/newsfirstlive-kannada/media/post_attachments/wp-content/uploads/2025/03/GOLD-RATE.jpg)
ಚಿನ್ನದ ಬೆಲೆ ನಿತ್ಯ ಗಗನಕ್ಕೆ ಏರುತ್ತಿದೆ. ಉಳ್ಳವರ ಕೈಗೆಟುಕುವ ಲೋಹವಾಗಿಯೇ ಇದು ದಶಕಗಳಿಂದ ಉಳಿದುಕೊಂಡು ಬಂದಿದೆ. ಒಂದು ಕಾಲದಲ್ಲಿ ಒಂದು ಕೆಜಿ ಚಿನ್ನದ ಬೆಲೆಯಲ್ಲಿ ಮಾರುತಿ 800 ಕಾರನ್ನು ಖರೀದಿಸಬಹುದಿತ್ತಂತೆ ಅಷ್ಟು ಬೆಲೆಗೆ ಬಂಗಾರ ತೂಗುತ್ತಿತ್ತು. ಆದ್ರೆ ಈಗ ಒಂದು ಕೆಜಿ ಚಿನ್ನದ ಬೆಲೆಯಲ್ಲಿ ನೀವು ಎಂತಹ ದುಬಾರಿ ಹಾಗೂ ಐಷಾರಾಮಿ ಕಾರನ್ನು ಕೊಂಡುಕೊಳ್ಳಬಹುದು ಗೊತ್ತಾ?
ನೀವು ಒಂದು ಬಿಎಂಡಬ್ಲ್ಯೂ ಅಥವಾ ಆಡಿ ಕಾರು ಕೊಳ್ಳಲು ಒಂದು ಕೆಜಿ ಬಂಗಾರ ಕೊಳ್ಳುವಷ್ಟು ದುಡ್ಡು ಇದ್ರೆ ಸಾಕು. ಇತಿಹಾಸದಲ್ಲಿಯೇ ಎಂದೂ ಕಾಣದ ಏರಿಕೆಯನ್ನು ಈಗ ಬಂಗಾರದ ಬೆಲೆ ಕಂಡುಕೊಂಡಿದೆ. 10 ಗ್ರಾಂ ಚಿನ್ನ ಕೊಂಡುಕೊಳ್ಳಲು ನೀವು ಬರೋಬ್ಬರಿ 88,672 ರೂಪಾಯಿ ಕೊಡಬೇಕು. ಅಂದ್ರೆ ಒಂದು ಕೆಜಿಗೆ 88.67 ಲಕ್ಷ.
ಇದನ್ನೂ ಓದಿ:ರಂಜಿನಿ ರಾಘವನ್, ಭವ್ಯಾ ಗೌಡ, ಮೋಕ್ಷಿತಾ ಪೈ ಇವರ್ಯಾರೂ ಅಲ್ಲ ಕರ್ಣನ ನಾಯಕಿ; ಮತ್ಯಾರು?
ನಿಮಗೆ ಬಿಎಂಡಬ್ಲೂ ಎಕ್ಸ್ 1 ಮತ್ತು ಹೊಸದಾದ ಎಕ್ಸ್ 3 ಪೆಟ್ರೋಲ್ ಅಥವಾ ಡಿಸೇಲ್ ಇಂಜಿನ್ನ ಕಾರಿನ ಬೆಲೆ 50 ರಿಂದ 97.80 ಲಕ್ಷ ರೂಪಾಯಿ. ಇದೇ ಬೆಲೆ ಆಡಿ ಕಾರುಗಳಿಗೂ ಕೂಡ ಅನ್ವಯವಾಗುತ್ತದೆ. ನೀವು ಒಂದು ಕೆಜಿ ಬಂಗಾರದ ಬೆಲೆಗಿಂತ ಕಡಿಮೆ ಬೆಲೆಯಲ್ಲಿ ಆಡಿ ಮಾಡಲ್ಗಳಾದ ಎ4, ಎಸ್5, ಎ6 ಮತ್ತು ಕ್ಯೂ3ಯನ್ನು ಕೊಂಡುಕೊಳ್ಳಬಹುದು.
ಸೆಬಿಯ ನೊಂದಾಯಿತ ಸಂಶೋಧಕರು ವಿಶ್ಲೇಷಕ ಎ.ಕೆ. ಮಾಧವನ್ ಅವರು ತಮ್ಮ ಟ್ವೀಟ್ನಲ್ಲಿ ಉಲ್ಲೇಖಿಸಿರುವ ಪ್ರಕಾರ ಮಾರ್ಚ್ 16ರ ಪ್ರತಿ ಕೆಜಿ ಚಿನ್ನದ ಬೆಲೆಯನ್ನು ನೋಡಿದರೆ ಅದು ಈ ಕಾರುಗಳ ಬೆಲೆಗಿಂತ ಸುಮಾರು 1190 ರೂಪಾಯಿ ಹೆಚ್ಚಿಗೆ ಇದೆ ಎಂದು ಹೇಳಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ