/newsfirstlive-kannada/media/post_attachments/wp-content/uploads/2024/08/JOB_1.jpg)
NTPC ಗ್ರೀನ್ ಎನರ್ಜಿ ಲಿಮಿಟೆಡ್ ಎಂಜಿನಿಯರ್, ಕಾರ್ಯನಿರ್ವಾಹಕ ನೇಮಕಾತಿ 2025 ಅಧಿಸೂಚನೆಯನ್ನು ಬಿಡುಗಡೆ ಮಾಡಲಾಗಿದೆ. ಈ ಉದ್ಯೋಗಗಳಿಗೆ ಆಸಕ್ತಿ ಇರುವ ಅರ್ಹ ಅಭ್ಯರ್ಥಿಗಳು ಆನ್‌ಲೈನ್ ಮೂಲಕ ಇಲಾಖೆಯ ವೆಬ್ಸೈಟ್ನಿಂದ ಅರ್ಜಿ ಸಲ್ಲಿಕೆ ಮಾಡಬಹುದು. ಉದ್ಯೋಗದ ಇತರೆ ಎಲ್ಲ ಮಾಹಿತಿ ಈ ಕೆಳಕಂಡಂತೆ ಇದೆ.
ಖಾಲಿ ಹುದ್ದೆಗಳು ಎಷ್ಟು ಇವೆ, ವಯಸ್ಸಿನ ಮಿತಿ, ಅರ್ಜಿ ಶುಲ್ಕ, ಆಯ್ಕೆ ಪ್ರಕ್ರಿಯೆ ಮತ್ತು ಅರ್ಜಿ ಸಲ್ಲಿಸುವ ವಿಧಾನ ಸೇರಿ ಇತರೆ ಮಾಹಿತಿ ಈ ಲೇಖನದಲ್ಲಿ ನೀಡಲಾಗಿದೆ. ವಿಜ್ಞಾನ ಅಥವಾ ಇಂಜಿನಿಯರಿಂಗ್ ವಿಭಾಗದಲ್ಲಿ ವ್ಯಾಸಂಗ ಮಾಡಿದ ಅಭ್ಯರ್ಥಿಗಳಿಗೆ ಈ ಹುದ್ದೆಗಳು ಅನ್ವಯ ಆಗುತ್ತವೆ. ಸುವರ್ಣಾವಕಾಶ ನಿಮ್ಮನ್ನು ಹುಡುಕಿಕೊಂಡು ಬಂದಿದ್ದು ಮಿಸ್ ಮಾಡಿಕೊಳ್ಳಬೇಡಿ. ಅವಕಾಶವನ್ನು ಸದುಪಯೋಗ ಮಾಡಿಕೊಳ್ಳಿ.
ಉದ್ಯೋಗದ ಹೆಸರು ಹಾಗೂ ಎಷ್ಟು ಹುದ್ದೆಗಳು?
- ಇಂಜಿನಿಯರ್ (ಆರ್ಇ-ಸಿವಿಲ್)- 40
- ಇಂಜಿನಿಯರ್ (ಆರ್ಇ-ಎಲೆಕ್ಟ್ರಿಕಲ್)- 80
- ಇಂಜಿನಿಯರ್ (ಆರ್ಇ-ಮೆಕಾನಿಕಲ್)- 15
- ಎಕ್ಸಕ್ಯೂಟಿವ್ (ಆರ್ಇ-ಹೆಚ್ಆರ್)- 07
- ಎಕ್ಸಕ್ಯೂಟಿವ್ (ಆರ್ಇ-ಫೈನಾನ್ಸ್)- 26
- ಇಂಜಿನಿಯರ್ (ಆರ್ಇ-ಐಟಿ)- 04
- ಇಂಜಿನಿಯರ್ (ಆರ್ಇ- ಸಿ ಮತ್ತು ಎಂ)- 10
ಒಟ್ಟು 182 ಉದ್ಯೋಗಗಳು ಇವೆ
ಇದನ್ನೂ ಓದಿ:ಶಾಸಕಾಂಗ ಇಲಾಖೆಯಲ್ಲಿ ಕಚೇರಿ ಸಹಾಯಕರ ಹುದ್ದೆಗಳು ಖಾಲಿ ಖಾಲಿ.. ಕೂಡಲೇ ಅರ್ಜಿ ಸಲ್ಲಿಸಿ
ವಿದ್ಯಾರ್ಹತೆ- ಬಿಇ, ಬಿಟೆಕ್,
ಅರ್ಜಿ ಶುಲ್ಕ-
ಸಾಮಾನ್ಯ, ಒಬಿಸಿ ಅಭ್ಯರ್ಥಿಗಳಿಗೆ 500 ರೂಪಾಯಿ
ಇತರೆ ಅಭ್ಯರ್ಥಿಗಳಿಗೆ ಯಾವುದೇ ಅರ್ಜಿ ಶುಲ್ಕ ಇರುವುದಿಲ್ಲ
ವಯಸ್ಸು- 30 ವರ್ಷದ ಒಳಗಿನ ಅಭ್ಯರ್ಥಿಗಳಿಗೆ ಅವಕಾಶ
ಆಯ್ಕೆ ಮಾಡುವುದು ಹೇಗೆ?
ಅಭ್ಯರ್ಥಿಗಳ ಹೆಸರನ್ನು ಶಾರ್ಟ್ ಲಿಸ್ಟ್ ಮಾಡಲಾಗುತ್ತದೆ. ಇದರಲ್ಲಿ ಆಯ್ಕೆ ಆದವರಿಗೆ ಲಿಖಿತ ಪರೀಕ್ಷೆ ನಡೆಸಲಾಗುತ್ತದೆ. ಪರೀಕ್ಷೆಯಲ್ಲಿ ಪಾಸ್ ಆದವರಿಗೆ ಸಂದರ್ಶನ ನಡೆಸಿ ಉದ್ಯೋಗಕ್ಕೆ ಆಯ್ಕೆ ಮಾಡಲಾಗುತ್ತದೆ.
ಮುಖ್ಯವಾದ ದಿನಾಂಕ
ಅರ್ಜಿ ಸಲ್ಲಿಕೆ ಮಾಡುವ ದಿನಾಂಕ- 11 ಏಪ್ರಿಲ್ 2025
ಅರ್ಜಿ ಸಲ್ಲಿಕೆಗೆ ಕೊನೆ ದಿನಾಂಕ- 01 ಮೇ 2025
ಅಭ್ಯರ್ಥಿಗಳು ಸಂಸ್ಥೆಯ ವೆಬ್ಸೈಟ್ಗೆ ಭೇಟಿ ನೀಡಿ ವೆಬ್ಪೇಜ್ನಲ್ಲಿ ನೇಮಕಾತಿಯನ್ನು ಕ್ಲಿಕ್ ಮಾಡಿ. ಅಪ್ಲಿಕೇಷನ್ ವಿಂಡೋ ಓಪನ್ ಆಗುತ್ತದೆ. ಇದರಲ್ಲಿ ಅರ್ಜಿ ಸಲ್ಲಿಕೆ ಮಾಡಬಹುದು. ಸಂಪರ್ಕಕ್ಕಾಗಿ ಅಭ್ಯರ್ಥಿಗಳು ಇ-ಮೇಲ್ ಐಡಿಯನ್ನು ಸರಿಯಾಗಿ ನಮೂದಿಸಬೇಕು.
ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ