/newsfirstlive-kannada/media/post_attachments/wp-content/uploads/2025/01/JOB_aspirant.jpg)
ನ್ಯಾಷನಲ್ ಥರ್ಮಲ್ ಪವರ್ ಕಾರ್ಪೊರೇಷನ್ (ಎನ್ಟಿಪಿಸಿ)ನಲ್ಲಿ ಉದ್ಯೋಗ ಮಾಡಲು ಬಯಸುವವರಿಗೆ ಇಲ್ಲೊಂದು ಶುಭಸುದ್ದಿ ಇದೆ. ಈಗಾಗಲೇ ಹುದ್ದೆಗಳನ್ನು ಹುಡುಕಲು ಪ್ರಾರಂಭಿಸಿದ ಅಭ್ಯರ್ಥಿಗಳು ಈ ಕೆಲಸಗಳಿಗೆ ಪ್ರಯತ್ನ ಮಾಡಬಹುದು. ಒಳ್ಳೆಯ ಸಂಸ್ಥೆ ಹಾಗೂ ಉತ್ತಮ ಉದ್ಯೋಗ ಆಗಿದ್ದರಿಂದ ಉದ್ಯೋಗಾಕಾಂಕ್ಷಿಗಳು ಆಗಿವೆ. ಇವುಗಳಿಗೆ ಇಂದಿನಿಂದಲೇ ಆನ್ಲೈನ್ ಮೂಲಕ ಅರ್ಜಿ ಸಲ್ಲಿಕೆ ಮಾಡಬಹುದು.
ಎನ್ಟಿಪಿಸಿ ಸಂಸ್ಥೆ ಭಾರತದ ಪ್ರಮುಖ ಸಮಗ್ರ ವಿದ್ಯುತ್ ಕಂಪನಿ ಎಂದು ಗುರುತಿಸಲ್ಪಟ್ಟಿದೆ. ಎನ್ಟಿಪಿಸಿ ಲಿಮಿಟೆಡ್ ದೇಶದ ಇಂಧನ ಕ್ಷೇತ್ರದಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಇನ್ನು ಈ ಸಂಸ್ಥೆ ಕರೆದಿರುವ ಉದ್ಯೋಗಗಳು ಯಾವುವು, ವಿದ್ಯಾರ್ಹತೆ ಯಾವುದು ಆಗಿರಬೇಕು, ಅರ್ಜಿ ಶುಲ್ಕ, ಅಭ್ಯರ್ಥಿಗಳ ವಯಸ್ಸಿನ ಮಿತಿ, ಅಂತಿಮ ದಿನಾಂಕ, ವೇತನ ಶ್ರೇಣಿ ಇತ್ಯಾದಿ ಮಾಹಿತಿ ಈ ಕೆಳಗೆ ಇದೆ. ಎಲ್ಲವನ್ನೂ ಗಮನದಲ್ಲಿಟ್ಟು ಓದಿದ ಬಳಿಕ ಅರ್ಜಿ ಸಲ್ಲಿಕೆಗೆ ಮುಂದಾಗಿ.
ಉದ್ಯೋಗದ ಹೆಸರು-
ಉಪ ವ್ಯವಸ್ಥಾಪಕರು (Deputy Manager)
- ಉಪ ವ್ಯವಸ್ಥಾಪಕ ಎಲೆಕ್ಟ್ರಿಕಲ್- 40 ಹುದ್ದೆಗಳು
- ಉಪ ವ್ಯವಸ್ಥಾಪಕ ಮೆಕಾನಿಕಲ್- 70 ಹುದ್ದೆಗಳು
- ಉಪ ವ್ಯವಸ್ಥಾಪಕ- ಸಿ & ಐ- 40 ಹುದ್ದೆಗಳು
ಒಟ್ಟು ಹುದ್ದೆಗಳು- 150
ಇದನ್ನೂ ಓದಿ:ಹುದ್ದೆಗಳಿಗೆ ಅರ್ಜಿ ಆಹ್ವಾನ.. ಪ್ರೊಬೇಷನರಿ ಅವಧಿ ಪೂರ್ಣಗೊಳಿಸಿದ್ರೆ 50 ಸಾವಿರಕ್ಕಿಂತ ಹೆಚ್ಚು ಸ್ಯಾಲರಿ
ಅರ್ಜಿ ಶುಲ್ಕ ಎಷ್ಟು ಇದೆ?
ಎಸ್ಸಿ, ಎಸ್ಟಿ, ವಿಶೇಷ ಚೇತನ ಹಾಗೂ ಮಹಿಳೆಯರನ್ನು ಹೊರತು ಪಡಿಸಿ ಉಳಿದ ಎಲ್ಲ ಅಭ್ಯರ್ಥಿಗಳಿಗೆ 150 ರೂಪಾಯಿಗಳು
ವಯಸ್ಸು- 40 ವರ್ಷದ ಒಳಗಿನವರಿಗೆ ಅವಕಾಶ
ವಿದ್ಯಾರ್ಹತೆ- ಬಿಇ, ಬಿಟೆಕ್
ವೇತನ ಶ್ರೇಣಿ- 70,000 ದಿಂದ 2,00,000 ರೂಪಾಯಿಗಳು
ಆಯ್ಕೆ ಪ್ರಕ್ರಿಯೆ
ಲಿಖಿತ ಪರೀಕ್ಷೆ
ಸಂದರ್ಶನ
ಉದ್ಯೋಗದ ಮುಖ್ಯವಾದ ದಿನಗಳು
ಅರ್ಜಿ ಸಲ್ಲಿಕೆ ಮಾಡಲು ಆರಂಭದ ದಿನಾಂಕ- 26 ಮೇ 2025
ಅರ್ಜಿ ಸಲ್ಲಿಕೆ ಮಾಡಲು ಕೊನೆಯ ದಿನಾಂಕ- 09 ಜೂನ್ 2025
ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ