ಮತ್ತೆ ಸಿಡಿದೇಳಬೇಕಿದೆ ಸಿಡಿಲಬ್ಬರದ ಬ್ಯಾಟರ್.. ಐಪಿಎಲ್​​ನಲ್ಲಿ ನಿರಂತರ ವಿಫಲತೆ ಕಾಣುತ್ತಿರುವುದೇಕೆ ಹಿಟ್​ಮ್ಯಾನ್​?

author-image
Gopal Kulkarni
Updated On
ಮತ್ತೆ ಸಿಡಿದೇಳಬೇಕಿದೆ ಸಿಡಿಲಬ್ಬರದ ಬ್ಯಾಟರ್.. ಐಪಿಎಲ್​​ನಲ್ಲಿ ನಿರಂತರ ವಿಫಲತೆ ಕಾಣುತ್ತಿರುವುದೇಕೆ ಹಿಟ್​ಮ್ಯಾನ್​?
Advertisment
  • ಐಪಿಎಲ್​ನಲ್ಲಿ ಮುಂದುವರೆದ ರೋಹಿತ್​ ಶರ್ಮಾ ವೈಫಲ್ಯ
  • ಸಂಕಷ್ಟಕ್ಕೆ ಸಿಲುಕಿದ ಮುಂಬೈ ಮಾಜಿ ನಾಯಕನ ಕರಿಯರ್​
  • ಐಪಿಎಲ್​ ಸೀಸನ್​-18ರಲ್ಲಿ ಹಿಟ್​​ ಆಗದ ಹಿಟ್​​ಮ್ಯಾನ್​​.!

ಐಪಿಎಲ್​​ ಇತಿಹಾಸದ ಚಾಂಪಿಯನ್​​ ನಾಯಕ, ಮುಂಬೈಗೆ 5 ಬಾರಿ ಟ್ರೋಫಿ ಗೆಲ್ಲಿಸಿಕೊಟ್ಟ ಚಾಣಾಕ್ಷ, ರೋಹಿತ್​ ಶರ್ಮಾ ಸದ್ಯ ಸಂಕಷ್ಟಕ್ಕೆ ಸಿಲುಕಿದ್ದಾರೆ. ಇಂಪ್ಯಾಕ್ಟ್​ ಪ್ಲೇಯರ್​​ ಆಗಿ ಕಣಕ್ಕಿಳಿತಾ ಇರೋ ರೋಹಿತ್​ ಮೈದಾನಕ್ಕಿಳಿದಷ್ಟೇ ವೇಗವಾಗಿ ಡಗೌಟ್​ಗೆ​ ವಾಪಾಸ್ಸಾಗ್ತಿದ್ದಾರೆ. ಕಳೆದ ಬಾರಿ ನಾಯಕತ್ವ ಕಳೆದುಕೊಂಡ ಮುಂಬೈ ರಾಜ, ಈ ಬಾರಿ ಸ್ಥಾನವನ್ನೇ ಕಳೆದುಕೊಳ್ಳೋ ಭೀತಿಗೆ ಸಿಲುಕಿದ್ದಾರೆ.

publive-image

IPL ಟೂರ್ನಿಯ 16ನೇ ಪಂದ್ಯಕ್ಕೆ ಕೌಂಟ್​​ಡೌನ್​ ಶುರುವಾಗಿದೆ. ಲಕ್ನೋನ ಎಕಾನ ಮೈದಾನದಲ್ಲಿಂದು ಮುಂಬೈ ಇಂಡಿಯನ್ಸ್​ - ಲಕ್ನೋ ಸೂಪರ್​ ಜೈಂಟ್ಸ್​​ ತಂಡಗಳ ಮುಖಾಮುಖಿಯಾಗಲಿದೆ. ಅನ್​ ಪೇಪರ್​ ಎರಡೂ ತಂಡಗಳು ಬಲಿಷ್ಟವಾಗಿ ಕಂಡ್ರೂ ಆನ್​ಫೀಲ್ಡ್​ನಲ್ಲಿ ಇನ್​​ಕನ್ಸಿಸ್ಟೆಂಟ್​ ಪರ್ಫಾಮೆನ್ಸ್​ ಉಭಯ ತಂಡಗಳನ್ನ ಕಾಡ್ತಿದೆ. ಅದ್ರಲ್ಲೂ, 5 ಬಾರಿಯ ಚಾಂಪಿಯನ್​​​ ಮುಂಬೈ ತಂಡಕ್ಕೆ ಮಾಜಿ ನಾಯಕ ರೋಹಿತ್​ ಶರ್ಮಾನೇ ಹೊರೆಯಾಗಿ ಬಿಟ್ಟಿದ್ದಾರೆ.

publive-image

ಸೀಸನ್​​ನ 18 ಐಪಿಎಲ್​ನಲ್ಲಿ ಮುಂಬೈ ಕಾ ರಾಜ ರೋಹಿತ್​ ಶರ್ಮಾ ಇನ್ನೂ ಒಂದೂ ಪಂದ್ಯದಲ್ಲಿ 18 ರನ್​​ನ ಗಡಿಯನ್ನೂ ದಾಟಿಲ್ಲ. ಮೊದಲ ಪಂದ್ಯದಲ್ಲಿ ಸಿಎಸ್​ಕೆ ಎದುರು ಡಕೌಟ್​ ಆಗಿ ನಿರ್ಗಮಿಸಿದ ಹಿಟ್​​ಮ್ಯಾನ್​, 2ನೇ ಪಂದ್ಯದಲ್ಲಿ ಗುಜರಾತ್​ ಟೈಟನ್ಸ್​ ವಿರುದ್ಧ 8 ರನ್​ಗಳಿಸುವಷ್ಟರಲ್ಲಿ ಸುಸ್ತಾದ್ರು. ಹೋಮ್​ಗ್ರೌಂಡ್​​ ವಾಂಖೆಡೆಯಲ್ಲಿ ಆಡಿದ ಕೆಕೆಆರ್​​ ವಿರುದ್ಧದ ಪಂದ್ಯದಲ್ಲಿ ರೋಹಿತ್​ ಆಟ 13 ರನ್​ಗಳಿಗೆ ಅಂತ್ಯವಾಯ್ತು.

publive-image

ಓಪನಿಂಗ್​​​ ಬ್ಯಾಟಿಂಗ್​.! ಬಳಿಕ​ ಸಿಟ್ಟಿಂಗ್​.! 16.30 ಕೋಟಿ ಕಮಾಯ್​.!
ಪ್ರಸಕ್ತ ಐಪಿಎಲ್​ನಲ್ಲಿ ರೋಹಿತ್​ ಶರ್ಮಾ ಇಂಪ್ಯಾಕ್ಟ್​ ಪ್ಲೇಯರ್​ ಆಗಿ ಕಣಕ್ಕಿಳಿತಾ ಇದ್ದಾರೆ. ಓಪನಿಂಗ್​ ಬ್ಯಾಟಿಂಗ್​​ ಬರ್ತಿರೋ ರೋಹಿತ್​ ಮೊದಲ 2 ಪಂದ್ಯದಲ್ಲಿ ಮೊದಲ ಓವರ್​ನಲ್ಲೇ ಔಟಾಗಿ ಉಳಿದ 39 ಓವರ್​​ ಡಕೌಟ್​ನಲ್ಲಿ ಕುಳಿತಿದ್ರು. 3ನೇ ಪಂದ್ಯದಲ್ಲಿ 5ನೇ ಓವರ್​​​ ತನಕ ಕ್ರಿಸ್​ನಲ್ಲಿದ್ದ ಹಿಟ್​ಮ್ಯಾನ್​ ಉಳಿದ 35 ಓವರ್​​ ಡಗೌಟ್​ನಲ್ಲಿ ಕುಳಿತಿದ್ರು. ರೋಹಿತ್​ ಆಟ ಟ್ರೋಲರ್​​ಗಳಿಗೆ ಆಹಾರವಾಗಿದ್ದು, ಮೊದಲು ಬ್ಯಾಟಿಂಗ್​​​, ಬಳಿಕ ಸಿಟ್ಟಿಂಗ್​, 16.30 ಕೋಟಿ ಕಮಾಯ್​ ಎಂದು ಟ್ರೋಲ್​ ಮಾಡ್ತಿದ್ದಾರೆ.

ಇದನ್ನೂ ಓದಿ:ಇಂದು ಬಲಿಷ್ಠ ಮುಂಬೈಗೆ ಲಕ್ನೋ ಸವಾಲ್​! ಉಭಯ ತಂಡಗಳಿಗೆ ಆರಂಭಿಕ ಆಟಗಾರರದ್ದೇ ಸಮಸ್ಯೆ!

publive-image

10 ಪಂದ್ಯಗಳಲ್ಲಿ ರೋಹಿತ್​ ಫ್ಲಾಪ್​.. ಫ್ಲಾಪ್​.. ಫ್ಲಾಪ್​​.!
ರೋಹಿತ್​ ಶರ್ಮಾ ವೈಫಲ್ಯದ ಕತೆ ಈ ಸೀಸನ್​​ನದ್ದು ಮಾತ್ರವಲ್ಲ.. ಕಳೆದ ಸೀಸನ್​ನಿಂದ ಬಂದ ಬಳುವಳಿ. ಈ ಸೀಸನ್​​ನ ಮೂರು ಪಂದ್ಯಗಳಲ್ಲಿ ಫ್ಲಾಫ್​ ಶೋ ನೀಡಿರೋ ರೋಹಿತ್​ ಕಳೆದ ಸೀಸನ್​ನಲ್ಲೂ ಇನ್​​ಕನ್ಸಿಸ್ಟೆಂಟ್​ ಆಟವಾಡಿದ್ರು. ಅದ್ರಲ್ಲೂ ಕೊನೆಯ 7 ಇನ್ನಿಂಗ್ಸ್​ಗಳಲ್ಲಂತೂ ಹೀನಾಯ ಆಟವಾಡಿದ್ರು.
ಕಳೆದ 10 ಐಪಿಎಲ್​​ ಇನ್ನಿಂಗ್ಸ್​ಗಳಲ್ಲಿ ಕೇವಲ 14.1ರ ಸರಾಸರಿಯಲ್ಲಿ ರೋಹಿತ್​ ಶರ್ಮಾ ಬ್ಯಾಟ್​ ಬೀಸಿದ್ದಾರೆ. 5 ಇನ್ನಿಂಗ್ಸ್​ಗಳಲ್ಲಿ ಸಿಂಗಲ್​ ಡಿಜಿಟ್​ಗೆ ಔಟಾಗಿರೋ ರೋಹಿತ್​ ಶರ್ಮಾ ಕೇವಲ 141 ರನ್​ಗಳಿಸಿದ್ದಾರೆ.

ಇದನ್ನೂ ಓದಿ:ವಿರಾಟ್ ಕೊಹ್ಲಿ ಬೆರಳಿಗೆ ಗಾಯ.. ಅಭಿಮಾನಿಗಳ ಆತಂಕಕ್ಕೆ RCB ಕೋಚ್ ಉತ್ತರ..!

publive-image

ಚಾಂಪಿಯನ್​ ನಾಯಕನಿಗೆ ಸ್ಥಾನ ಕಳೆದುಕೊಳ್ಳೋ ಭೀತಿ.!
ಮುಂಬೈ ಇಂಡಿಯನ್ಸ್​ ಫ್ರಾಂಚೈಸಿ ಐಪಿಎಲ್​ನಲ್ಲಿ ಸಕ್ಸಸ್​ ಅನ್ನೋದನ್ನ ಕಂಡಿದ್ದೇ ರೋಹಿತ್​ ಶರ್ಮಾರಿಂದ. ಒಂದಲ್ಲ.. ಎರಡಲ್ಲ.. 5 ಬಾರಿ ತಂಡವನ್ನ ಚಾಂಪಿಯನ್​ ಪಟ್ಟಕ್ಕೇರಿಸಿರೋ ಹೆಗ್ಗಳಿಕೆ ರೋಹಿತ್​ದ್ದು. ಈ ಸಾಧನೆಯ ಹೊರತಾಗಿಯೂ ರೋಹಿತ್​ ನಾಯಕತ್ವದಿಂದ ಕೆಳಗಿಳಿಸಿದ್ದು ಇತಿಹಾಸ. ಇದೀಗ ಪ್ಲೇಯಿಂಗ್​ ಇಲೆವೆನ್​ನಿಂದಲೂ ಹೊರಬೀಳೋ ಪರಿಸ್ಥಿತಿ ನಿರ್ಮಾಣವಾಗಿದೆ. ಕಳಪೆ ಪರ್ಫಾಮೆನ್ಸ್​, ಯುವ ಆಟಗಾರರ ಪೈಪೋಟಿ ಇಂಪ್ಯಾಕ್ಟ್​ ಪ್ಲೇಯರ್​ನ ರೋಹಿತ್​ನ ಕಂಪ್ಲೀಟ್​ ಆಗಿ ಬೆಂಚ್​ ಕಾಯುವಂತೆ ಮಾಡಿದ್ರೂ ಅಚ್ಚರಿಪಡಬೇಕಿಲ್ಲ.

ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್

Advertisment