲದೇ ಈ ಸಾವುಗಳು ಯಾವುದೇ ಬ್ಯಾಕ್ಟಿರಿಯಾ ಅಥವಾ ವೈರಸ್​ನಿಂದ ಸಂಭವಿಸಿದ್ದಲ್ಲ ಎಂದು ವರದಿಲ್ಲಿ ಉಲ್ಲೇಖವಾಗಿದೆ ಕೂಡ ಸ್ಪಷ್ಟನೆ ನೀಡಿದ್ದಾರೆ.

ಇದನ್ನೂ ಓದಿ:ಜಮ್ಮು ಕಾಶ್ಮೀರದಲ್ಲಿ ಬೆಚ್ಚಿ ಬೀಳಿಸಿದ ನಿಗೂಢ ಕಾಯಿಲೆ; ವಿಚಿತ್ರ ರೋಗಕ್ಕೆ 17 ಮಂದಿ ದುರಂತ ಅಂತ್ಯ!

ಕ್ಯಾಡಮಿಯಮ್ ಟಾಕ್ಸಿನ್ ಯಾವ ರೂಪದಲ್ಲಿ ಬೇಕಾದರೂ ಮನುಷ್ಯನ ದೇಹವನ್ನು ಸೇರಬಹುದು. ಈ ಒಂದು ವಿಷ ಗಾಳಿಯ ಮೂಲಕ ಇಲ್ಲವೇ ನಾವು ಸೇವಿಸುವ ಆಹಾರ ಹಾಗೂ ನೀರಿನ ಮೂಲಕವೂ ಮನುಷ್ಯರ ದೇಹಕ್ಕೆ ಸೇರಿ ಸಾವಿಗೆ ಕಾರಣವಾಗಬಹುದು ಎಂದು ಹೇಳಲಾಗಿದೆ.

ಇದನ್ನೂ ಓದಿ:ನೋಡ ನೋಡುತ್ತಿದ್ದಂತೆ ಮತ್ತೊಂದು ಭಯಾನಕ ದರೋಡೆ.. ₹1 ಕೋಟಿ ಮೌಲ್ಯದ ಚಿನ್ನ ದೋಚಿ ಪರಾರಿ; ಆಗಿದ್ದೇನು?

ಕಳೆದ ವಾರವಷ್ಟೇ ಆರೋಗ್ಯ ತಜ್ಞರು ಈ ಸಾವುಗಳು ನ್ಯೂರೊಟಾಕ್ಸಿನ್​​ನಿಂದ ಆಗಿದೆ ಹೇಳಿದ್ದರು. ಮೃತರ ಎಲ್ಲರ ದೇಹದಲ್ಲಿಯೂ ಕೂಡ ಒಂದೇ ರೀತಿಯ ಕಂಡಿಷನ್​ಗಳು ಕಂಡು ಬಂದಿವೆ. ಮೆದುಳಿನಲ್ಲಿ ಬಾವು ಸೇರಿ ಹಲವು ಅಂಶಗಳು ಸಾಮ್ಯತೆಗಳನ್ನು ಹೊಂದಿವೆ. ಹೀಗಾಗಿ ಇದು ಯಾವುದೇ ವೈರಸ್​ನಿಂದ ಉಂಟಾದ ಸಾವಲ್ಲ ಎಂದು ಹೇಳಿದ್ದಾರೆ ರಜೌರಿಯ ಸರ್ಕಾರಿ ವೈದ್ಯಕೀಯ ಕಾಲೇಜಿನ ಪ್ರಾಂಶುಪಾಲರಾದ ಡಾ ಎ.ಎಸ್​. ಭಾಟಿಯಾ.

ಮೃತರಿಂದ ಪಡೆಯಲಾದ ಸ್ಯಾಂಪಲ್ಸ್​ಗಳನ್ನು ನ್ಯಾಷನಲ್ ಸೆಂಟರ್ ಆಫ್ ಡಿಸೀಸ್ ಕಂಟ್ರೋಲ್ ಹಾಗೂ ನ್ಯಾಷನಲ್ ಇನ್ಸ್​ಟಿಟ್ಯೂಟ್ ಆಫ್ ವೈರಾಲಾಜಿ ಪುಣೆಯಂತಹ ಟಾಪ್ ಲ್ಯಾಬರೋಟರಿಗಳಲ್ಲಿ ಪರೀಕ್ಷೆ ಮಾಡಲಾಗಿದೆ. ಈ ಎರಡು ಕಡೆ ಮೃತರ ದೇಹದಲ್ಲಿ ನ್ಯೂರೊಟಾಕ್ಸಿನ್ಸ್​ನಿಂದಾಗಿ ಬ್ರೇನ್ ಡ್ಯಾಮೇಜ್ ಆಗಿ ಸಾವು ಸಂಭವಿಸಿದ ಬಗ್ಗೆ ಸ್ಪಷ್ಟನೆ ಬಂದಿದೆ ಎಂದು ಭಾಟಿಯಾ ಹೇಳಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment