Advertisment

ಬ್ಲಾಕೇಜ್​ಗಳನ್ನು ಇನ್ನು ಮುಂದೆ ಶಸ್ತ್ರಚಿಕಿತ್ಸೆಯಿಲ್ಲದೇ ತೆಗೆಯಬಹುದು? ಹೇಗೆ ಗೊತ್ತಾ?

author-image
Gopal Kulkarni
Updated On
ಬ್ಲಾಕೇಜ್​ಗಳನ್ನು ಇನ್ನು ಮುಂದೆ ಶಸ್ತ್ರಚಿಕಿತ್ಸೆಯಿಲ್ಲದೇ ತೆಗೆಯಬಹುದು? ಹೇಗೆ ಗೊತ್ತಾ?
Advertisment
  • ಹೃದಯ ರಕ್ತನಾಳದಲ್ಲಿ ರಕ್ತ ಹೆಪ್ಪುಗಟ್ಟಿದರೆ ಶಸ್ತ್ರಚಿಕಿತ್ಸೆ ಮಾಡಬೇಕಿಲ್ಲ
  • ಶಸ್ತ್ರ ಚಿಕಿತ್ಸೆ ಇಲ್ಲದೇ ಬ್ಲಾಕೇಜ್​ಗಳನ್ನು ತೊಡೆದು ಹಾಕುತ್ತೆ ಈ ಸಾಧನ
  • ಸಿಂಗಪೂರ್​ನ ವಿಜ್ಞಾನಿಗಳಿಂದ ಆಗಿದೆ ಇಂತಹದೊಂದು ಆವಿಷ್ಕಾರ

ಹೃದಯ ಸಂಬಂಧಿ ಕಾಯಿಲೆಗಳು ಸದ್ಯ ವಿಶ್ವವನ್ನೇ ನಡುಗಿಸುತ್ತಿದೆ. ವರ್ಷಕ್ಕೆ ಸುಮಾರು 1.8 ಕೋಟಿ ಜನರು ಈ ಹೃದಯ ಸಂಬಂಧಿ ಕಾಯಿಲೆಗಳಿಂದ ಅಸುನೀಗುತ್ತಿದ್ದಾರೆ. ಅದರಲ್ಲೂ ಈ ಅಪಧಮನಿಕಾಠಿಣ್ಯದ (Atherosclerosis) ದಿಂದ ಹೆಚ್ಚು ಜನರು ಸಮಸ್ಯೆಗಳನ್ನು ಅನುಭವಿಸುತ್ತಿದ್ದಾರೆ.

Advertisment

ರಕ್ತನಾಳದಲ್ಲಿ ಕೊಬ್ಬಿನ ಅಂಶ ಹೆಚ್ಚು ಶೇಖರಣೆಯಾಗುವುದರಿಂದ ಈ ಅಪಧಮನಿಕಾಠಿಣ್ಯ (Atherosclerosis) ದಂತಹ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ. ಇದರಿಂದ ಹೃದಯಸಂಬಂಧಿ ಕಾಯಿಲೆಗಳು, ಪಾರ್ಶ್ವವಾಯುವಿನಂತಹ ಸಮಸ್ಯೆಗಳು ಹೆಚ್ಚು ಹೆಚ್ಚು ಬಾಧಿಸುತ್ತವೆ. ಇಂತಹ ಸಮಸ್ಯೆಗಳು ಬಂದಾಗ ಫ್ಯಾಟ್, ಕೊಲೆಸ್ಟ್ರಾಲ್ ಮತ್ತು ಇನ್ನಿತರು ಸಂಯುಕ್ತಗಳು ಸೇರಿ ರಕ್ತನಾಳದಲ್ಲಿ ರಕ್ತ ಹೆಪ್ಪುಗಟ್ಟಿರುತ್ತವೆ. ಅತಿಯಾಗಿ ಫ್ಯಾಟ್ ಹಾಗೂ ಕೊಲೆಸ್ಟ್ರಾಲ್​ಗಳು ರಕ್ತದಲ್ಲಿ ಸೇರುವುದರಿಂದ ನರಗಳಲ್ಲಿ ರಕ್ತ ಹೆಪ್ಪುಗಟ್ಟಿ ಸ್ಟ್ರೋಕ್ ಇಲ್ಲವೇ ಹೃದಯಾಘಾತದಂತಹ ಸಮಸ್ಯೆಗಳು ಸೃಷ್ಟಿಯಾಗುತ್ತವೆ. ಆದ್ರೆ ದುರಂತವೆಂದರೆ ಈ ಒಂದು ಪ್ರಕ್ರಿಯೆ ನಿಧಾನವಾಗಿ ನಡೆಯುತ್ತದೆ. ಅಂತಿಮ ಹಂತದವರೆಗೂ ಬರುವತನಕ ಯಾವುದೇ ಲಕ್ಷಣಗಳು ನಮಗೆ ಕಾಣಿಸಿಕೊಳ್ಳುವುದಿಲ್ಲ. ಯಾವಾಗ ರಕ್ತನಾಳಗಳು ಸಂಪೂರ್ಣವಾಗಿ ಬ್ಲಾಕ್​ ಆಗುತ್ತವೆಯೋ ಆಗ ಹೃದಯಾಘಾತ ಹಾಗೂ ಸ್ಟ್ರೋಕ್​ನಂತಹ ಸಮಸ್ಯೆಗಳು ಬರುತ್ತವೆ.

ಇದನ್ನೂ ಓದಿ:ಕೆಲಸದ ಜಂಜಾಟದಲ್ಲಿರೋ ಬೆಂಗಳೂರಿಗರಿಗೆ ರಾಗಿ ಗಂಜಿ ಎಷ್ಟು ಬೆಸ್ಟ್​​? ಆರೋಗ್ಯಕ್ಕೆ ಏನೆಲ್ಲಾ ಲಾಭ ಇದೆ?

ಅಪಧಮನಿಕಾಠಿಣ್ಯದ (Atherosclerosis)ದ ಸಮಸ್ಯೆಗಳಿಗೆ ಹಿಂದಿನಿಂದಲೂ ಆಂಜಿಯೋಗ್ರಾಫಿ ಮತ್ತು ಸ್ಟ್ರೆಸ್​ ಟೆಸ್ಟ್ ಮೂಲಕ ಕಂಡು ಹಿಡಿಯಲಾಗುತ್ತಿತ್ತು. ಅದು ಕೂಡ ರಕ್ತನಾಳಗಳಲ್ಲಿ ಹೆಪ್ಪುಗಟ್ಟುವಿಕೆ ಆರಂಭಗೊಂಡ ಲಕ್ಷಣಗಳು ಕಾಣಿಸಿಕೊಂಡ ಮೇಲೆ. ಆದ್ರೆ ಈಗ ಇದಕ್ಕೆ ಹೊಸ ಆವಿಷ್ಕಾರವೊಂದನ್ನು ಮಾಡಲಾಗಿದೆ. ಇದು ರೋಗದ ಲಕ್ಷಣಗಳನ್ನು ಬಹುಬೇಗ ಕಂಡುಹಿಡಿಯುವುದರ ಜೊತೆ ಜೊತೆಗೆ ಅದಕ್ಕೆ ಚಿಕಿತ್ಸೆಯನ್ನು ಕೂಡ ನೀಡುತ್ತದೆ.

Advertisment

ಹೃದಯರಕ್ತನಾಳಕ್ಕೆ ಸಂಬಂಧಿಸಿದ ಈ Atherosclerosis ಸಮಸ್ಯೆಗಳಿಗೆ ಒಂದು ನಿರ್ಧಿಷ್ಟವಾದ ಹಾಗೂ ಕಡಿಮೆ ಸಮಯದಲ್ಲಿಯೇ ಮುಗಿಯುವಂತಹ ಒಂದು ಪರಿಹಾರ ಬೇಕಿತ್ತು. ಸದ್ಯ ಆರ್ಟಿಫಿಷಿಯಲ್ ಇಂಟಲಿಜೆನ್ಸ್​ ಮೂಲಕ ಈ ಸಮಸ್ಯೆಗೆ ಒಂದು ಪರಿಹಾರ ಕಂಡು ಹಿಡಿಯಲಾಗಿದೆ. ಆವಿಷ್ಕಾರಗೊಂಡ ಈ ಒಂದು ಮಷಿನ್ ಹೃದಯ ಸಂಬಂಧಿ ಕಾಯಿಲೆಯಾದ Atherosclerosis ರೀತಿಯ ಸಮಸ್ಯೆಗಳನ್ನು ಬಹುಬೇಗ ಕಂಡು ಹಿಡಿಯುವುದರ ಜೊತೆಗೆ ಅದಕ್ಕೆ ಚಿಕಿತ್ಸೆಯನ್ನು ನೀಡಲು ಕೂಡ ಇದು ವೈದ್ಯರಿಗೆ ಸಹಾಯಕವಾಗಲಿದೆ.

ಇದನ್ನೂ ಓದಿ:ಧೂಮಪಾನ ಮಾಡುವುದರಿಂದ ನಿಜಕ್ಕೂ ಒತ್ತಡ ನಿವಾರಣೆಯಾಗುತ್ತಾ? ಇಲ್ಲಿವೆ ಶಾಕಿಂಗ್ ಸತ್ಯಗಳು

ಈ ಒಂದು ಸಾಧನವನ್ನ ಸಿಂಗಾಪೂರ್​ನ ವಿಜ್ಞಾನಿಗಳು ಹೃದಯ ಸಂಬಂಧಿ ಕಾಯಿಲೆಗಳನ್ನು ಪತ್ತೆ ಮಾಡುವ ಹಾಗೂ ಚಿಕಿತ್ಸೆ ನೀಡುವ ಒಂದು ಸಾಧನವನ್ನು ಸಿದ್ಧಗೊಳಿಸಿದ್ದಾರೆ. ಕಳೆದ 30 ವರ್ಷಗಳಿಂದ ಹೃದಯ ಸಂಬಂಧಿ ಕಾಯಿಲೆಗಳು ಜಗತ್ತಿನಲ್ಲಿ ಅತಿಹೆಚ್ಚು ಕಾಣಿಸಿಕೊಳ್ಳುತ್ತಿವೆ. ಅದರಲ್ಲೂ ಹರೆಯದವರೇ ಈ ಸಮಸ್ಯೆಗಳಿಂದ ಹೆಚ್ಚು ಬಾಧಿಸುತ್ತಿದ್ದಾರೆ. ವ್ಯಾಯಾಮದ ಕೊರತೆ, ಸಿಗರೇಟ್ ಮದ್ಯಪಾನದಂತಹ ಚಟಗಳು ಹಾಗೂ ಆಹಾರ ಕ್ರಮದಿಂದಾಗಿ ಈ ರೀತಿಯ ಸಮಸ್ಯೆಗಳು ಉಂಟಾಗುತ್ತವೆ.
ಸದ್ಯ ನ್ಯಾನೊಟೆಕ್ನಾಲಜಿ ಮೂಲಕ ಕಂಡು ಹಿಡಿಯಲಾಗಿರುವ ಎಐ ಸಾಧನದಿಂದ ಬಹುಬೇಗ ಇಂತಹ ಹೃದಯ ಸಂಬಂಧಿ ಕಾಯಿಲೆಗಳನ್ನು ಪತ್ತೆ ಹಚ್ಚಿ ಶಸ್ತ್ರಚಿಕಿತ್ಸೆಯಿಲ್ಲದೇ ಬ್ಲಾಕೇಜ್​ಗಳನ್ನು ನಿರ್ಮೂಲ ಮಾಡಬಹುದು ಎಂದು ಹೇಳಲಾಗಿದೆ.

Advertisment

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment