/newsfirstlive-kannada/media/post_attachments/wp-content/uploads/2025/03/KUNIGAL-GIRI-ARREST.jpg)
ಕುಖ್ಯಾತ ರೌಡಿಶೀಟರ್ ಕುಣಿಗಲ್ ಗಿರಿಯನ್ನು ಬಲೆಗೆ ಕೆಡುವುವಲ್ಲಿ ಬ್ಯಾಡರಹಳ್ಳಿ ಪೊಲೀಸರು ಯಶಸ್ವಿಯಾಗಿದ್ದಾರೆ. ಬೆಂಗಳೂರಿನ ಮೋಸ್ಟ್ ವಾಂಟೆಂಡ್ ರೌಡಿ ಶೀಟರ್ನನ್ನು ಕೊನೆಗೆ ಬಲೆಗೆ ಬೀಳಿಸಿದ್ದಾರೆ ಬೆಂಗಳೂರು ಪೊಲೀಸರು.
ಕಳೆದ ಎರಡು ಮೂರು ತಿಂಗಳಿನಿಂದ ಬ್ಯಾಡರಹಳ್ಳಿ ವ್ಯಾಪ್ತಿಯಲ್ಲಿ ಗಿರಿ ಬಾಡಿಗೆ ಮನೆ ಮಾಡಿಕೊಂಡಿದ್ದ. ಇದರ ಖಚಿತ ಮಾಹಿತಿ ಪಡೆದ ಬ್ಯಾಡರಹಳ್ಳಿ ಪೊಲೀಸರು ಪರಿಶೀಲನೆಗೆ ತೆರಳಿದ್ದರು. ಈ ವೇಳೆ ಕುಣಿಗಲ್ ಗಿರಿ ಹಾಗೂ ಆತನ ಸಹಚರ ಹರೀಶ್ ಇರುವುದು ಕಂಡು ಬಂದಿದೆ. ಇಬ್ಬರಿಂದಲೂ ಕೂಡ ಪೊಲೀಸರ ಮೇಲೆಗೆ ಹಲ್ಲೆಗೆ ಯತ್ನ ನಡೆದಿದೆ.
ಇದನ್ನೂ ಓದಿ:ಕಾಂತಾರ2 ರಿಲೀಸ್ಗೂ ಮುನ್ನ ದೇವರ ಮೊರೆ; ಕೊರಗಜ್ಜನಿಗೆ ರಿಷಬ್ ಶೆಟ್ಟಿ ಏನೆಲ್ಲ ಕೊಟ್ರು?
ಎಲ್ಲೂ ನನ್ನನ್ನು ಇರೋಕೆ ಬಿಡಲ್ಲ ನಾನು ಇಲ್ಲೇ ಇರ್ತೀನಿ ಅಂತ ಪೊಲೀಸರ ಹತ್ರ ರೌಡಿಶೀಟರ್ ಕುಣಿಗಲ್ ಗಿರಿ ಗಲಾಟೆ ಮಾಡಿದ್ದಾನೆ. ಆದರು ಕೂಡ ಆತನನ್ನು ಹಾಗೂ ಆತನ ಸಹಚರ ಹರೀಶ್ನನ್ನು ಬಂಧಿಸಿ ಬ್ಯಾಡರಗಳ್ಳಿ ಪೊಲೀಸ್ ಠಾಣೆಗೆ ಎಳೆದುಕೊಂಡು ಬಂದಿದ್ದಾರೆ ಪೊಲೀಸರು.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ