/newsfirstlive-kannada/media/post_attachments/wp-content/uploads/2024/11/DIARY-MILK-AND-NUT-MILK.jpg)
ನಟ್ ಮಿಲ್ಕ್ ಅಂದ್ರೆ ಬಾದಾಮಿ ಹಾಲು ಹಾಗೆ ಇನ್ನುಳಿದ ಡ್ರೈಫ್ರೂಟ್ಸ್ಗಳ ಹಾಲು ಹಾಗೂ ಡೈರಿ ಹಾಲು ಈ ಎರಡು ಹಾಲುಗಳಲ್ಲಿ ಆರೋಗ್ಯಕ್ಕೆ ಯಾವುದು ಒಳ್ಳೆಯದು ಎಂಬ ವಾದ ಈ ಹಿಂದಿನಿಂದಲೂ ನಡೆದುಕೊಂಡು ಬಂದಿದೆ. ಯಾವ ಹಾಲು ಹೆಚ್ಚು ಜೀವಸತ್ವ, ಪೌಷ್ಠಿಕಾಂಶ ಪೋಷಕಾಂಶಗಳನ್ನು ಹೊಂದಿದೆ. ಇದರಲ್ಲಿ ನಿತ್ಯ ಜೀವನದ ಬಳಕೆಗೆ ಯಾವುದು ಉತ್ತಮ ಎಂಬ ಮಾತುಗಳು ನಾವು ಆಗಾಗ ಕೇಳಿರುತ್ತೇವೆ.
ನಟ್ ಮಿಲ್ಕ್ ವಿಚಾರಕ್ಕೆ ಬಂದಾಗ ನಾವು ಸಾಮಾನ್ಯವಾಗಿ ಬಾದಾಮಿ ಗೊಡಂಬಿ ಹಾಗೂ ಓಟ್ಸ್ಗಳನ್ನು ಡೈರಿ ಹಾಲಿನಲ್ಲಿಯೇ ಬೆರೆಸಿ ಕುಡಿಯುತ್ತೇವೆ. ಇದರಿಂದಾಗಿ ಹೆಚ್ಚು ಜೀವಸತ್ವಗಳು ಹಾಗೂ ಪೋಷಕಾಂಶಗಳು ದೇಹಕ್ಕೆ ಸೇರುತ್ತದೆ ಎಂಬ ಉದ್ದೇಶದಿಂದ. ಡೈರಿ ಮಿಲ್ಕ್ ಕೂಡ ದೇಹಕ್ಕೆ ಅನೇಕ ರೀತಿಯ ಆರೋಗ್ಯದ ಪ್ರಯೋಜನಗಳನ್ನು ನೀಡುತ್ತದೆ. ಇದರಲ್ಲಿ ಅತಿಹೆಚ್ಚು ಕ್ಯಾಲ್ಸಿಯಂ, ಪ್ರೊಟೀನ್ ಹಾಗೂ ವಿಟಮಿನ್ ಡಿ ಅಂಶಗಳು ಇರುತ್ತವೆ. ಈ ನಟ್ ಮಿಲ್ಕ್ಗೆ ಹೋಲಿಸಿ ನೋಡಿದರೆ ಡೈರಿ ಹಾಲಿನಲ್ಲಿ ಹೆಚ್ಚು ಪ್ರೊಟೀನ್ ಅಂಶವಿರುವುದು ಕಂಡು ಬರುತ್ತದೆ. ಆದ್ರೆ ಡೈರಿ ಹಾಲಿಗೆ ಹೋಲಿಸಿ ನೋಡಿದಾಗ ಈ ಡ್ರೈಫ್ರೂಟ್ಸ್ಗಳ ಹಾಲು ಹೆಚ್ಚು ಆರೋಗ್ಯಕ್ಕೆ ಅನಕೂಲಕರ ಎಂದು ಹೇಳಲಾಗುತ್ತದೆ.
ಇದನ್ನೂ ಓದಿ: ಬಿಲಿಯನೇರ್ ಲೇಡಿ ಶಾಲಿನಿ ಪಸ್ಸಿ ಲೈಫ್ ಹೇಗಿದೆ ಗೊತ್ತಾ? ಒಂದು ಸಾರಿ ಧರಿಸಿದ ಬಟ್ಟೆ ತಿರುಗಿ ಕೂಡ ನೋಡಿಲ್ಲ ಈ
ಜೀವನ ಕ್ರಮ ಹಾಗೂ ಆಹಾರ ಕ್ರಮವನ್ನು ಗಮನದಲ್ಲಿಟ್ಟುಕೊಂಡು ನೋಡಿದಾಗ ನಟ್ ಮಿಲ್ಕ್ ಹಾಗೂ ಡೈರಿ ಮಿಲ್ಕ್ಗಳಲ್ಲಿ ಒಂದನ್ನು ಆಯ್ಕೆ ಮಾಡುವುದು ಅಷ್ಟು ಸರಳವಲ್ಲ. ಆದರೆ ಅನೇಕ ವಿಚಾರಗಳನ್ನು ಗಮನಿಸಿದಾಗ ಯಾವುದು ಅತಿಹೆಚ್ಚು ದೇಹದ ಆರೋಗ್ಯಕ್ಕೆ ಒಳ್ಳೆಯದು ಎಂಬುದುನ್ನು ನೋಡಿದಾಗ ಹಲವು ಪ್ರಮುಖ ವಿಚಾರಗಳು ಗಮನಕ್ಕೆ ಬರುತ್ತವೆ.
ಸಕ್ಕರೆ ಕಾಯಿಲೆ ಇದ್ದವರು ಯಾವ ಹಾಲು ಕುಡಿದರೆ ಒಳ್ಳೆಯದು
ನ್ಯೂಟ್ರಿಷನಿಷ್ಟ್ ಆಗಿರುವ ಈಶಾಂಕಾ ವಹಿ ಹೇಳುವ ಪ್ರಕಾರ ನಾನು ಡಯಾಬಿಟಿಸ್ ಇರುವವರಿಗೆ ನಟ್ ಮಿಲ್ಕ್ ಸೇವಿಸಲು ಹೆಚ್ಚು ಸಲಹೆ ನೀಡುತ್ತೇನೆ. ಯಾಕಂದ್ರೆ ಇದು ಸಕ್ಕರೆ ಕಾಯಿಲೆಯನ್ನು ನಿಯಂತ್ರಣದಲ್ಲಿ ಇಡುತ್ತದೆ ಎಂದು ಈಶಾಂಕಾ ಹೇಳುತ್ತಾರೆ. ಇವು ಡೈರಿ ಹಾಲಿನ ರೀತಿ ಸಿಹಿಯಾಗಿ ಇರುವುದಿಲ್ಲ. ಜೊತೆಗೆ ನಟ್ ಮಿಲ್ಕ್ನಲ್ಲಿ ಕ್ಯಾಲರೀಸ್ಗಳ ಅಂಶವು ಕೂಡ ಕಡಿಮೆ ಇರುತ್ತದೆ. ಹೀಗಾಗಿ ಮಧುಮೇಹದ ಸಮಸ್ಯೆಯನ್ನು ಹೊಂದಿರುವವರು ನಟ್ ಮಿಲ್ಕ್ ಕುಡಿಯುವುದು ಉತ್ತಮ ಎಂದು ಹೇಳಲಾಗುತ್ತದೆ.
ತೂಕ ಇಳಿಸಿಕೊಳ್ಳಲು ನಾವು ಯಾವ ಹಾಲು ಕುಡಿಯಬೇಕು?
ಸದ್ಯ ಜಗತ್ತಿನಲ್ಲಿ ಅನೇಕರಿಗೆ ದೊಡ್ಡ ಸಮಸ್ಯೆ ಅಂದ್ರೆ ತೂಕ ಇಳಿಸುವ ಸವಾಲು. ಅದಕ್ಕಾಗಿಯೇ ಅವರು ಅನೇಕ ರೀತಿಯ ಆಹಾರ ಪದ್ಧತಿಯನ್ನು ಪಾಲಿಸುತ್ತಾರೆ. ಈ ವಿಚಾರದಲ್ಲಿ ನೋಡಿದಾಗ ಡೈರಿ ಹಾಲಿಗಿಂತ ಡ್ರೈಫ್ರೂಟ್ಸ್ ಹಾಲೇ ಉತ್ತಮ ಎಂದು ಹೇಳಲಾಗುತ್ತದೆ. ನಟ್ ಮಿಲ್ಕ್ನಲ್ಲಿ ಕಡಿಮೆ ಕ್ಯಾಲರೀಸ್ ಇರುವುದರಿಂದ ಹಾಗೂ ಕಡಿಮೆ ಕಾರ್ಬೊಹೈಡ್ರೆಡ್ ಇರುವುದರಿಂದ ತೂಕ ಇಳಿಸಿಕೊಳ್ಳಲು ಇದು ಬಹಳ ಸಹಾಯಕಾರಿ ಎಂದು ಹೇಳಲಾಗುತ್ತದೆ. ಡೈರಿ ಹಾಲಿನಲ್ಲಿಯೂ ಕೂಡ ಪೌಷ್ಠಿಕಾಂಶದಿಂದ ಹಿಡಿದು ವಿಟಮಿನ್ಗಳ ಆಗರವೇ ಇದೆ. ಆದ್ರೆ, ಡೈರಿ ಹಾಲಿನಲ್ಲಿ ಫ್ಯಾಟ್ ಅಂಶ ಅತಿಹೆಚ್ಚು ಇರುತ್ತದೆ. ಹೀಗಾಗಿ ತೂಕ ಇಳಿಸಿಕೊಳ್ಳುವವರು ಡೈರಿ ಹಾಲಿಗಿಂತ ಹೆಚ್ಚು ಡ್ರೈಫ್ರೂಟ್ ಹಾಲಿಗೆ ಮೊರೆ ಹೋಗುವುದು ಉತ್ತಮ.
ಲ್ಯಾಕ್ಟೊಸ್ನ ಸಮಸ್ಯೆಯಿರುವವರು ನಟ್ ಮಿಲ್ಕ್ ಮೊರೆ ಹೋಗಿ
ಲ್ಯಾಕ್ಟೊಸ್ ಸಮಸ್ಯೆ ಅಂದ್ರೆ ಹಾಲು ಕುಡಿಯುವುದರಿಂದ ಗ್ಯಾಸ್ಟ್ರಿಕ್ನಂತಹ ಸಮಸ್ಯೆಗಳನ್ನು ಎದುರಿಸುವವರಿಗೆ ಡೈರಿ ಹಾಲಿಗಿಂತ ನಟ್ ಮಿಲ್ಕ್ ತುಂಬಾ ಉತ್ತಮವಾದದ್ದು. ಲ್ಯಾಕ್ಟೊಸ್ ಸಮಸ್ಯೆ ಇರುವವರಿಗಾಗಿಯೇ ಪರ್ಯಾಯವಾಗಿ ಇರುವುದು ನಟ್ ಮಿಲ್ಕ್. ಇದು ಅತ್ಯಂತ ಸರಳವಾಗಿ ಜೀರ್ಣವಾಗುತ್ತದೆ ಹಾಗೂ ಗ್ಯಾಸ್ಟ್ರಿಕ್ನಂತಹ ಸಮಸ್ಯೆಗಳನ್ನು ತಂದೊಡ್ಡುವುದಿಲ್ಲ.
ಹೃದಯದ ಆರೋಗ್ಯಕ್ಕೆ ಯಾವುದು ಉತ್ತಮ
ಡೈಯಟಿಷನ್ ಡಾ ಅರ್ಚನಾ ಬಾತ್ರಾ ಹೇಳುವ ಪ್ರಕಾರ ಡೈರಿ ಹಾಲಿನಲ್ಲಿ ಹಲವಾರು ಜೀವಸತ್ವಗಳು ಪೌಷ್ಠಿಕಾಂಶಗಳು ಇವೆ. ಅದರಲ್ಲಿ ಕ್ಯಾಲ್ಸಿಯಂನಿಂದ ಹಿಡಿದು ವಿಟಮಿನ್ ಡಿಯಂತಹ ಜೀವಸತ್ವಗಳು ಪೊಷಕಾಂಶಗಳು ಇವೆ. ಡೈರಿ ಹಾಲು ಕುಡಿಯುವುದರಿಂದ ಅನೇಕ ಪ್ರಯೋಜನಗಳು ಕೂಡ ಇವೆ. ಆದ್ರೆ ಅದು ದೇಹದ ಮೇಲೆ ಬೀರುವ ದುಷ್ಪರಿಣಾಮ ಅಂದ್ರೆ ಒಂದೇ ಒಂದು ಅದರಲ್ಲಿ ಹೆಚ್ಚು ಫ್ಯಾಟ್ ಅಂಶ ಇದೆ. ಹೃದಯ ಸಮಸ್ಯೆ ಇರುವವವರು ಹಾಗೂ ಹೃದಯದ ಆರೋಗ್ಯವನ್ನು ಜತನದಿಂದ ಕಾಪಾಡಿಕೊಳ್ಳಬೇಕು ಎನ್ನುವವರು ಡೈರಿ ಹಾಲಿನ ಬದಲು ನಟ್ ಹಾಲು ಕುಡಿಯುವುದು ಉತ್ತಮ ಎನ್ನುತ್ತಾರೆ ಬಾತ್ರಾ
ಇದನ್ನೂ ಓದಿ:10 ನಿಮಿಷದಲ್ಲಿ ₹45 ಸಾವಿರ ದಿನಸಿ ಪದಾರ್ಥ ಮಾರಾಟ.. ₹49 ಸಾವಿರ ಕೋಟಿ ಆದಾಯ! ಯಶಸ್ವಿ ಉದ್ಯಮಿಯ ಯಶೋಗಾಥೆ
ಹೀಗೆ ಹಾರ್ಮನೋನಲ್ ಡಿಸ್ಆರ್ಡರ್ ಇದ್ದವರು ಮೊಡವೆ ಸಮಸ್ಯೆ ಇದ್ದವರು ಅದು ಮಾತ್ರವಲ್ಲ ಪರಿಸರ ಸ್ನೇಹಿಯಾಗಿ ನಟ್ ಮಿಲ್ಕ್ ಡೈರಿ ಹಾಲಿಗಿಂತ ಬಹಳಷ್ಟು ಪ್ರಯೋಜನವನ್ನು ಹೊಂದಿದೆ. ಹೀಗಾಗಿ ಹೆಚ್ಚು ಹೆಚ್ಚು ನಟ್ ಮಿಲ್ಕ್ ಸೇವನೆಯಿಂದ ನಿಮ್ಮ ಆರೋಗ್ಯದಲ್ಲಿ ಸದೃಢತೆ ಸ್ಥಾಪಿತಗೊಂಡು ಅನೇಕ ಆರೋಗ್ಯ ಸಮಸ್ಯೆಗಳಿಂದ ನೀವು ದೂರ ಉಳಿಯಬಹುದು.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ