newsfirstkannada.com

23ನೇ ಗ್ರ್ಯಾಂಡ್​​ ಸ್ಲ್ಯಾಂಗೆ ಮುತ್ತಿಟ್ಟ ಜೊಕೊವಿಕ್.. ಟೆನಿಸ್ ಟೂರ್ನಿಯಲ್ಲಿ ಐತಿಹಾಸಿಕ ಸಾಧನೆ

Share :

Published June 12, 2023 at 2:41am

Update June 12, 2023 at 2:47am

    7-6, 6-3, 7-5 ನೇರ ಸೆಟ್​ಗಳಿಂದ ಮಣಿಸಿದ ಜೊಕೊವಿಕ್‌

    4 ಮಾದರಿಯ ಗ್ರ್ಯಾಂಡ್​​ ಸ್ಲ್ಯಾಂ 3 ಬಾರಿ ಗೆದ್ದ ಏಕೈಕ ಆಟಗಾರ

    ಈ ಬಾರಿ ರಾಫೆಲ್ ನಡಾಲ್ ಏಕೆ ಆಡಲಿಲ್ಲ ಗೊತ್ತಾ..?

ಟೆನಿಸ್ ದಂತಕತೆ, ಸರ್ಬಿಯಾದ 36 ವರ್ಷದ ನೊವಾಕ್‌ ಜೊಕೊವಿಕ್‌ 2023ರ ಸಾಲಿನ ಫ್ರೆಂಚ್‌ ಓಪನ್‌ ಟೂರ್ನಿಯಲ್ಲಿ ಕಿರೀಟಕ್ಕೆ ಮುತ್ತಿಡುವ ಮೂಲಕ ಐತಿಹಾಸಿಕ ಸಾಧಣೆ ಮಾಡಿದ್ದಾರೆ. ವೃತ್ತಿಬದುಕಿನ 23ನೇ ಗ್ರ್ಯಾಂಡ್​​ ಸ್ಲ್ಯಾಮ್​​ ತಮ್ಮದಾಗಿಸಿಕೊಂಡ ಏಕೈಕ ಟೆನಿಸ್​ ದಿಗ್ಗಜ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

ಜೊತೆಗೆ ಫ್ರೆಂಚ್‌ ಓಪನ್‌ ಅಂಗಳದಲ್ಲಿ 3ನೇ ಕರೀಟವನ್ನು ತಮ್ಮದಾಗಿಸಿಕೊಂಡಿದ್ದಾರೆ. ನಾಲ್ಕೂ ಮಾದರಿಯ ಗ್ರ್ಯಾಂಡ್‌ ಸ್ಲ್ಯಾಮ್‌ ಟೂರ್ನಿಗಳಲ್ಲಿ ಕನಿಷ್ಠ 3 ಟ್ರೋಫಿ ಗೆದ್ದ ವಿಶ್ವದ ಮೊದಲ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. 24 ವರ್ಷದ ಕ್ಯಾಸ್ಪರ್‌ ರುಡ್‌ ಅವರನ್ನು 7-6, 6-3, 7-5 ನೇರ ಸೆಟ್​ಗಳಿಂದ ಮಣಿಸುವ ಮೂಲಕ ಐತಿಹಾಸಿಕ ಸಾಧನೆ ಮಾಡಿದರು.

ಭಾನುವಾರ ಪ್ರಸಿದ್ಧ ಫಿಲಿಪ್‌ ಚಾರ್ಟಿಯರ್‌ ಸೆಂಟರ್‌ ಕೋರ್ಟ್‌ನಲ್ಲಿ ಪುರುಷರ ಸಿಂಗಲ್ಸ್‌ ಫೈನಲ್‌ ಪಂದ್ಯ ನಡೆದಿತ್ತು. ಜೊಕೊವಿಕ್‌ ಈ ಗೆಲುವಿನೊಂದಿಗೆ ಸ್ಪೇನ್ ಆಟಗಾರ ರಾಫೆಲ್‌ ನಡಾಲ್​ ಅವರನ್ನು ಹಿಂದಿಕ್ಕಿದ್ದಾರೆ. ಕಳೆದ ಬಾರಿ ನಡೆದ ಟೂರ್ನಿಯಲ್ಲಿ ನಡಾಲ್ 22ನೇ ಗ್ರ್ಯಾಂಡ್​​ ಸ್ಲ್ಯಾಮ್ ಗೆದ್ದಿದ್ದರು. ಈ ಬಾರಿಯ ಟೂರ್ನಿಯಲ್ಲಿ ನಡಾಲ್ ಗಾಯದ ಸಮಸ್ಯೆಯಿಂದ ಆಡಿರಲಿಲ್ಲ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

23ನೇ ಗ್ರ್ಯಾಂಡ್​​ ಸ್ಲ್ಯಾಂಗೆ ಮುತ್ತಿಟ್ಟ ಜೊಕೊವಿಕ್.. ಟೆನಿಸ್ ಟೂರ್ನಿಯಲ್ಲಿ ಐತಿಹಾಸಿಕ ಸಾಧನೆ

https://newsfirstlive.com/wp-content/uploads/2023/06/JOKOVIK.jpg

Load More