150 ಉಪ ವ್ಯವಸ್ಥಾಪಕರ ಹುದ್ದೆಗಳಿಗೆ ಅರ್ಜಿ ಆಹ್ವಾನ.. ಆರಂಭದಲ್ಲೇ 70 ಸಾವಿರ ರೂಪಾಯಿ ವೇತನ!

author-image
Bheemappa
ನೌಕಾಪಡೆಯ ವೈದ್ಯಕೀಯ ಸಹಾಯಕ ಹುದ್ದೆಗಳಿಗೆ ಈ ಕೂಡಲೇ ಅಪ್ಲೇ ಮಾಡಿ.. ಸಂಬಳ ಎಷ್ಟು?
Advertisment
  • ನಲವತ್ತು ವರ್ಷದ ಒಳಗಿನ ಅಭ್ಯರ್ಥಿಗಳು ಈ ಕೆಲಸಗಳಿಗೆ ಅರ್ಹರು
  • ಯಾವ ಕೋರ್ಸ್ ಮಾಡಿದವ್ರು ಈ ಕೆಲಸಗಳಿಗೆ ಅರ್ಹರು ಆಗುತ್ತಾರೆ?
  • ಉದ್ಯೋಗ ಹುಡುಕುತ್ತಿರುವ ಅಭ್ಯರ್ಥಿಗಳಿಗೆ ಒಂದು ಒಳ್ಳೆ ಅವಕಾಶ

ನ್ಯಾಷನಲ್ ಥರ್ಮಲ್ ಪವರ್ ಕಾರ್ಪೊರೇಷನ್ (ಎನ್​​​ಟಿಪಿಸಿ)ನಲ್ಲಿ ಉದ್ಯೋಗಗಳಿಗೆ ಈಗಾಗಲೇ ಅರ್ಜಿಗಳನ್ನು ಆಹ್ವಾನ ಮಾಡಲಾಗಿತ್ತು. ಈ ಉದ್ಯೋಗಗಳಿಗೆ ಅರ್ಜಿ ಸಲ್ಲಿಕೆ ಮಾಡಲು ಜೂನ್ 9ರಂದು ಕಡೆಯ ದಿನವಾಗಿದೆ. ಹೀಗಾಗಿ ಯಾರು ಯಾರು ಈ ಕೆಲಸಗಳಿಗೆ ಅರ್ಜಿ ಸಲ್ಲಿಕೆ ಮಾಡಿಲ್ಲವೋ ಅಂತಹ ಅಭ್ಯರ್ಥಿಗಳು ಜೂನ್ 9ರ ಸಂಜೆಯ ಒಳಗಾಗಿ ಅರ್ಜಿ ಸಲ್ಲಿಕೆ ಮಾಡಬಹುದು.

ಭಾರತದ ಪ್ರಮುಖ ಸಮಗ್ರ ವಿದ್ಯುತ್ ಕಂಪನಿ ಎಂದು ಎನ್​​​ಟಿಪಿಸಿ ಸಂಸ್ಥೆ ಗುರುತಿಸಿಕೊಂಡಿದೆ. ಇದು ದೇಶದ ಇಂಧನ ಕ್ಷೇತ್ರದಲ್ಲಿ ಮುಖ್ಯ ಪಾತ್ರ ವಹಿಸುತ್ತಿದೆ. ಹುದ್ದೆಗೆ ಬೇಕಾದ ವಿದ್ಯಾರ್ಹತೆ ವಿವರಗಳು, ವಯಸ್ಸಿನ ಮಿತಿ, ಆಯ್ಕೆ ಪ್ರಕ್ರಿಯೆ, ಅರ್ಜಿ ಶುಲ್ಕ, ಸಂಬಳ ಮತ್ತು ಕೊನೆಯ ದಿನಾಂಕ, ವೇತನ ಶ್ರೇಣಿ ಇತ್ಯಾದಿ ಮಾಹಿತಿ ಇಲ್ಲಿದೆ.

ಹುದ್ದೆಯ ಹೆಸರು ಹಾಗೂ ಒಟ್ಟು ಉದ್ಯೋಗಗಳು
ಉಪ ವ್ಯವಸ್ಥಾಪಕರು (Deputy Manager)
ಒಟ್ಟು ಹುದ್ದೆಗಳು- 150

ಹುದ್ದೆಗಳು ವರ್ಗೀಕರಣ ಹೇಗಿದೆ?
ಉಪ ವ್ಯವಸ್ಥಾಪಕ ಎಲೆಕ್ಟ್ರಿಕಲ್- 40 ಹುದ್ದೆಗಳು
ಉಪ ವ್ಯವಸ್ಥಾಪಕ ಮೆಕಾನಿಕಲ್- 70 ಹುದ್ದೆಗಳು
ಉಪ ವ್ಯವಸ್ಥಾಪಕ- ಸಿ & ಐ- 40 ಹುದ್ದೆಗಳು

ಇದನ್ನೂ ಓದಿ: NHM ಉದ್ಯೋಗ ಆಕಾಂಕ್ಷಿಗಳಿಗೆ ಭರ್ಜರಿ ಗುಡ್​ನ್ಯೂಸ್​.. ಬಿಗ್ ಆಫರ್ ಕೊಟ್ಟ ಆರೋಗ್ಯ ಇಲಾಖೆ..!

publive-image

ವಿದ್ಯಾರ್ಹತೆ- ಬಿಇ, ಬಿಟೆಕ್

ಮಾಸಿಕ ವೇತನ ಶ್ರೇಣಿ-
70,000 ದಿಂದ 2,00,000 ರೂಪಾಯಿ

ವಯೋಮಿತಿ- 40 ವರ್ಷದ ಒಳಗಿನವರಿಗೆ ಅವಕಾಶ

ಅರ್ಜಿ ಶುಲ್ಕ ಎಷ್ಟು ಇದೆ?
ಎಸ್​ಸಿ, ಎಸ್​ಟಿ, ವಿಶೇಷ ಚೇತನ, ಮಹಿಳೆಯರು- ಶುಲ್ಕ ಇಲ್ಲ
ಓಬಿಸಿ, ಜನರಲ್ ಸೇರಿ ಎಲ್ಲ ಅಭ್ಯರ್ಥಿಗಳು- 150 ರೂಪಾಯಿ

ಆಯ್ಕೆ ಪ್ರಕ್ರಿಯೆ

ಲಿಖಿತ ಪರೀಕ್ಷೆ
ಸಂದರ್ಶನ

ಮುಖ್ಯವಾದ ದಿನ
ಅರ್ಜಿ ಸಲ್ಲಿಕೆ ಮಾಡಲು 09 ಜೂನ್ 2025 ಕಡೆಯ ದಿನ

ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment