ಉಡುಪಿಯಲ್ಲಿ ನೆಲಮಂಗಲ ಪೊಲೀಸರು ಚೇಸಿಂಗ್.. ನಡು ರಸ್ತೆಯಲ್ಲಿ ಸಿನಿಮಾವನ್ನೂ ಮೀರಿಸಿದ ರೋಚಕ ಫೈಟಿಂಗ್!

author-image
Ganesh
Updated On
ಉಡುಪಿಯಲ್ಲಿ ನೆಲಮಂಗಲ ಪೊಲೀಸರು ಚೇಸಿಂಗ್.. ನಡು ರಸ್ತೆಯಲ್ಲಿ ಸಿನಿಮಾವನ್ನೂ ಮೀರಿಸಿದ ರೋಚಕ ಫೈಟಿಂಗ್!
Advertisment
  • ನಟೋರಿಯಸ್​ ಜೊತೆ ಇದ್ದಳು ಓರ್ವ ಸುಂದರಿ
  • ನೆಲಮಂಗಲ ಪೊಲೀಸರು ಉಡುಪಿಗೆ ಯಾಕೆ ಬಂದಿದ್ರು?
  • ನಿಮ್ಗೆ ನಟೋರಿಯಸ್ ಗರುಡ ಗ್ಯಾಂಗ್ ಬಗ್ಗೆ ಗೊತ್ತಾ..?

ಓರ್ವ ಕ್ರಿಮಿನಲ್​ನ ಹೆಡೆಮುರಿ ಕಟ್ಟಲು ನೆಲಮಂಗಲ ಪೊಲೀಸರು ಉಡುಪಿಗೆ ಬಂದಿದ್ದರು. ಅಂದುಕೊಂಡಂತೆ ಆ ನಟೋರಿಯಸ್ ಪೊಲೀಸರ ಕಣ್ಣಿಗೆ ಬಿದ್ದ. ಇನ್ನೇನು ಹಿಡಿದೇ ಬಿಟ್ರು ಅನ್ನುವಷ್ಟರಲ್ಲಿ ಆರೋಪಿ ಅಲ್ಲಿಂದ ಕಾಲ್ಕಿತ್ತಿದ್ದಾನೆ. ನಂತರ ಆಗಿದ್ದು ಸಿನಿಮಾವನ್ನೂ ಮೀರಿಸೋ ರೋಚಕ ಚೇಸಿಂಗ್. ಈ ವೇಳೆ ಕಿರಾತಕ ಮಾಡಿದ ಅನಾಹುತಗಳು ಅಷ್ಟಿಷ್ಟಲ್ಲ!

ಸ್ಥಳ: ಮಣಿಪಾಲ..

ಪ್ರಕರಣ ಒಂದಕ್ಕೆ ಸಂಬಂಧಿಸಿ ಬೆಂಗಳೂರಿನಿಂದ ಬಂದಿದ್ದ ಪೊಲೀಸರು, ಮಣಿಪಾಲದಲ್ಲಿ ಆರೋಪಿಯನ್ನು ಪತ್ತೆ ಹಚ್ಚಿ ಬಂಧಿಸಲು ಮುಂದಾಗಿದ್ದಾರೆ. ವಿಷಯ ಗೊತ್ತಾಗುತ್ತಿದ್ದಂತೆಯೇ ಕ್ರಿಮಿನಲ್ ಅಲ್ಲಿಂದ ಎಸ್ಕೇಪ್ ಆಗಿದ್ದಾನೆ. ಪೊಲೀಸರಿಂದ ತಪ್ಪಿಸಿಕೊಳ್ಳಲು ಮನಬಂದಂತೆ ಕಾರು ಓಡಿಸಿದ್ದಾರೆ. ಬೇತಾಳದಂತೆ ಕಾಡಿದ ಪೊಲೀಸರಿಗೆ ಚಳ್ಳೆ ಹಣ್ಣು ತಿನ್ನಿಸಲು ಯತ್ನಿಸುತ್ತಾನೆ. ಕೂಡಲೇ ಅಲರ್ಟ್ ಆದ ನೆಲಮಂಗಲ ಪೊಲೀಸರು, ಸ್ಥಳೀಯ ಮಣಿಪಾಲ ಪೊಲೀಸರಿಗೆ ವಿಷಯ ತಿಳಿಸುತ್ತಾರೆ. ಅಲ್ಲಿಗೆ ಎಂಟ್ರಿಯಾಗಿದ್ದೇ, ಇನ್ಸ್​​ಪೆಕ್ಟರ್ ದೇವರಾಜ್ ನೇತೃತ್ವದ ಮಣಿಪಾಲ ಟೀಂ.

ಇದನ್ನೂ ಓದಿ: ಆಫ್ರಿಕಾದ 27 ವರ್ಷದ ಕನಸು.. ಕಿವೀಸ್​ ಸೋಲಿಸಿ ಟೀಮ್ ಇಂಡಿಯಾ ಜೊತೆ ಫೈನಲ್ ಫೈಟ್ ಮಾಡುತ್ತಾ?

publive-image

4 ಕಾರು, ಒಂದು ಬೈಕ್​..

ಪೊಲೀಸರು ಬೆನ್ನು ಬಿದ್ದಿರೋದು ಗೊತ್ತಾಗುತ್ತಿದ್ದಂತೆಯೇ ಮನಸೋ ಇಚ್ಛೆ ನಟೋರಿಯಸ್ ತನ್ನ ಕಾರನ್ನು ಓಡಿಸಿದ್ದಾನೆ. ಎದುರಿಗೆ ಸಿಕ್ಕ, ಸಿಕ್ಕ ವಾಹನಗಳಿಗೆ ಬೇಕು ಅಂತಲೇ ಅಪಘಾತ ಮಾಡಿದ್ದಾನೆ. ಸರಣಿ ಅಪಘಾತ ಮಾಡಿ ಪರಾರಿ ಆಗಲು ಯತ್ನಿಸಿದ್ದಾನೆ. ನಾಲ್ಕು ಕಾರು ಹಾಗು ಒಂದು ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದಿದ್ದಾನೆ. ಕೊನೆಗೂ ಪೊಲೀಸರು, ಮಣಿಪಾಲದ ಮಣ್ಣ ಪಳ್ಳದ ಬಳಿ ಕುಖ್ಯಾತ ವ್ಯಕ್ತಿಯನ್ನ ಬಂಧಿಸಿದ್ದಾರೆ.

ಇದನ್ನೂ ಓದಿ: ಮದುವೆಯಾದ 3 ತಿಂಗಳಿಗೆ ಸ್ಮಗ್ಲಿಂಗ್; ರನ್ಯಾ ರಾವ್‌ ಬಳಿ ಸಿಕ್ಕ ಚಿನ್ನ ಎಷ್ಟು? ಬೆಂಗಳೂರು ಇತಿಹಾಸದಲ್ಲೇ ಇದು ದಾಖಲೆ!

publive-image

ಯಾರು ಆತ..?

ಪೊಲೀಸರು ಬಂಧಿಸಿದ ಆರೋಪಿ ಹೆಸರು ಇಸ್ಸಾಕ್. ಈತ ಬೇರೆ ಯಾರೂ ಅಲ್ಲ. ಕುಖ್ಯಾತ ಗರುಡ ಗ್ಯಾಂಗ್​​ನ ಸದಸ್ಯ. ಈ ಗರುಡ ಗ್ಯಾಂಗ್ ಕರಾವಳಿಯ ನಟೋರಿಯಸ್ ಗ್ಯಾಂಗ್. ಡ್ರಗ್ಸ್, ರೌಡಿಸಂ, ಗ್ಯಾಂಗ್ ವಾರ್ ಮೂಲಕ ಪಾತಕ ಲೋಕದಲ್ಲಿ ಅಟ್ಟಹಾಸ ಮೆರೆಯುತ್ತಿದೆ. ಕಳೆದ ವರ್ಷ ಉಡುಪಿಯಲ್ಲಿ ನಡೆದಿದ್ದ ತಲ್ವಾರ್ ಕಾಳಗದಲ್ಲೂ ಇದೇ ಗ್ಯಾಂಗ್ ಭಾಗಿಯಾಗಿತ್ತು. ಉಡುಪಿಯ ಕುಂಜಿಬೆಟ್ಟುವಿನ ನಡು ರಸ್ತೆಯಲ್ಲಿ ತಲ್ವಾರ್ ಬೀಸಿ ಅಟ್ಟಹಾಸ ಮೆರೆದಿತ್ತು. ಈ ಪ್ರಕರಣ ಇಡೀ ರಾಜ್ಯವನ್ನೇ ಬೆಚ್ಚಿ ಬೀಳಿಸಿತ್ತು.

ಇದನ್ನೂ ಓದಿ: KSRTC, BMTC, ಮೆಟ್ರೋ ಟಿಕೆಟ್ ಬೆಲೆ ಹೆಚ್ಚಳ ಬೆನ್ನಲ್ಲೇ ಆಟೋ ಮೀಟರ್ ದರ ಏರಿಕೆ.. ಯಾವಾಗಿಂದ?

publive-image

ಅಂದು ಮಿಸ್ ಇಂದು ಪತ್ತೆ..

ಅಂದು ಮಿಸ್ ಆಗಿದ್ದ ಇಸ್ಸಾಕ್ ಇಂದು ಪತ್ತೆಯಾಗಿದ್ದಾನೆ. ತಲ್ವಾರ್ ಪ್ರಕರಣದಲ್ಲಿ ಇಸ್ಸಾಕ್​ಗಾಗಿ ಉಡುಪಿ ಮತ್ತು ಮಣಿಪಾಲ ಪೊಲೀಸರು ತೀವ್ರ ಹುಡುಕಾಟ ನಡೆಸಿದ್ದರು. ಆದರೆ ಎಲ್ಲಿಯೂ ಸಿಕ್ಕಿರಲಿಲ್ಲ. ಈಗ ನೆಲಮಂಗಲ ಪೊಲೀಸರ ಕಾರ್ಯಾಚರಣೆ ವೇಳೆ ಇಸ್ಸಾಕ್ ಬಂಧನ ಆಗಿದೆ. ಇಸ್ಸಾಕ್ ಇದ್ದ ಕಾರಿನಲ್ಲಿ ಓರ್ವ ಯುವತಿ ಕೂಡ ಇದ್ದಳು ಎಂಬ ವಿಚಾರ ಬೆಳಕಿಗೆ ಬಂದಿದೆ. ಚೇಸಿಂಗ್ ವೇಳೆ ಎರಡು ಪೊಲೀಸ್ ವಾಹನಗಳು ಜಖಂ ಆಗಿವೆ.

ಇದನ್ನೂ ಓದಿ:ನಿದ್ದೆ ಮಾತ್ರೆ ನುಂಗಿ 2 ದಿನ ಮನೆಯಲ್ಲೇ ಲಾಕ್ ಆಗಿದ್ದ ಖ್ಯಾತ ಹಿನ್ನೆಲೆ ಗಾಯಕಿ ಕಲ್ಪನಾ; ಆಗಿದ್ದೇನು?

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment