/newsfirstlive-kannada/media/post_attachments/wp-content/uploads/2024/11/RCB-5.jpg)
ಕಳೆದ 17 ಸೀಸನ್​ಗಳಿಂದಲೂ ಕಪ್​ ಗೆಲ್ಲಲೇಬೇಕು ಅನ್ನೋ ರಾಯಲ್ ಚಾಲೆಂಜರ್ಸ್​ ಬೆಂಗಳೂರು ತಂಡದ ಕನಸು ಮುಂದುವರಿದಿದೆ. ಪ್ರತಿ ವರ್ಷವೂ ಈ ಸಲ ಕಪ್ ನಮ್ದೆ ಅನ್ನೋ ಆರ್​​ಸಿಬಿ ಫೈನಲ್​ಗೆ ಹೋಗದೆ ಬರೋಬ್ಬರಿ 8 ವರ್ಷಗಳು ಕಳೆದಿವೆ. ಕಳೆದ ಸೀಸನ್​ನಲ್ಲೂ ಆರ್​ಸಿಬಿ 14 ಪಂದ್ಯಗಳಲ್ಲಿ ಕೇವಲ 7 ಮ್ಯಾಚ್ ಗೆದ್ದು ಪ್ಲೇ ಆಫ್​ ಪ್ರವೇಶಿಸಿತ್ತು. ಹಾಗಾಗಿ ಮುಂದಿನ ಸೀಸನ್​ನಲ್ಲಾದ್ರೂ ಕಪ್​ ಗೆಲ್ಲಬೇಕು ಎಂದಿರೋ ಆರ್​​ಸಿಬಿ ಬಲಿಷ್ಠ ತಂಡ ಕಟ್ಟಿದೆ.
2025ರ ಇಂಡಿಯನ್​ ಪ್ರೀಮಿಯರ್​ ಲೀಗ್​ ಮೆಗಾ ಹರಾಜು ಪೂರ್ಣಗೊಂಡಿದೆ. ಈ ಬಾರಿ ಹರಾಜಿನಲ್ಲಿ ಆರ್​​ಸಿಬಿ ಬರೋಬ್ಬರಿ 19 ಆಟಗಾರರನ್ನು ಖರೀದಿ ಮಾಡಿದೆ. ಆರ್​​ಸಿಬಿ ಈ ಮೂಲಕ ಮುಂದಿನ ಸೀಸನ್​ಗೆ 22 ಆಟಗಾರರ ಬಲಿಷ್ಠ ತಂಡ ರೂಪಿಸಿದೆ. ಆದರೀಗ, ಆರ್​​ಸಿಬಿ ತಂಡವನ್ನು ಯಾರು ಮುನ್ನಡೆಸಲಿದ್ದಾರೆ ಎಂಬುದೇ ಪ್ರಶ್ನೆ ಇದೆ.
ಇನ್ನೊಂದೆಡೆ ಬರೋಬ್ಬರಿ 83 ಕೋಟಿ ಹಣವನ್ನು ಇಟ್ಟುಕೊಂಡು ಆಕ್ಷನ್​ಗೆ ಹೋಗಿದ್ದ ಆರ್​​ಸಿಬಿ, ಡಿಸೆಂಟ್​ ತಂಡ ಕಟ್ಟಿದೆ. ಆರ್​​ಸಿಬಿ ತಂಡಕ್ಕೆ ಎಂಟ್ರಿ ಕೊಟ್ಟಿರೋ ಹಲವರು ಸ್ಟಾರ್​​ಗಳು. ಇವರ ಖರೀದಿ ನಿಜಕ್ಕೂ ಕ್ರಿಕೆಟ್​ ವಲಯದಲ್ಲಿ ಸರ್​​​ಪ್ರೈಸ್​ ಅನಿಸಿದೆ. ಅಂದ್ಹಾಗೆ ಆ ಸರ್​​ಪ್ರೈಸ್​ ಖರೀದಿಗಳನ್ನ ಸುಖಾ ಸುಮ್ಮನೆ ಮಾಡಿದ್ದಲ್ಲ.
ನುವಾನ್​ ತುಷಾರ
ಈ ಹೆಸರನ್ನ ಹಲವರು ಕೇಳಿದ್ರೂ ಆರ್​​ಸಿಬಿ ಖರೀದಿಸುತ್ತೆ ಅನ್ನೋ ನಿರೀಕ್ಷೆ ಯಾರಿಗೂ ಇರಲಿಲ್ಲ. ನುವಾನ್​ ತುಷಾರ ಆರ್​​ಸಿಬಿಯ​ ಒನ್​ ಆಫ್​ ದ ಬೆಸ್ಟ್​ ಬೈ. ಥೇಟ್​ ಲಸಿತ್​ ಮಲಿಂಗಾರಂತೆ ಬೌಲಿಂಗ್​ ಶೈಲಿ ಹೊಂದಿರೋ ತುಷಾರಗೆ ಕರಾರುವಕ್​ ಯಾರ್ಕರ್​ ಎಸೆದು ಬ್ಯಾಟ್ಸ್​​ಮನ್​ಗಳನ್ನ ಕಕ್ಕಾಬಿಕ್ಕಿಯಾಗಿಸೋ ಕಲೆ ಇದೆ. T20 ಇಂಟರ್​​ನ್ಯಾಷನಲ್​ನಲ್ಲಿ ಹ್ಯಾಟ್ರಿಕ್​ ವಿಕೆಟ್​ ಬೇಟೆಯಾಡಿದ ರೆಕಾರ್ಡ್​ ಇದೆ.
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ