/newsfirstlive-kannada/media/post_attachments/wp-content/uploads/2025/03/NURSE-LEELAMMA.jpg)
ಅಮೆರಿಕದಲ್ಲಿ ಕರಿಯ-ಬಿಳಿಯ ಅನ್ನೋ ಗಲಾಟೆಗಳಿಗೇನೂ ಕಮ್ಮಿಯಿಲ್ಲ. ಇದೀಗ ಅಲ್ಲಿನ ಪ್ರಜೆಯೊಬ್ಬ ಭಾರತೀಯ ಮೂಲದ ನರ್ಸ್ (Nurse) ಮೇಲೆ ಕ್ರೂರವಾಗಿ ಹಲ್ಲೆ ಮಾಡಿದ್ದಾನೆ. ಈ ಕೃತ್ಯವನ್ನು ಭಾರತ ಮಾತ್ರವಲ್ಲದೇ ವಿಶ್ವದ ಅನೇಕ ರಾಷ್ಟ್ರಗಳು ಆಕ್ರೋಶ ವ್ಯಕ್ತಪಡಿಸಿವೆ.
ಭಾರತೀಯರು ಕೆಟ್ಟವರು ಎನ್ನುತ್ತ ಹಲ್ಲೆ
ಫ್ಲೋರಿಡಾದ ಪಾಮ್ ಬೀಚ್‌ನಲ್ಲಿರುವ ಪಾಮ್ಸ್ ವೆಸ್ಟ್ ಆಸ್ಪತ್ರೆಯಲ್ಲಿ (Palm Beach County hospital) ಭಾರತ ಮೂಲದ ನರ್ಸ್ ಮೇಲೆ ಸ್ಟೀಫನ್ ಸ್ಕ್ಯಾಂಟಲ್‌ಬರಿ (Stephen Scantlebury) ಎಂಬಾತ ಹಲ್ಲೆ ಮಾಡಿದ್ದಾನೆ. ಭಾರತೀಯರು ಕೆಟ್ಟವರು ಎಂದು ಹೇಳಿ ಹಲ್ಲೆ ಮಾಡಿದ್ದಾನೆ. ಲೀಲಮ್ಮ ಲಾಲ್ (Leelamma Lal) ಅಲ್ಲೆಗೆ ಒಳಗಾದ ಸಂತ್ರಸ್ತೆ. 67 ವರ್ಷದ ಲೀಲಮ್ಮ, ಭಾರತ ಮೂಲದವರಾಗಿದ್ರೂ ಅಮೆರಿಕಲ್ಲಿ ನರ್ಸ್ ಆಗಿ ಸೇವೆ ಸಲ್ಲಿಸುತ್ತಿದ್ದಾರೆ.
ಇದನ್ನೂ ಓದಿ: ಬೀದಿ ಬದಿ ಕಟ್ ಮಾಡಿಟ್ಟ ಹಣ್ಣು ತಿನ್ನೋರೇ ಎಚ್ಚರ! ಸಾರ್ವಜನಿಕರು ಓದಲೇಬೇಕಾದ ಸ್ಟೋರಿ
ಇದೇ ಮಾರ್ಚ್ 4 ರಂದು ಲೀಲಮ್ಮ ಮೇಲೆ ಹಲ್ಲೆ ಹೆಚ್‌ಸಿಎ ಫ್ಲೋರಿಡಾ ಪಾಮ್ಸ್ ವೆಸ್ಟ್ ಆಸ್ಪತ್ರೆಯಲ್ಲಿ ಮನೋ ರೋಗಿಯಾಗಿದ್ದ ಸ್ಕ್ಯಾಂಟಲ್‌ಬರಿ ಹಲ್ಲೆ ಮಾಡಿದ್ದಾನೆ. ಹಲ್ಲೆಗೊಳಗಾದ ಲೀಲಮ್ಮ ಅವರ ಮುಖದ ಭಾಗಕ್ಕೆ ಗಂಭೀರ ಗಾಯಗಳಾಗಿವೆ. ಭುಜದ ಮೂಳೆಗಳು ಮುರಿದಿದ್ದು, ಮೆದುಳಿನಲ್ಲಿ ರಕ್ತಸ್ರಾವವಾಗಿದೆ. ನರ್ಸ್ ಲೀಲಮ್ಮಗೆ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗ್ತಿದೆ.
ಹಲ್ಲೆಯ ಬಗ್ಗೆ ಲೀಲಮ್ಮ ಅವರ ಮಗಳು ಸಿಂಡಿ ಜೋಸೆಫ್ ಪ್ರತಿಕ್ರಿಯಿಸಿ.. ಹಲ್ಲೆಯ ತೀವ್ರತೆಗೆ ಅಮ್ಮನ ಮೆದುಳಿನಲ್ಲಿ ರಕ್ತಸ್ರಾವ ಆಗಿದೆ. ಕಣ್ಣಿನ ಭಾಗಕ್ಕೂ ಬಲವಾಗಿ ಪೆಟ್ಟು ಬಿದ್ದಿದ್ದು, ಕಣ್ಣುಗಳು ಊದಿಕೊಂಡಿವೆ. ಅದ್ಯಾವ ಲೆವೆಲ್ಗೆ ಅಂದ್ರೆ ನನಗೆ ಅಮ್ಮನ ಗುರುತಿಸಲು ಸಾಧ್ಯವಾಗಲಿಲ್ಲ ಎಂದು ಕಣ್ಣೀರು ಹಾಕಿದ್ದಾರೆ.
ಇದನ್ನೂ ಓದಿ: ಆತುರದ ಕೆಲಸಗಳಿಂದ ತೊಂದರೆ, ಹಣಕಾಸಿನ ವಿಚಾರದಲ್ಲಿ ಸ್ವಲ್ಪ ಸಮಾಧಾನ; ಇಲ್ಲಿದೆ ಇಂದಿನ ರಾಶಿ ಭವಿಷ್ಯ!
ಹಲ್ಲೆ ನಡೆಸಿದ ಬಗ್ಗೆ ಆರೋಪಿ ಸ್ಕ್ಯಾಂಟಲ್‌ಬರಿ ಬಳಿ ವಿಚಾರಣೆ ನಡೆಸಿದಾಗ`ಭಾರತೀಯರು ಕೆಟ್ಟವರು. ಅದಕ್ಕೆ ಹಲ್ಲೆ ಮಾಡ್ದೆ ಅಂತಾ ಹೇಳಿದ್ದಾನೆ. ಇನ್ನೂ ಆರೋಪಿಯನ್ನ ಬಂಧಿಸಿದಾಗ ಆತನ ಮೈ ಮೇಲೆ ಶರ್ಟ್ ಮತ್ತು ಚಪ್ಪಲಿ ಧರಿಸಿರಲಿಲ್ಲ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ