Advertisment

ಮೋದಿ ಬಳಿಕ ಮಾಸ್ಕೋದತ್ತ ಭಾರತದ ಜೇಮ್ಸ್ ಬಾಂಡ್ ಧೋವಲ್ ಪಯಣ; ಏನಿದರ ಮಾಸ್ಟರ್ ಪ್ಲಾನ್?

author-image
Gopal Kulkarni
Updated On
ಮೋದಿ ಬಳಿಕ ಮಾಸ್ಕೋದತ್ತ ಭಾರತದ ಜೇಮ್ಸ್ ಬಾಂಡ್ ಧೋವಲ್ ಪಯಣ; ಏನಿದರ ಮಾಸ್ಟರ್ ಪ್ಲಾನ್?
Advertisment
  • ರಷ್ಯಾಗೆ ಪ್ರಯಾಣ ಬೆಳೆಸಲಿರುವ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ಧೋವಲ್
  • ವ್ಲಾಡಮಿರ್ ಪುಟಿನ್ ಜೊತೆ ಮಾತುಕತೆ, ಉಕ್ರೇನ್ ರಷ್ಯಾದ ನಡುವೆ ಶಾಂತಿ ಸ್ಥಾಪನೆ?
  • ಉಕ್ರೇನ್-ರಷ್ಯಾ ಯುದ್ಧದ ನಡುವೆ ಅಜಿತ್ ಧೋವಲ್ ಭೇಟಿ ಮೂಡಿಸಿದ ಕುತೂಹಲ

ನವದೆಹಲಿ: ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ಧೋವಲ್ ಸೆಪ್ಟೆಂಬರ್ 10 ರಂದು ಮಾಸ್ಕೋಗೆ ಪ್ರಯಾಣ ಬೆಳೆಸಲಿದ್ದಾರೆ. ಉಕ್ರೇನ್​ ರಷ್ಯಾ ನಡುವೆ ನಡೆಯುತ್ತಿರುವ ಭೀಕರ ಯುದ್ಧದ ನಡುವೆ ಅಜಿತ್ ಧೋವಲ್ ರಷ್ಯಾದ ಅಧ್ಯಕ್ಷ ವ್ಲಾಡಮೀರ್ ಪುಟೀನ್ ಅವರನ್ನು ಭೇಟಿಯಾಗುತ್ತಿರುವುದು ಅನೇಕ ಊಹಾಪೋಹಗಳಿಗೆ ಕಾರಣವಾಗಿದೆ. ಇದು ರಷ್ಯಾ, ಉಕ್ರೇನ್ ನಡುವಿನ ಸಂಘರ್ಷವನ್ನು ಕೊನೆಗಾಣಿಸುವ ಶಾಂತಿ ಉಭಯ ದೇಶಗಳ ನಡುವೆ ಶಾಂತಿ ಸ್ಥಾಪನೆಗಾಗಿ ಅಜಿತ್​ ಧೋವಲ್​ ಹೊರಟಿದ್ದಾರೆ ಎಂಬ ಮಾತುಗಳು ಸದ್ಯ ಅಂತಾರಾಷ್ಟ್ರೀಯ ವಲಯದಲ್ಲಿ ಕೇಳಿ ಬರುತ್ತಿದೆ.

Advertisment

publive-image

ಇದನ್ನೂ ಓದಿ:ಡಿಕೆ ಶಿವಕುಮಾರ್​​​ಗೆ ಸ್ಪೆಷಲ್ ಆಹ್ವಾನ ಕೊಟ್ಟ ಕಮಲಾ ಹ್ಯಾರಿಸ್; ಕುತೂಹಲ ಮೂಡಿಸಿದ ಅಮೆರಿಕದ ಈ ನಡೆ..!

ಈಗಾಗಲೇ ಉಕ್ರೇನ್ ಹಾಗೂ ರಷ್ಯಾ ನಡುವಿನ ಯುದ್ಧವನ್ನು ಕೊನೆಗೊಳಿಸಲು ಭಾರತ ಮಧ್ಯಸ್ಥಿಕೆವಹಿಸಬೇಕು ಎಂಬ ಮಾತುಗಳು ಕೇಳಿ ಬಂದಿದ್ದವು. ಇತ್ತೀಚೆಗಷ್ಟೇ ಪ್ರಧಾನಿ ನರೇಂದ್ರ ಮೊದಿ ಉಕ್ರೇನ್ ಹಾಗೂ ರಷ್ಯಾ ಎರಡು ದೇಶಕ್ಕೆ ಭೇಟಿ ಕೊಟ್ಟು ಬಂದಿದ್ದರು. ಇದರ ಬೆನ್ನಲ್ಲೆ ಈ ಬೆಳವಣಿಗೆ ನಡೆದಿದೆ. ಅಜಿತ್ ಧೋವಲ್ ಜೊತೆ ಬ್ರಿಕ್ಸ್​ನ ಮಾಜಿ ಅಧಿಕಾರಿಗಳು ಕೂಡ ಭಾಗವಹಿಸಲಿದ್ದಾರೆ ಅವರೊಂದಿಗೆ ಸಭೆ ನಡೆಸುವ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ಧೋವಲ್ ರಷ್ಯಾ ಹಾಗೂ ಚೀನಾದ ಸಮಸ್ಥಾನಿಕರ ಜೊತೆಗೂ ಸಭೆ ನಡೆಸಲಿದ್ದಾರೆ ಎಂಬ ಮಾಹಿತಿ ಬಂದಿದೆ.

ಇದನ್ನೂ ಓದಿ:ಮಗಳ ತಲೆ ಮೇಲೆ CCTV ಫಿಟ್ ಮಾಡಿದ ಫ್ಯಾಮಿಲಿ.. ಪಾಕಿಸ್ತಾನ ಕುಟುಂಬದ ಅಸಲಿ ಪ್ಲಾನ್ ಏನು?

Advertisment

ಇತ್ತೀಚೆಗಷ್ಟೇ ವ್ಲಾಡಮಿರ್ ಪುಟಿನ್​ಗೆ ಕಾಲ್ ಮಾಡಿದ್ದ ನರೇಂದ್ರ ಮೋದಿ ಸದ್ಯದಲ್ಲಿಯೇ ಅಜಿತ್ ಧೋವಲ್ ಮಾಸ್ಕೋಗೆ ಭೇಟಿ ನೀಡಿಲಿದ್ದು, ಉಕ್ರೇನ್ ರಷ್ಯಾದ ಯುದ್ಧದ ವಿಚಾರವಾಗಿ ಶಾಂತಿ ಸ್ಥಾಪನೆಯ ನಿಟ್ಟಿನಲ್ಲಿ ಮಾತುಕತೆ ನಡೆಸಲಿದ್ದಾರೆ ಎಂದು ಹೇಳಿದ್ದರು. ಆದ್ರೆ ಅದು ಯಾವ ದಿನಾಂಕದಂದು ಅಂತ ಮಾತ್ರ ನಿಶ್ಚಯವಾಗಿರಲಿಲ್ಲ. ಸದ್ಯ ಸೆಪ್ಟೆಂಬರ್‌ 10 ರಂದು ಅಜಿತ್ ಧೋವಲ್ ರಷ್ಯಾ ಪ್ರವಾಸ ಬೆಳೆಸಲಿದ್ದು ರಷ್ಯಾ ಹಾಗೂ ಚೀನಾದ ಭದ್ರತಾ ಸಲಹೆಗಾರರೊಂದಿಗೆ ಸಭೆ ನಡೆಸಿ ಮಾತುಕತೆ ನಡೆಸಲಿದ್ದಾರೆ. ಈ ಮಾತುಕತೆ ರಷ್ಯಾ ಉಕ್ರೇನ್ ಯುದ್ಧವನ್ನು ತಡೆದು ಉಭಯ ದೇಶಗಳ ನಡುವೆ ಶಾಂತಿ ಸ್ಥಾಪನೆಗೆ ಮುನ್ನುಡಿ ಬರೆಯಲಿದೆಯಾ ಅನ್ನೋ ಕುತೂಹಲ ಈಗ ಎಲ್ಲರಲ್ಲೂ ಮೂಡಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment