/newsfirstlive-kannada/media/post_attachments/wp-content/uploads/2024/10/GIRLS-1.jpg)
ಒಂದು ಕಾಲದಲ್ಲಿ ಮಹಿಳೆಯರು ಒಂಟಿಯಾಗಿ ಪ್ರಯಾಣಿಸಲು ಹಿಂದೇಟು ಹಾಕುತ್ತಿದ್ದರು. ರಜೆ ಬಂತೆಂದರೆ ಮನೆಗಳಿಗೆ ಸೀಮಿತ ಅಥವಾ ಕುಟುಂಬ ಸದಸ್ಯರೊಂದಿಗೆ ವಿಹಾರಕ್ಕೆ ಹೋಗುತ್ತಿದ್ದರು. ಆದರೆ ಈಗ ಕಾಲ ಬದಲಾಗಿದೆ, ಸೋಲೋ ಟ್ರಾವೆಲರ್‌ಗಳ ಸಂಖ್ಯೆ ಹೆಚ್ಚುತ್ತಿದೆ. ಮಹಿಳೆಯರು ಒಂಟಿಯಾಗಿ ಪ್ರವಾಸಕ್ಕೆ ಹೋಗ್ತಿದ್ದಾರೆ.
ಹೆಣ್ಮಕ್ಕಳು ಒಂಟಿಯಾಗಿ ವಿದೇಶ ಪ್ರವಾಸ ಮಾಡುತ್ತಿದ್ದಾರೆ. ಕೇವಲ ದೃಶ್ಯ ವೀಕ್ಷಣೆಯಷ್ಟೇ ಅಲ್ಲ. ಅವರು ಡೈವಿಂಗ್ ಮತ್ತು ಪ್ಯಾರಾ-ಗ್ಲೈಡಿಂಗ್‌ನಂತಹ (ParaGliding Jakkur) ಸಾಹಸ ಕ್ರೀಡೆಗಳನ್ನು ಇಷ್ಟಪಡ್ತಾರೆ. ಇದಕ್ಕಾಗಿ ತರಬೇತಿ ಪಡೆಯುವವರ ಸಂಖ್ಯೆ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಿದೆ. ಆದರೆ ಒಂಟಿಯಾಗಿ ಪ್ರಯಾಣಿಸುವ ಮಹಿಳೆಯರು ಕೆಲವು ತೊಂದರೆಗಳನ್ನು ಎದುರಿಸ್ತಿದ್ದಾರೆ.
ಇದನ್ನೂ ಓದಿ:6 ವರ್ಷ ಡೇಟಿಂಗ್..! ರೋಹಿತ್ ಲೈಫ್ ಸ್ಟೈಲ್ ಹಿಂದಿನ ಸೂತ್ರಧಾರಿ ಈಕೆ..! Photo
ಸುರಕ್ಷತಾ ಕ್ರಮ ಎಲ್ಲಿದೆ..?
ಪ್ರವಾಸೋದ್ಯಮವು ವಿಶೇಷವಾಗಿ ಮಹಿಳಾ ಪ್ರಯಾಣಿಕರ ಅಗತ್ಯಗಳನ್ನು ಪೂರೈಸಲು ಸಾಧ್ಯವಾಗುತ್ತಿಲ್ಲ. ಮಹಿಳೆಯರ ಸುರಕ್ಷತೆ ದೃಷ್ಟಿಯಿಂದ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ. ಲೈಂಗಿಕ ಕಿರುಕುಳವನ್ನು ತಡೆಗಟ್ಟಲು ಕ್ರಮ ಬೇಕಿದೆ. ಮಹಿಳೆಯರ ಸುರಕ್ಷತೆಯ ದೃಷ್ಟಿಯಿಂದ ಇದು ನಿರ್ಣಾಯಕವಾಗಿದೆ.
ಪ್ರವಾಸೋದ್ಯಮ ಕಂಪನಿಗಳು ಮಹಿಳೆಯರ ಸುರಕ್ಷತಾ ಸೌಲಭ್ಯಗಳನ್ನು ಗಮನದಲ್ಲಿಟ್ಟುಕೊಂಡು ಮಹಿಳಾ ಪ್ರಯಾಣಿಕರ ಸಾಧನಗಳನ್ನು ವಿನ್ಯಾಸಗೊಳಿಸುವ ಜವಾಬ್ದಾರಿಯನ್ನು ಹೊಂದಿವೆ. ನೈರ್ಮಲ್ಯ ಉತ್ಪನ್ನಗಳು ಮತ್ತು ನೋವು ನಿವಾರಕ ಔಷಧಿಗಳಂತಹ ಆರೋಗ್ಯಕ್ಕೆ ಸಂಬಂಧಿಸಿದ ಗುಣಮಟ್ಟದ ವೈದ್ಯಕೀಯ ಕಿಟ್‌ಗಳು ಲಭ್ಯವಿರಬೇಕು ಎಂದು ಏಕಾಂಗಿ ಪ್ರಯಾಣಿಕರು ಹೇಳ್ತಾರೆ.
ಇತ್ತೀಚಿನ ದಿನಗಳಲ್ಲಿ ಪ್ರವಾಸೋದ್ಯಮವೂ ದೊಡ್ಡ ಉದ್ಯಮವಾಗಿದೆ. ದೊಡ್ಡ, ದೊಡ್ಡ ದೈತ್ಯ ಕಂಪನಿಗಳೂ ಈ ಕ್ಷೇತ್ರಕ್ಕೆ ಕಾಲಿಡುತ್ತಿವೆ. ಪ್ರಪಂಚದ ಎಲ್ಲಾ ದೇಶಗಳು ಪ್ರವಾಸೋದ್ಯಮವನ್ನು ಆದಾಯದ ಮೂಲವಾಗಿ ಪರಿವರ್ತಿಸುತ್ತಿವೆ. ಸರ್ಕಾರಗಳು ತಮ್ಮ ದೇಶಕ್ಕೆ ಭೇಟಿ ನೀಡಲು ಕರೆ ನೀಡುತ್ತಿವೆ. ಈ ವಲಯವು ಬೃಹತ್ ಪ್ರಮಾಣದಲ್ಲಿ ವಿಸ್ತರಿಸುತ್ತಿದೆ. ಹೋಟೆಲ್ ಕ್ಷೇತ್ರಗಳು ಸಹ ಪ್ರವಾಸೋದ್ಯಮವನ್ನು ಅವಲಂಬಿಸಿವೆ. ವಾಸೋದ್ಯಮ ಕ್ಷೇತ್ರದ ಮಹತ್ವವನ್ನು ವಿವರಿಸಲು ಪ್ರತಿ ವರ್ಷ ಸೆಪ್ಟೆಂಬರ್ 27 ವಿಶ್ವ ಪ್ರವಾಸೋದ್ಯಮ ದಿನವನ್ನಾಗಿ ಆಚರಿಸಲಾಗುತ್ತದೆ.
ಇದನ್ನೂ ಓದಿ:50 ವರ್ಷಗಳ ಕಾಲ ತರುಣಿಯಂತೆ ಯಂಗ್ ಆಗಿರಿ.. ಲಕಲಕ ಹೊಳೆಯಲು ನಿಮ್ಮ ಲೈಫ್ಸ್ಟೈಲ್ ಹೇಗಿರಬೇಕು?
ಹೆಣ್ಮಕ್ಕಳು ಮಾಡಬೇಕಾಗಿದ್ದು ಏನು..?
- ಏಕಾಂಗಿಯಾಗಿ ಪ್ರಯಾಣಿಸುವಾಗ ಸುರಕ್ಷತೆಗೆ ಅತಿ ಹೆಚ್ಚು ಆದ್ಯತೆ ನೀಡಿ
- ಬೆಲೆಬಾಳುವ ವಸ್ತುಗಳನ್ನು ಯಾವಾಗಲೂ ನಿಮ್ಮ ಹತ್ತಿರ ಇರಿಸಿಕೊಳ್ಳಬೇಡಿ
- ಸಣ್ಣ ಕ್ರಾಸ್‌ಬಾಡಿ ಬ್ಯಾಗ್ ಅಥವಾ ಮನಿ ಬೆಲ್ಟ್ ಅನ್ನು ಪ್ಯಾಕ್ ಮಾಡಿ
- ನಿಮ್ಮ ಪಾಸ್‌ಪೋರ್ಟ್‌ನ ಫೋಟೋಕಾಪಿ, ತುರ್ತು ಸಂಪರ್ಕಗಳ ಸಂಖ್ಯೆ ಇಟ್ಕೊಳ್ಳಿ
- ಅಗತ್ಯ ವಸ್ತುಗಳ ಜೊತೆಗೆ ವಾಟರ್ ಬಾಟಲ್ ತೆಗೆದುಕೊಂಡು ಹೋಗುವುದನ್ನು ಮರೆಯದಿರಿ
- ವೆಕೇಶನ್ಗೆ ತಕ್ಕಂತೆ ಉಡುಪುಗಳನ್ನು ತೆಗೆದಿಟ್ಟುಕೊಳ್ಳಿ
- ಟ್ರಿಪ್ಗೆ ಹೋಗಬೇಕಾದಾಗ ಹಗುರವಾದ ಬಟ್ಟೆಗಳನ್ನು ಇಟ್ಟುಕೊಳ್ಳಿ
ಇದನ್ನೂ ಓದಿ:ಇವರು ವಿಶ್ವದ ದೀರ್ಘಾಯುಷಿ.. 2ನೇ ವಿಶ್ವಯುದ್ಧ ಕಣ್ಣಾರೆ ಕಂಡ ಏಕೈಕ ವ್ಯಕ್ತಿ, ಅಜ್ಜನ ಲೈಫ್ಸ್ಟೈಲ್ ರೋಚಕ..!
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ