newsfirstkannada.com

×

ಸರ್ಕಾರಗಳ ಫ್ರೀ ಸ್ಕೀಮ್ಸ್​​ ವಿರುದ್ಧ ಇನ್ಫೋಸಿಸ್ ನಾರಾಯಣ ಮೂರ್ತಿ ಅಸಮಾಧಾನ

Share :

Published December 1, 2023 at 6:01am

Update December 1, 2023 at 6:08am

    ಫ್ರೀ ಕೊಟ್ರೆ, ಜನರಿಂದ ಸರ್ಕಾರಿ ಶಾಲೆಯ ಹಾಜರಾತಿ ಹೆಚ್ಚಿಸಬೇಕು

    ಬೆಂಗಳೂರು ಟೆಕ್ ಶೃಂಗಸಭೆಯಲ್ಲಿ ಮಾತಾಡಿದ ನಾರಾಯಣಮೂರ್ತಿ

    ಮಕ್ಕಳ ಹಾಜರಾತಿಯನ್ನು ಶೇಕಡಾ 20 ರಷ್ಟು ಹೆಚ್ಚಿಗೆ ಮಾಡಬಹುದು

ಬೆಂಗಳೂರು: ಸರ್ಕಾರಗಳ ಉಚಿತ ಯೋಜನೆಗಳಿಗೆ ಇನ್ಫೋಸಿಸ್​ ಸಹ ಸಂಸ್ಥಾಪಕ ನಾರಾಯಣಮೂರ್ತಿ ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.  ಸಬ್ಸಿಡಿ ದರದಲ್ಲಿ ಯೋಜನೆಗಳನ್ನು ಪಡೆಯುವ ಜನರು ಸಮಾಜಕ್ಕೆ ಮರಳಿ ಉತ್ತಮವಾದದ್ದನ್ನು ನೀಡಬೇಕು ಎಂದು ಹೇಳಿದ್ದಾರೆ.

2023ರ ಸಾಲಿನ 26ನೇ ಆವೃತ್ತಿಯ ಬೆಂಗಳೂರು ಟೆಕ್ ಶೃಂಗಸಭೆಯಲ್ಲಿ ಭಾಗವಹಿಸಿ ಮಾತನಾಡಿದ ನಾರಾಯಣ ಮೂರ್ತಿಯವರು, ದೇಶವು ಅಭಿವೃದ್ಧಿ ಹೊಂದಲು ಸಹಾನುಭೂತಿಯ ಬಂಡವಾಳಶಾಹಿ ಮಾತ್ರ ಪರಿಹಾರವಾಗಿದೆ.  ಜನರು ಸಬ್ಸಿಡಿ ದರದಲ್ಲಿ ಯೋಜನೆಗಳನ್ನು ಪಡೆದರೆ ಅದನ್ನು ಸಮಾಜಕ್ಕೆ ಮರಳಿ ನೀಡಬೇಕು. ಹೇಗೆಂದರೆ ರಾಜ್ಯ ಸರ್ಕಾರ ಫ್ರೀ ಕರೆಂಟ್ ನೀಡುತ್ತಿದೆ ಎಂದರೆ, ಜನರು ಸರ್ಕಾರಿ ಶಾಲೆಗಳಲ್ಲಿ ಮಕ್ಕಳ ಹಾಜರಾತಿಯನ್ನು ಶೇಕಡಾ 20 ರಷ್ಟು ಹೆಚ್ಚಿಗೆ ಮಾಡಬೇಕು. ಈ ರೀತಿಯಾಗಿ ಸಮಾಜಕ್ಕೆ ಜನರು ಕೊಡುಗೆ ನೀಡಬೇಕು ಎಂದು ಹೇಳಿದರು.

ನನ್ನ ಪ್ರಕಾರ ಯಾವುದನ್ನೂ ಉಚಿತವಾಗಿ ನೀಡಬಾರದು. ಇಲ್ಲಿ ಸರ್ಕಾರ ನೀಡುವ ಉಚಿತ ಯೋಜನೆಗಳನ್ನು ನಾನು ವಿರೋಧಿಸುವುದಿಲ್ಲ. ನಾನು ಬಡ ಕುಟುಂಬದಿಂದಲೇ ಬಂದಿದ್ದೇನೆ. ಅಲ್ಲಿಯ ಕಷ್ಟಗಳು ಗೊತ್ತು. ಉಚಿತ ಯೋಜನೆಗಳನ್ನು ಪಡೆಯುವ ಜನರಿಂದ ದೊಡ್ಡ ಮಟ್ಟದಲ್ಲಿ ಸರ್ಕಾರ ಏನಾನ್ನಾದರೂ ನಿರೀಕ್ಷಿಸಬೇಕು. ಮುಂದಿನ ಜನರೇಶನ್​ಗೆ ಅದು ಸಹಾಯಕವಾಗುವಂತೆ ಇರಬೇಕು ಎಂದಿದ್ದಾರೆ.

ಚೀನಾವು ನಮ್ಮಂತೆ ಸಮಸ್ಯೆಗಳನ್ನು ಹೊಂದಿದೆ. ಆದರೆ, ಅದು ನಮ್ಮ ದೇಶಕ್ಕಿಂತ ಹೆಚ್ಚು ಜಿಡಿಪಿ ಹೊಂದಿದೆ. ಇದನ್ನು ನಮ್ಮ ರಾಜಕೀಯ ನಾಯಕರು ಅರಿತು ಅಧ್ಯಯನ ಮಾಡಬೇಕು. ಆ ದೇಶದಿಂದ ನಾವು ಉತ್ತಮವಾದುದನ್ನು ಕಲಿತುಕೊಂಡು, ಅದನ್ನು ನಮ್ಮ ದೇಶದಲ್ಲಿ ಹೇಗೆ ಕಾರ್ಯಗತಗೊಳಿಸಬೇಕು ಎಂಬುದರ ಮೇಲೆ ರಾಜಕಾರಣಿಗಳು ಗಮನ ಹರಿಸಬೇಕು. ಆಗ ಮಾತ್ರ ಭಾರತ ಕೂಡ ಚೀನಾದಂತೆ ಅದೇ ವೇಗದಲ್ಲಿ ಅಭಿವೃದ್ಧಿ ಹೊಂದಲು ಸಾಧ್ಯ. ಇದರಿಂದ ದೇಶದಲ್ಲಿನ ಬಡತನವನ್ನು ಕಡಿಮೆ ಮಾಡಬಹುದು ಎಂದು ಇನ್ಫೋಸಿಸ್​ ಸಹ ಸಂಸ್ಥಾಪಕ ನಾರಾಯಣ ಮೂರ್ತಿಯವರು ಸಲಹೆ ನೀಡಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಸರ್ಕಾರಗಳ ಫ್ರೀ ಸ್ಕೀಮ್ಸ್​​ ವಿರುದ್ಧ ಇನ್ಫೋಸಿಸ್ ನಾರಾಯಣ ಮೂರ್ತಿ ಅಸಮಾಧಾನ

https://newsfirstlive.com/wp-content/uploads/2023/11/Narayana_Murthy_1.jpg

Load More