/newsfirstlive-kannada/media/post_attachments/wp-content/uploads/2025/07/TRAFFIC.jpg)
ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಪರ ವಾದಿಸುವ ವಕೀಲರೊಬ್ಬರು ಕೋರ್ಟ್​​ನಲ್ಲಿ ಆಡಿದ ಮಾತು ಈಗ ವಿವಾದಕ್ಕೆ ಕಾರಣವಾಗಿದೆ. ಕಳೆದ ತಿಂಗಳು ಮಧ್ಯಪ್ರದೇಶದ ಇಂದೋರ್- ದಿವಾಸ್ ರಾಷ್ಟ್ರೀಯ ಹೆದ್ದಾರಿಯಲ್ಲಿ ಭಾರಿ ಟ್ರಾಫಿಕ್ ಜಾಮ್ ಆಗಿತ್ತು. 8 ಕಿ.ಮೀ ಉದ್ದಕ್ಕೂ 40 ಗಂಟೆಗಳ ಕಾಲ ಹೆದ್ದಾರಿಯೇ ಜಾಮ್ ಆಗಿತ್ತು. ಇದರ ಪರಿಣಾಮವಾಗಿ ಮೂವರು ಪ್ರಯಾಣಿಕರು ಉಸಿರು ನಿಲ್ಲಿಸಿದ್ದರು. ಇವರ ಪೈಕಿ ಇಬ್ಬರು ಹಾರ್ಟ್ ಅಟ್ಯಾಕ್​​ನಿಂದ ಉಸಿರು ಚೆಲ್ಲಿದ್ರೆ, ಮತ್ತೊಬ್ಬರು ಆಸ್ಪತ್ರೆ ತಲುಪುವ ಮುನ್ನವೇ ನಿಧನರಾದರು.
/newsfirstlive-kannada/media/post_attachments/wp-content/uploads/2025/07/TRAFFIC_1.jpg)
ಜೂನ್ 27 ರಂದು ಆಗಿದ್ದ ಹೈವೇ ಜಾಮ್​​ನಲ್ಲಿ 4 ಸಾವಿರ ವಾಹನಗಳು ಹೆದ್ದಾರಿಯಲ್ಲೇ 40 ಗಂಟೆ ಸಿಲುಕಿಕೊಂಡಿದ್ದವು. ಈ ಬಗ್ಗೆ ಸಾರ್ವಜನಿಕರೊಬ್ಬರು ಹೈಕೋರ್ಟ್​ನಲ್ಲಿ ಪಿಐಎಲ್ ಸಲ್ಲಿಸಿದ್ದರು. ಪಿಐಎಲ್ ವಿಚಾರಣೆ ವೇಳೆ ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಪರ ವಿಚಾರಣೆಗೆ ಹಾಜರಾದ ವಕೀಲರು, ಹೆದ್ದಾರಿಯ ಟ್ರಾಫಿಕ್ ಜಾಮ್ ಕ್ಲಿಯರ್ ಮಾಡುವ ಬಗ್ಗೆ ವಾದಿಸಲಿಲ್ಲ. ಬದಲಿಗೆ ಜನರು ಏಕೆ ಬೆಳಗ್ಗೆ ಯಾವುದೇ ಕೆಲಸ ಇಲ್ಲದೇ ಮನೆಯಿಂದ ಹೆದ್ದಾರಿಗೆ ಬರಬೇಕು ಎಂದು ಕೇಳಿದ್ದರು. ಈ ವಾದಕ್ಕೆ ಜನರಿಂದ ತೀವ್ರ ವಿರೋಧ ವ್ಯಕ್ತವಾಯಿತು. ಜನರು ಯಾವಾಗ ಹೆದ್ದಾರಿಗೆ ಬರಬೇಕು, ಯಾವಾಗ ನಿರ್ಗಮಿಸಬೇಕು, ಯಾವಾಗ ಮನೆಯಲ್ಲಿ ಇರಬೇಕು ಎಂದು ಹೇಳಲು ಇವರಾರು? ಹೆದ್ದಾರಿ ಪ್ರಾಧಿಕಾರ ಹೆದ್ದಾರಿ ನಿರ್ಮಿಸಿರುವುದೇ ಜನರು ಓಡಾಡಲಿ ಎಂಬ ಉದ್ದೇಶದಿಂದ. ಹೆದ್ದಾರಿಯಲ್ಲಿ ಸಂಚರಿಸಲು ವಾಹನ ಮಾಲೀಕರು ಟೋಲ್ ಕೂಡ ಕಟ್ಟುತ್ತಾರೆ. ಹಾಗಿದ್ರೂ ಜನರು ಏಕೆ ಹೆದ್ದಾರಿಗೆ ಬರಬೇಕು ಎಂದು ಹೇಳುವ ಹಕ್ಕು ಎನ್‌ಎಚ್‌ಎಐಗೆ ಇಲ್ಲ ಎಂಬ ಟೀಕೆಗಳು ವ್ಯಕ್ತವಾದವು.
ಹೀಗೆ ಟೀಕೆಗಳು ವ್ಯಕ್ತವಾದ ವೇಳೆ ಎನ್‌ಎಚ್‌ಎಐ ಸ್ಪಷ್ಟನೆ ನೀಡಿದೆ. ಹೈಕೋರ್ಟ್​​ನಲ್ಲಿ ವಾದಿಸುವಾಗ, ವಕೀಲರು ವ್ಯಕ್ತಪಡಿಸಿದ ಈ ಅಭಿಪ್ರಾಯವು ಎನ್‌ಎಚ್‌ಎಐ ಅಭಿಪ್ರಾಯ ಅಲ್ಲ. ಇದು ಆ ವಕೀಲರ ವೈಯಕ್ತಿಕ ಅಭಿಪ್ರಾಯ. ಎನ್‌ಎಚ್‌ಎಐನ ಒಪ್ಪಿಗೆ ಪಡೆದು, ಈ ಹೇಳಿಕೆಯನ್ನು ಹೈಕೋರ್ಟ್​ನಲ್ಲಿ ನೀಡಿಲ್ಲ. ವಕೀಲರ ಆ ಮಾತು ಎನ್‌ಎಚ್‌ಎಐನ ಅಧಿಕೃತ ಹೇಳಿಕೆಯೂ ಅಲ್ಲ. ಈ ಬಗ್ಗೆ ವಾದಿಸಿದ ವಕೀಲರಿಗೆ ಷೋಕಾಸ್ ನೋಟೀಸ್ ನೀಡುತ್ತೇವೆ ಎಂದು ಎನ್‌ಎಚ್‌ಎಐ ಹೇಳಿದೆ.
ಇದನ್ನೂ ಓದಿ: ಹೈಕೋರ್ಟ್​​ನಲ್ಲಿ ಬ್ಯೂಟಿಗೆ ಭಾರೀ ಹಿನ್ನಡೆ.. ಜಾಕ್ವೆಲಿನ್ ಫರ್ನಾಂಡೀಸ್ ಅರ್ಜಿ ವಜಾ!
/newsfirstlive-kannada/media/post_attachments/wp-content/uploads/2025/07/TRAFFIC_2.jpg)
ಮತ್ತೊಂದೆಡೆ ಹೈಕೋರ್ಟ್​ನಲ್ಲಿ ಹೆದ್ದಾರಿ ಪ್ರಯಾಣಿಕರು ದಾಖಲಿಸಿರುವ ಪಿಐಎಲ್​ಗೆ ಸಂಬಂಧಿಸಿದಂತೆ ಇಂದೋರ್ ಪೀಠವು, ದೆಹಲಿ ಎನ್‌ಎಚ್‌ಎಐ, ಇಂದೋರ್ ಎನ್‌ಎಚ್‌ಎಐ, ಕೇಂದ್ರದ ಹೆದ್ದಾರಿ ಮತ್ತು ಸಾರಿಗೆ ಇಲಾಖೆ, ಇಂದೋರ್ ಜಿಲ್ಲಾಧಿಕಾರಿ, ಸಿಟಿ ಪೊಲೀಸ್ ಕಮೀಷನರ್​​ಗೆ ನೋಟೀಸ್ ನೀಡಿದೆ. ಜೊತೆಗೆ ಹೆದ್ದಾರಿ ನಿರ್ಮಾಣ ಮಾಡಿದ ಕಂಪನಿ, ಟೋಲ್ ಕಂಪನಿಗಳಿಗೂ ನೋಟೀಸ್ ನೀಡಿದೆ. ಈ ಭಾರಿ ಟ್ರಾಫಿಕ್ ಜಾಮ್ ಬಗ್ಗೆ 7 ದಿನಗಳಲ್ಲಿ ಉತ್ತರಿಸಬೇಕು, ಮುಂದೆ ಈ ರೀತಿಯ ಟ್ರಾಫಿಕ್ ಜಾಮ್ ಮರು ಕಳಿಸದಂತೆ ಮುನ್ನೆಚ್ಚರಿಕೆ ವಹಿಸಬೇಕೆಂದು ಸೂಚಿಸಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us