/newsfirstlive-kannada/media/post_attachments/wp-content/uploads/2024/12/AJIT-DOVAL-CHINA-MEET.jpg)
ಭಾರತದ ವಿರುದ್ಧ ಯಾವಾಗ್ಲೂ ಕುತಂತ್ರಿ ಚೀನಾ ಕತ್ತಿಮಸಿಯುತ್ತಲೇ ಇರುತ್ತೆ. ಸುಮ್ಮನೆ ಇರಲಾರದೇ ಗಡಿಯಲ್ಲಿ ಹಿಂದೂಸ್ತಾನವನ್ನ ಕೆೆಣಕುತ್ತೆ. ಆದರೀಗ ಡ್ರ್ಯಾಗನ್ ಕೊಂಚ ಮೆತ್ತಗಾದಂತೆ ಕಾಣುತ್ತಿದೆ. ಭಾರತದ ಜೇಮ್ಸ್ ಬಾಂಡ್ ಚೀನಾಕ್ಕೆ ಭೇಟಿ ಕೊಟ್ಟಿದ್ದು ಇಂಡಿ-ಚೀನಿ ಭಾಯ್‌ಭಾಯ್ ಎಂಬ ಚರ್ಚೆ ಶುರುವಾಗಿದೆ.
ಭಾರತ-ಚೀನಾ ಸಂಬಂಧ 2020ರ ಸಮಯದಲ್ಲಿ ಅತ್ಯಂತ ಸೂಕ್ಷ್ಮ ಸ್ಥಿತಿಗೆ ತಲುಪಿತ್ತು. ಇನ್ನೇನು ಎರಡೂ ದೇಶಗಳ ನಡುವೆ ಯುದ್ಧ ಗ್ಯಾರಂಟಿ ಎಂಬ ಭಯ ಆವರಿಸಿತ್ತು. ಆದ್ರೆ ಕೆಲವು ತಿಂಗಳಿಂದ ಭಾರತ ಮತ್ತು ಚೀನಾ ಸಂಬಂಧ ದೊಡ್ಡ ಮಟ್ಟದಲ್ಲಿ ಸುಧಾರಣೆ ಕಾಣುತ್ತಿದೆ. ಭಾರತದ ಜೇಮ್ಸ್ ಬಾಂಡ್ ಚೀನಾ ನೆಲಕ್ಕೆ ಎಂಟ್ರಿ ಕೊಟ್ಟು ಸಂಚಲನ ಮೂಡಿಸಿದ್ದಾರೆ.
ಚೀನಾಕ್ಕೆ ಭಾರತದ ‘ಜೇಮ್ಸ್ ಬಾಂಡ್’ ಭೇಟಿ
ಚೀನಾ ಹಾಗೂ ಭಾರತದ ನಡುವೆ ಗಡಿ ಸಂಘರ್ಷ ಸಂಬಂಧ ತಿಕ್ಕಾಟ ನಡೆಯುತ್ತಲೇ ಇದೆ. ಗಡಿ ವಿಚಾರವಾಗಿ ಚೀನಾ ಯಾವಾಗಲೂ ಭಾರತದೊಂದಿಗೆ ಕಿರಿಕ್ ಮಾಡಿಕೊಂಡೇ ಬಂದಿದೆ. ಇದೀಗ ಚೀನಾ ಪ್ರವಾಸದಲ್ಲಿರುವ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ನಿನ್ನೆ ಚೀನಾ ವಿದೇಶಾಂಗ ಸಚಿವ ವಾಂಗ್ ಯಿಯನ್ನ ಭೇಟಿ ಮಾಡಿ ಮಹತ್ವದ ಮಾತುಕತೆ ನಡೆಸಿದ್ದಾರೆ.
ಬರೋಬ್ಬರಿ ಐದು ವರ್ಷದ ಬಳಿಕ ಭಾರತ ಮತ್ತು ಚೀನಾ ಗಡಿ ಪ್ರಶ್ನೆಗೆ ಸಂಬಂಧಿಸಿದಂತೆ ಬೀಜಿಂಗ್‌ನಲ್ಲಿ ವಿಶೇಷ ಪ್ರತಿನಿಧಿಗಳ ಸಭೆ ನಡೆದಿದೆ. ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಬೀಜಿಂಗ್‌ಗೆ ಭೇಟಿ ನೀಡಿದ್ದಾರೆ. ಈ ಎಲ್ಲ ಬೆಳವಣಿಗೆ ಮಧ್ಯೆ ಚೀನಾ ಈಗ ಭಾರತದೊಂದಿಗೆ ಕೆಲಸ ಮಾಡಲು ಸಿದ್ದ ಎಂದು ಹೇಳಿದೆ.
ಪೂರ್ವ ಲಡಾಖ್‌ನಲ್ಲಿ ಅಕ್ಟೋಬರ್ 21 ರ ಒಪ್ಪಂದ ಮತ್ತು ಗಸ್ತು ತಿರುಗುವಿಕೆ ನಂತರದ ದ್ವಿಪಕ್ಷೀಯ ಸಂಬಂಧಗಳನ್ನ ಸಾಮಾನ್ಯಗೊಳಿಸಲು ಉಭಯ ದೇಶಗಳ ಮಧ್ಯೆ ಚರ್ಚೆ ನಡೆದಿದೆ. ಪೂರ್ವ ಲಡಾಖ್‌ನಲ್ಲಿನ ಮಿಲಿಟರಿ ಬಿಕ್ಕಟ್ಟಿನಿಂದಾಗಿ ಕಳೆದ ನಾಲ್ಕು ವರ್ಷಗಳಿಂದ ಸ್ಥಗಿತಗೊಂಡ ದ್ವಿಪಕ್ಷೀಯ ಸಂಬಂಧಗಳ ಮರುಸ್ಥಾಪನೆ ಸೇರಿದಂತೆ ಹಲವು ವಿಚಾರಗಳ ಬಗ್ಗೆ ದೋವಲ್ ಮತ್ತು ವಾಂಗ್ ಯಿ ಚರ್ಚೆ ನಡೆಸಿದ್ದಾರೆ. ಈ ಮೂಲಕ ಎಲ್‌ಎಸಿಯಲ್ಲಿ ಶಾಂತಿ ಕಾಪಾಡುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ ಇಡಲಾಗಿದೆ.
ಮತ್ತೆ ಆರಂಭವಾಗುತ್ತಾ ಕೈಲಾಶ್-ಮಾನಸಸರೋವರ ಯಾತ್ರೆ?
ಇನ್ನೂ ಭಾರತ-ಚೀನಾದ ಮಾತುಕತೆಯಿಂದ ಮತ್ತೆ ಕೈಲಾಶ್ ಮತ್ತು ಮಾನಸಸರೋವರ ಯಾತ್ರೆ ಆರಂಭವಾಗುವ ಸಾಧ್ಯತೆ ಇದೆ ಎನ್ನಲಾಗ್ತಿದೆ. ಯಾತ್ರೆಯನ್ನು ಪುನರಾರಂಭಿಸಲು ಕೇಂದ್ರವು ಚೀನಾದ ಅಧಿಕಾರಿಗಳೊಂದಿಗೆ ರಾಜತಾಂತ್ರಿಕವಾಗಿ ಮಾತುಕತೆಯನ್ನೂ ನಡೆಸಿದೆ. ಜೊತೆಗೆ ಪ್ರಮುಖ 6 ನಿರ್ಧಾರಗಳನ್ನ ಕೈಗೊಳ್ಳುವ ಸಾಧ್ಯತೆಯೂ ಇದೆ.
ವಿಶ್ವದಲ್ಲಿ ಭಾರತ ಪ್ರಬಲ ರಾಷ್ಟ್ರವಾಗಿ ಬೆಳೆಯುತ್ತಿದೆ. ಇದು ಚೀನಾಕ್ಕೂ ಅರ್ಥವಾಗುತ್ತಿದೆ. ಹೀಗಾಗಿ ಭಾರತದ ಜೊತೆ ಮತ್ತೆ ಸಂಬಂಧ ಗಟ್ಟಿಗೊಳಿಸುವ ಪ್ರಯತ್ನದಲ್ಲಿ ತೊಡಗಿದೆ. ಆದ್ರೆ, ಚೀನಾದ ನಿಯತ್ತು ಅದೆಷ್ಟು ದಿನವೋ? ಏನೋ? ನಂಬಲು ಅಸಾಧ್ಯ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ