newsfirstkannada.com

ವಿರಾಟ್​ ಕೊಹ್ಲಿಗೆ ಸಿಕ್ಕ ಹೊಸ ಫ್ರೆಂಡ್‌.. ಯಾರು ಈ ಲೆಜೆಂಡರಿ ಪ್ಲೇಯರ್‌? ಇವರಿಬ್ಬರ ಗೆಳೆತನವೇ ಸೂಪರ್!

Share :

Published January 15, 2024 at 1:14pm

  ಕಿಂಗ್​ ಕೊಹ್ಲಿಯ ಹೊಸ ಫ್ರೆಂಡ್ ಯಾರು, ಇವರು ಟೆನ್ನಿಸ್ ಪ್ಲೇಯರ್​?

  ‘ಪ್ರೊಫೈಲ್​​ ನೋಡಿ ಮೆಸೇಜ್​ ಬಟನ್ ಮೇಲೆ ಕ್ಲಿಕ್ ಮಾಡಿದೆ ನಾನು’

  80 ಸೆಂಚುರಿಗಳ ಒಡೆಯ ಕೊಹ್ಲಿ ಹಾಗೂ 24 ಗ್ರ್ಯಾನ್ ಸ್ಲಾಮ್​​​ ಒಡೆಯ?

ಎಬಿ ಡಿವಿಲಿಯರ್ಸ್ ಅಂತಾ ಬೆಸ್ಟ್​ ಫ್ರೆಂಡ್​ ವಿರಾಟ್​​ ಕೊಹ್ಲಿಗೆ ಮತ್ತೆ ಸಿಗಲ್ಲ ಅನ್ನೋದು ಕ್ರಿಕೆಟ್​ ಲೋಕದಲ್ಲಿರೋ ಮಾತು. ಆ ಮಾತು ಸತ್ಯವೇ ಬಿಡಿ. ಆದ್ರೆ, ಸೆಂಚುರಿ ಸಾಮ್ರಾಟನಿಗೆ ಕ್ರಿಕೆಟ್​ ಅಂಗಳವನ್ನ ದಾಟಿದ ಸ್ನೇಹಿತನಿದ್ದಾನೆ. ಆತ ಅಂತಿಂಥಾ ಗೆಳೆಯನಲ್ಲ, ಟೆನಿಸ್​​​​​​​ ಲೋಕದ ಭೀಷ್ಮ. ಆತನದ್ದು ಕೊಹ್ಲಿಯದ್ದು ವಿಶೇಷ ಬಂಧ. ಅಷ್ಟಕ್ಕೂ ಆ ಸ್ಟಾರ್ ಯಾರು?

ವಿರಾಟ್ ಕೊಹ್ಲಿ ಬರೀ ನೇಮ್​ & ಫೇಮ್​ ನಿಂದಲೇ ಸದ್ದು ಮಾಡಿದ ಲೆಜೆಂಡ್ರಿ ಆಟಗಾರನಲ್ಲ. ಎಲ್ಲ ಸಂಬಂಧಕ್ಕಿಂತ ಶ್ರೇಷ್ಠ ಸ್ನೇಹ ಸಂಬಂಧಗಳನ್ನ ಸಂಪಾದಿಸಿದ್ದಾರೆ. ಎಬಿ ಡಿವಿಲಿಯರ್ಸ್​ ಜೊತೆಗಿನ ಆತ್ಮೀಯ ಫ್ರೆಂಡ್​ಶಿಪ್​​ ಅದಕ್ಕೆ ಹಿಡಿದ ಕೈಗನ್ನಡಿ. ಕ್ರಿಕೆಟ್​ನಲ್ಲಿ ಸ್ನೇಹ ಅಂತ ಬಂದ್ರೆ ಕೊಹ್ಲಿ-ಎಬಿಡಿ ಥಟ್ಟನೇ ನೆನಪಾಗ್ತಾರೆ. ಆ ಮಟ್ಟಿಗೆ ಇಬ್ಬರದ್ದು ಗಾಢವಾದ ಫ್ರೆಂಡ್​ಶಿಪ್​​​.

ಕ್ರಿಕೆಟ್​ ಅಂಗಳದಲ್ಲಿ ಎಬಿ ಡಿವಿಲಿಯರ್ಸ್​, ಎಮ್​​.ಎಸ್​ ಧೋನಿ ಹೀಗೆ ಹಲವರು ಕಿಂಗ್​ ಕೊಹ್ಲಿಯ ಆಪ್ತ ಗೆಳೆಯರ ಲಿಸ್ಟ್​ನಲ್ಲಿದ್ದಾರೆ. ಇದೀಗ ಕ್ರಿಕೆಟ್​ನ ಹೊರತಾಗಿ ಮತ್ತೊಬ್ಬ ದಿಗ್ಗಜ ಗೆಳೆಯ ಫ್ರೆಂಡ್​ಶಿಪ್​ ಅನ್ನ ಕೊಹ್ಲಿ ರಿವೀಲ್​ ಮಾಡಿದ್ದಾರೆ.

ಟೆನಿಸ್​ ದಂತಕಥೆ ಜೊಕೊವಿಚ್​​ ಕೊಹ್ಲಿಯ ಹೊಸ ಫ್ರೆಂಡ್​​..!

ಕ್ರೀಡೆ ಗಡಿ, ಭಾಷೆಗೂ ಮೀರಿದ್ದು ಅನ್ನೋ ಮಾತು ಕ್ರಿಕೆಟ್​ ಸಾಮ್ರಾಟ ವಿರಾಟ್ ಕೊಹ್ಲಿ ಹಾಗೂ ಟೆನಿಸ್​​​ ಲೆಜೆಂಡ್​ ನೊವಾಕ್ ಜೊಕೊವಿಚ್​ ವಿಚಾರದಲ್ಲಿ ಪ್ರೂವ್ ಆಗಿದೆ. 80 ಸೆಂಚುರಿಗಳ ಒಡೆಯ ಕೊಹ್ಲಿ ಹಾಗೂ 24 ಗ್ರ್ಯಾನ್ ಸ್ಲಾಮ್​​​ ಒಡೆಯ ಜೊಕೊವಿಕ್​ ನಡುವೆ ಸ್ನೇಹ ಚಿಗುರೊಡೆದಿದೆ. ಅಂದಹಾಗೇ ಇಬ್ಬರ ನಡುವಿನ ಗೆಳೆತನಕ್ಕೆ ಮುದ್ರೆ ಒತ್ತಿದ್ದೆ ರನ್ ಮಾಸ್ಟರ್ ವಿರಾಟ್ ಕೊಹ್ಲಿ. ಅದೇಗೆ ಅನ್ನೋದನ್ನ ಕೊಹ್ಲಿ ಬಾಯಿಂದಲೇ ಕೇಳಿ.

ಇನ್​ಸ್ಟಾಗ್ರಾಮ್​ನಲ್ಲಿ ನೊವಾಕ್ ಜೊಕೊವಿಚ್​​​​​​ ಪ್ರೊಫೈಲ್​​ ನೋಡಿ ಮೆಸೆಜ್​ ಬಟನ್ ಮೇಲೆ ಕ್ಲಿಕ್ ಮಾಡಿದೆ. ನನಗೆ ಮೆಸೇಜ್ ಮಾಡಬೇಕು ಅನ್ನಿಸಿತ್ತು. ಆದ್ರೆ ನೋಡಿದ್ರೆ, ಅವರೇ ನನಗೆ ನೇರವಾಗಿ ಮೆಸೇಜ್ ಕಳುಹಿಸಿದ್ದರು. ಆರಂಭದಲ್ಲಿ ಅದನ್ನ ಓಪನ್ ಮಾಡಿರಲಿಲ್ಲ. ಕೊನೆಗೆ ಮೊದಲ ಬಾರಿ ನನಗೆ ಬಂದ ಮೆಸೆಜ್​​​​ ಓಪನ್ ಮಾಡಿದೆ. ಜೊಕೊವಿಚ್​ ಮೆಸೇಜ್ ಮಾಡಿದ್ರು. ಮೊದಲಿಗೆ ಇದು ಫೇಕ್ ಅಕೌಂಟ್​ ಇರಬಹುದು ಎಂದು ಭಾವಿಸಿದ್ದೆ. ಮತ್ತೊಮ್ಮೆ ಚೆಕ್ ಮಾಡಿದೆ. ಅದು ಅವರದ್ದೇ ಆಗಿತ್ತು. ಬಳಿಕ ಪರಸ್ಪರ ಮಾತನಾಡಲು ಶುರು ಮಾಡಿದೆವು.

ವಿರಾಟ್ ಕೊಹ್ಲಿ, ಕ್ರಿಕೆಟಿಗ

ಇನ್ನು ಕಿಂಗ್ ಕೊಹ್ಲಿಯಂತ ಸೂಪರ್​​ ಸ್ಟಾರ್ ಗೆಳೆಯನಾಗಿ ಸಿಕ್ಕಿದ್ದಕ್ಕೆ ನೊವಾಕ್​ ಜೊಕೊವಿಚ್​​​ರ ಸಂಭ್ರಮ ಹೇಳತೀರದು.

ವಿರಾಟ್ ಕೊಹ್ಲಿ ಮತ್ತು ನಾನು ಕೆಲವು ವರ್ಷಗಳಿಂದ ಮೆಸೇಜ್​​​ ಮಾಡುತ್ತಿದ್ದೇವೆ. ನಮ್ಮಿಬ್ಬರಿಗೆ ನೇರವಾಗಿ ಭೇಟಿ ಆಗುವ ಅವಕಾಶ ಸಿಕ್ಕಿಲ್ಲ. ಆದರೆ ಅವರು ನನ್ನ ಬಗ್ಗೆ ಮಾತನಾಡುವಾಗ ಬಹಳ ಗೌರವ ಅನ್ನಿಸುತ್ತೆ.

ನೊವಾಕ್​ ಜೊಕೊವಿಚ್​, ಟೆನ್ನಿಸ್ ಆಟಗಾರ

ವಿಶ್ವ ದಾಖಲೆಯ 50ನೇ ಶತಕಕ್ಕೆ ಜೊಕೊವಿಚ್​​ ಶುಭಾಶಯ..!

ಕೊಹ್ಲಿ ಕಳೆದ ಏಕದಿನ ಕ್ರಿಕೆಟ್​ನಲ್ಲಿ 50 ಶತಕಗಳನ್ನ ಬಾರಿಸಿ ಸಚಿನ್​​ ತೆಂಡೂಲ್ಕರ್​​​​​​​​​​ ಹೆಸರಿನಲ್ಲಿದ್ದ ದಾಖಲೆಯನ್ನ ಅಳಿಸಿಹಾಕಿದ್ರು. ಇಡೀ ಜಗತ್ತೇ ಕೊಹ್ಲಿಯನ್ನ ಕೊಂಡಾಡಿತ್ತು. ಟೆನಿಸ್​​ ಅಧಿಪತಿ ಜೊಕೊವಿಚ್​​​ ಕೂಡ ಕೊಹ್ಲಿಗೆ ಭಿನ್ನವಾಗಿ ಶುಭಾಶಯ ಕೋರಿದ್ರು.

ನಾನು ಏಕದಿನದಲ್ಲಿ 50ನೇ ಶತಕ ಸಿಡಿಸಿದಾಗ ಜೊಕೊವಿಚ್​​​​​ ಒಂದು ಸ್ಟೋರಿ ಹಾಕಿದ್ರು. ಜೊತೆಗೆ ಮೆಸೆಜ್ ಕೂಡ ಕಳುಹಿಸಿದ್ದರು. ಅವರ ಅಭಿಮಾನ ಮತ್ತು ಗೌರವಕ್ಕೆ ನಾನು ಆಭಾರಿ. ಜಾಗತಿಕ ಕ್ರೀಡಾಪಟುಗಳು ಜೊತೆಯಾಗಿರುವುದಕ್ಕೆ ಬಹಳ ಸಂತಸವಿದೆ. ಇದು ಯುವ ಸಮುದಾಯಕ್ಕೆ ಸ್ಫೂರ್ತಿಯಾಗಲಿದೆ.

ವಿರಾಟ್ ಕೊಹ್ಲಿ, ಕ್ರಿಕೆಟಿಗ

ಜೊಕೊವಿಚ್​​​ ಜೊತೆ ಟೀ ಸವಿಯಲು ಕೊಹ್ಲಿ ಉತ್ಸುಕ..!

ಸತತ ಮೆಸೇಜ್​ಗಳ ಮೂಲಕ ಟಚ್​ನಲ್ಲಿದ್ರೂ, ಇಬರಿಬ್ಬರು ಲೆಜೆಂಡ್​ಗಳಿಗೆ ಮುಖತಃ ಭೇಟಿ ಮಾಡೋ ಅವಕಾಶವೇ ಸಿಕ್ಕಿಲ್ಲ. ಶೀಘ್ರದಲ್ಲೇ ಭೇಟಿಯಾಗುವ ಆಸೆ ಇಬ್ಬರಲ್ಲೂ ಇದೆ. ಈ ವೇಳೆ ಟೀ ಕುಡಿಯಬೇಕು ಅನ್ನೋದು ಕೊಹ್ಲಿ ಬಯಕೆ.

ಒಂದು ವೇಳೆ ನೊವಾಕ್ ಜೊಕೊವಿಚ್​ ಶೀಘ್ರದಲ್ಲೇ ಭಾರತಕ್ಕೆ ಬಂದರೆ ಭೇಟಿಯಾಗುತ್ತೇನೆ. ಇಲ್ಲ ವಿದೇಶದಲ್ಲಿ ಆಡುವಾಗ ಭೇಟಿ ಆಗುವೆ. ಜೊತೆಯಾಗಿ ಟೀ ಕೂಡ ಕುಡಿಯುವೆ.

ವಿರಾಟ್ ಕೊಹ್ಲಿ, ಕ್ರಿಕೆಟಿಗ

ಎಲ್ಲಿಯ ವಿರಾಟ್ ಕೊಹ್ಲಿ, ಎಲ್ಲಿಯ ನೊವಾಕ್​​ ಜೊಕೊವಿಷ್. ಎತ್ತಿಂದೆತ್ತ ಸಂಬಂಧ. ಕ್ರೀಡೆಯ ತಾಕತ್ತೆ ಅಂತಹದು. ಅದಕ್ಕೆ ಎಲ್ಲರನ್ನ ಬೆಸೆಯುವ ಗುಣವಿದೆ. ಈ ದಿಗ್ಗಜದ್ವಯರ ಫ್ರೆಂಡ್​ಶಿಪ್​​​ ಇನ್ನಷ್ಟು ಗಟ್ಟಿಯಾಗಲಿ ಎಂಬುದು ಎಲ್ಲಾ ಅಭಿಮಾನಿಗಳ ಆಶಯವಾಗಿದೆ.

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

ವಿರಾಟ್​ ಕೊಹ್ಲಿಗೆ ಸಿಕ್ಕ ಹೊಸ ಫ್ರೆಂಡ್‌.. ಯಾರು ಈ ಲೆಜೆಂಡರಿ ಪ್ಲೇಯರ್‌? ಇವರಿಬ್ಬರ ಗೆಳೆತನವೇ ಸೂಪರ್!

https://newsfirstlive.com/wp-content/uploads/2024/01/VIRAT_KOHLI_NOVAK.jpg

Load More