/newsfirstlive-kannada/media/post_attachments/wp-content/uploads/2025/06/MNG-CAR.jpg)
ಮಂಗಳೂರಿನ ಜೆಪ್ಪಿನಮೊಗರು ರಾಷ್ಟ್ರೀಯ ಹೆದ್ದಾರಿಯಲ್ಲಿ ತಡರಾತ್ರಿ ಭೀಕರ ರಸ್ತೆ ಅಪಘಾತ ಸಂಭವಿಸಿದೆ. ದುರ್ಘಟನೆಯಲ್ಲಿ NSUI ಮುಖಂಡ ಓಂ ಶ್ರೀ ಹಾಗೂ ಕದ್ರಿ ನಿವಾಸಿ ಅಮನ್ ರಾವ್ ಜೀವ ಕಳೆದುಕೊಂಡಿದ್ದಾರೆ.
ಚಾಲಕನ ಅತೀ ವೇಗಕ್ಕೆ Volkswagen ಕಾರು ಪುಡಿಪುಡಿ ಆಗಿದೆ. ಕಾರಿನಲ್ಲಿದ್ದ ಐವರು ಯುವಕರ ಪೈಕಿ ಇಬ್ಬರ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ವಂಶಿ ಮತ್ತು ಆಶಿಕ್ಗೆ ಗಂಭೀರ ಗಾಯಗಳಾಗಿದ್ದು, ಐಸಿಯುನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಇನ್ನೊಬ್ಬ ಗೆಳೆಯ ಇಟಲಿ ಮೂಲದ ಜೆರ್ರಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಕಾರು ತಲಪಾಡಿಯಿಂದ ಮಂಗಳೂರಿಗೆ ಸಂಚಾರ ಮಾಡುತ್ತಿತ್ತು.. ಮೃತ ಇಬ್ಬರು ಯುವಕರು ಕಾಂಗ್ರೆಸ್ ಪಕ್ಷದಲ್ಲಿ ಗುರುತಿಸಿಕೊಂಡಿದ್ದರು. ದಕ್ಷಿಣ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ..
ಇದನ್ನೂ ಓದಿ: ಕೊಟ್ಟಿಯೂರು ದೇವಸ್ಥಾನಕ್ಕೆ ಭೇಟಿ ಕೊಟ್ಟ ನಟ ದರ್ಶನ್ ದಂಪತಿ; ವಿಶೇಷತೆ ಏನು?
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ