/newsfirstlive-kannada/media/post_attachments/wp-content/uploads/2024/10/Gold-Rate.jpg)
ಬಂಗಾರ ಖರೀದಿ ಅಂದ ತಕ್ಷಣ ಎಲ್ಲರ ಬಾಯಲ್ಲಿ ಬರುವ ಮೊದಲು ಹೆಸರು ದುಬೈ. ಅಲ್ಲಿ ಅತ್ಯಂತ ಕಡಿಮೆ ದರಕ್ಕೆ ಬಂಗಾರ ದೊರಕುತ್ತದೆ ಎಂಬ ನಂಬಿಕೆ. ಆದ್ರೆ ಆ ನಂಬಿಕೆ ಈಗ ತಲೆಕೆಳಗಾಗಿದೆ. ಚಿನ್ನ ಖರೀದಿಗೆ ಅತ್ಯಂತ ಉತ್ತಮವಾದ ದೇಶ ಅಂದ್ರೆ ಅದು ಭಾರತ ಎಂಬ ಹೆಗ್ಗಳಿಕೆ ನಮ್ಮ ದೇಶದ್ದಾಗಿದೆ. ಇಷ್ಟು ದಿನ ದುಬೈನಲ್ಲಿಯೇ ಚಿನ್ನ ಖರೀದಿ ಮಾಡುತ್ತಿದ್ದ ಅನಿವಾಸಿ ಭಾರತೀಯರು, ಈಗ ಚಿನ್ನದ ಖರೀದಿಗೆ ಭಾರತಕ್ಕೆನೇ ಬರುತ್ತಿದ್ದಾರೆ.
ದುಬೈ ತೊರೆದು ಭಾರತದಲ್ಲಿ ಬಂಗಾರದ ಖರೀದಿಗೆ ಎನ್​ಆರ್​ಐಗಳು ಮುಂದಾಗಿದ್ದಕ್ಕೆ ಹಲವು ಕಾರಣಗಳಿವೆ. ಅದಕ್ಕೂ ಮೊದಲು ಎನ್​ಐಆರ್​ಗಳಿಂದ ಭಾರತದಲ್ಲಿ ಚಿನ್ನದ ಖರೀದಿ ಎಷ್ಟು ಹೆಚ್ಚಾಗಿದೆ ಎಂಬುದದನ್ನು ನೋಡಿದರೆ ನಿಜಕ್ಕೂ ಆಶ್ಚರ್ಯವಾಗುತ್ತದೆ. ಕಳೆದ ನವೆಂಬರ್​ನಲ್ಲಿ ಭಾರತದಲ್ಲಿ ಚಿನ್ನ ಖರೀದಿಸುವವರ ಅನಿವಾಸಿ ಭಾರತೀಯರ ಸಂಖ್ಯೆ ಶೇಕಡಾ 15 ರಷ್ಟು ಹೆಚ್ಚಾಗಿದೆ ಎಂದು ಅಂಕಿಅಂಶಗಳು ಹೇಳುತ್ತಿವೆ.
ಈ ಒಂದು ಪ್ರಮುಖ ಬೆಳವಣಿಗೆಗೆ ಅನೇಕ ಕಾರಣಗಳಿವೆ. ಭಾರತದಲ್ಲಿ ಚಿನ್ನದ ಆಮದಿನ ಮೇಲಿರುವ ಸುಂಕವನ್ನು ಶೇಕಡಾ 15 ರಿಂದ 6ಕ್ಕೆ ಇಳಿಸಲಾಗಿದೆ. ಜೊತೆಗೆ ಭಾರತದಲ್ಲಿ ಆಭರಣಗಳ ಮೇಲಿನ ಮೇಕಿಂಗ್ ಚಾರ್ಜ್ ಕೂಡ ದುಬೈಗೆ ಹೋಲಿಸಿದರೆ ಕಡಿಮೆ ಇದೆ. ಹೀಗಾಗಿಯೇ ಅನಿವಾಸಿ ಭಾರತೀಯರು ದುಬೈ ಬಿಟ್ಟು ಈಗ ಭಾರತದಲ್ಲಿಯೇ ಹೆಚ್ಚು ಚಿನ್ನ ಖರೀದಿ ಮಾಡುತ್ತಿದ್ದಾರೆ. ದುಬೈನ ಚಿನ್ನದ ಮಳಿಗೆಗಳಲ್ಲಿ ಅನಿವಾಸಿ ಭಾರತೀಯರು ಚಿನ್ನದ ಖರೀದಿಯಲ್ಲಿ ಇಳಿಕೆ ಕಂಡಿದೆ. ಹೀಗಾಗಿ ಭಾರತದಲ್ಲಿ ನವೆಂಬರ್ ಹಗೂ ಡಿಸೆಂಬರ್ ತಿಂಗಳಲ್ಲಿ ಚಿನ್ನದ ಮಾರಾಟ ಸುಮಾರು 80 ಟನ್​ ತಲುಪುವ ಸಾಧ್ಯತೆಯು ಸ್ಪಷ್ಟವಾಗಿ ಕಾಣುತ್ತಿದೆ.
ನವೆಂಬರ್ ಡಿಸೆಂಬರ್ ಹೇಳಿ ಕೇಳಿ ಮದುವೆ ಸೀಸನ್​ ಹೀಗಾಗಿ ಈ ಎರಡು ತಿಂಗಳಲ್ಲಿ ಎನ್​ಆರ್​ಐಗಳು ಹೆಚ್ಚು ಚಿನ್ನ ಖರೀದಿ ಮಾಡುತ್ತಾರೆ. ಮೊದಲು ದುಬೈಗೆ ಹೋಗಿ ಚಿನ್ನ ಖರೀದಿಸಿ ನಂತರ ಭಾರತಕ್ಕೆ ಬರುತ್ತಿದ್ದ ಅನಿವಾಸಿ ಭಾರತೀಯರು, ಈಗ ನೇರವಾಗಿ ಭಾರತಕ್ಕೆ ಬಂದು ಚಿನ್ನ ಖರೀದಿಸುತ್ತಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us