ರೋಚಕ ಚೇಸಿಂಗ್​ನಲ್ಲಿ ಮಿಸ್​​ ಆಗಿದ್ದ ಪಾತಕಿ ಲಾಕ್.. ಇಸಾಕ್​ಗೆ ಬುಲೆಟ್​ ರುಚಿ ತೋರಿಸಿದ ಪೊಲೀಸರು

author-image
Bheemappa
Updated On
ರೋಚಕ ಚೇಸಿಂಗ್​ನಲ್ಲಿ ಮಿಸ್​​ ಆಗಿದ್ದ ಪಾತಕಿ ಲಾಕ್.. ಇಸಾಕ್​ಗೆ ಬುಲೆಟ್​ ರುಚಿ ತೋರಿಸಿದ ಪೊಲೀಸರು
Advertisment
  • ನಕರಾ ಮಾಡಿದ ಇಸಾಕ್​​​ಗೆ ಗುರಿ ಇಟ್ಟು ಹೊಡೆದೇ ಬಿಟ್ಟರು ಪೊಲೀಸರು
  • ಕುಂಜಿಬೆಟ್ಟುವಿನ ರಸ್ತೆಯಲ್ಲೇ 2 ತಂಡಗಳ ಮಧ್ಯೆ ನಡೆದಿದ್ದ ತಲ್ವಾರ್ ಕಾಳಗ
  • ಮೂತ್ರದ ನೆಪ ಮಾಡಿ ಇಳಿದವನು ಎಸ್ಕೇಪ್ ಆಗಲು ಪ್ಲಾನ್ ಮಾಡಿದ್ದನು

ಹಾಲು ಕುಡಿದ ಮಕ್ಕಳೇ ಬದುಕಲ್ಲ. ಮೈತುಂಬ ಪಾಪ ಮಾಡಿಕೊಂಡವರು ಬದುಕುತ್ತಾವಾ?. ಕರಾವಳಿಯ ಗರುಡಾ ಗ್ಯಾಂಗ್​​​ ಹೆಸರು ಕೇಳಿದ್ದೀರಿ ಅನ್ಸತ್ತೆ. ಬೀದಿ ಬೀದಿಯಲ್ಲೇ ಗ್ಯಾಂಗ್​​ವಾರ್​​​. ನಟ್ಟನಡು ರಸ್ತೆಯಲ್ಲೇ ರಕ್ತದ ಹರಿದಾಟ. ಅಂಥ ಭಯಾನಕ, ನಟೋರಿಯಸ್​​ ಗ್ಯಾಂಗ್​ ಇದು. ಮೊನ್ನೆ ಇಸಾಕ್​​ ಜಸ್ಟ್​ ಮಿಸ್​​ ಆಗಿದ್ದ. ಆದ್ರೆ, ನಿನ್ನೆ ನಸೀಬು ಕೆಟ್ಟಿತ್ತು, ಪೊಲೀಸರ ಗುಂಡೇಟಿನಿಂದ ಕಾಲಿಗೆ ಗಂಭೀರವಾದ ಗಾಯವಾಗಿದೆ.

ಇವನ ಹೆಸರು ಇಸಾಕ್​​. ಕರಾವಳಿಯಲ್ಲಿ ರಕ್ತಾರ್ಚನೆ ಮಾಡುವ ಗರುಡ ಗ್ಯಾಂಗ್​ನ ಸದಸ್ಯ. ಇವನ ಬಯೋಡೇಟಾ ಮಾತ್ರ ಭಯಾನಕವಾಗಿದೆ. ಡ್ರಗ್ಸ್, ರೌಡಿಸಂ, ಗ್ಯಾಂಗ್​ವಾರ್​ ಈ ಗ್ಯಾಂಗ್​​​ನ ಹಾಬಿ. ಆವತ್ತು ಈ ಹಬಿಬಿ ಮೈಮೇಲೆ ಧೂಮ್​​ ದೆವ್ವ ಮೆಟ್ಕೊಂಡಂತೆ ಆಡಿದ್ದ. ಜೀಪ್​​ನಲ್ಲಿ ಪರಾರಿ ಆಗ್ತಿದ್ದಾಗ ರೋಚಕ ಚೇಸಿಂಗ್​ನಲ್ಲಿ ಜಸ್ಟ್​​ ಮಿಸ್​​​ ಆಗಿದ್ದ. ಆದ್ರೆ, ಹಾಸನ ಬಳಿ ಇಸಾಕ್​​ ನಸೀಬು ಕೆಟ್ಟಿತ್ತು.

publive-image

ನಟೋರಿಯಸ್ ಗರುಡ ಗ್ಯಾಂಗ್ ಇಸಾಕ್​​​ನ ಕಾಲು ಸೀಳಿದ ಗುಂಡು

ಆ ಘಟನೆ ನಡೆದು 7 ದಿನ ಕಳೆದಿತ್ತಷ್ಟೇ, ಈ ನಟೋರಿಯಸ್ ಇಸಾಕ್​ ಮತ್ತೆ ಕಿಡಿಗೇಡಿತನ ಮೆರೆದಿದ್ದ. ಆವತ್ತು ತಪ್ಪಿಸಿಕೊಂಡು ಎಸ್ಕೇಪ್ ಆಗಿದ್ದ ಇಸಾಕ್, ಹಾಸನದಲ್ಲಿ ಲಾಕ್​​​ ಆಗಿದ್ದ. ಅಲ್ಲಿಂದ ಕರೆತರುವಾಗ ಹಿರಿಯಡ್ಕ್​​​ ಬಳಿ ಮೂತ್ರದ ನೆಪವೊಡ್ಡಿ ಇಳಿದವನು ಕಲ್ಲು ತೂರಿದ್ದ. ಅರೇ ಇಸ್ಕಿ ಅಂದವ್ರೇ ಪೊಲೀಸರು, ಗನ್​​ಗೆ ಕೆಲಸ ಕೊಟ್ಟಿದ್ದರು. ಡಬ್​​​ ಡಬ್​​ ಅಂತ ಮಾತು ಆರಂಭಿಸಿದ ಬುಲೆಟ್​​​, ಸೀದಾ ಇಸಾಕ್​​​ನ ಕಾಲೊಳಗೆ ಹೋಗಿ ಬಿಟ್ಟಿವೆ. ಮಣಿಪಾಲ ಕೆಎಂಸಿಯಲ್ಲಿ ಕಾಲಿಗೆ ಚಿಕಿತ್ಸೆ ಕೊಡಿಸಲಾಗುತ್ತಿದೆ.

ಇದನ್ನೂ ಓದಿ:ಉಡುಪಿಯಲ್ಲಿ ನೆಲಮಂಗಲ ಪೊಲೀಸರು ಚೇಸಿಂಗ್.. ನಡು ರಸ್ತೆಯಲ್ಲಿ ಸಿನಿಮಾವನ್ನೂ ಮೀರಿಸಿದ ರೋಚಕ ಫೈಟಿಂಗ್!

publive-image

ಇಸಾಕ್​ನ​ ಭಯಾನಕ ಬಯೋಡಾಟ!

  • ಕರಾವಳಿಯಲ್ಲಿ ನಟೋರಿಯಸ್ ಗ್ಯಾಂಗ್ ಆಗಿರೋ ಗರುಡ ಗ್ಯಾಂಗ್
  • ಡ್ರಗ್ಸ್, ರೌಡಿಸಂ, ಗ್ಯಾಂಗ್​​ವಾರ್ ಮೂಲಕ ಪಾತಕಲೋಕದಲ್ಲಿ ಅಟ್ಟಹಾಸ
  • ಕಳೆದ ವರ್ಷ ಉಡುಪಿಯಲ್ಲಿ ನಡೆದಿದ್ದ ತಲ್ವಾರ್ ಕಾಳಗದಲ್ಲೂ ಆತ ಭಾಗಿ
  • ಕುಂಜಿಬೆಟ್ಟುವಿನ ರಸ್ತೆಯಲ್ಲೇ 2 ತಂಡಗಳ ಮಧ್ಯೆ ನಡೆದಿದ್ದ ತಲ್ವಾರ್ ಕಾಳಗ
  • ಇಡೀ ರಾಜ್ಯವೇ ಬೆಚ್ಚಿ ಬಿದ್ದಿದ್ದ ಪ್ರಕರಣ, ಅಂದು ಮಿಸ್ ಆದವ ನಿನ್ನೆ ಲಾಕ್
  • ಆರೋಪಿಗಾಗಿ ತೀವ್ರ ಶೋಧ ನಡೆಸಿದ್ದ ಉಡುಪಿ, ಮಣಿಪಾಲ ಪೊಲೀಸರು

ವಾಂಟೆಂಡ್ ಲಿಸ್ಟ್​​ನಲ್ಲಿದ್ದ ಪಾತಕಿ ಆವತ್ತು ರಣರೋಚಕ ಚೇಸಿಂಗ್​ನಲ್ಲಿ ಮಿಸ್​​ ಆಗಿದ್ದ. ಈಗ ಹಾಸನದಲ್ಲಿ ಸಿಕ್ಕಿಬಿದ್ದ ಪಾತಕಿಯನ್ನ ಪೊಲೀಸರು ಹೆಡೆಮುರಿಕಟ್ಟಿದ್ದಾರೆ..

ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment