/newsfirstlive-kannada/media/post_attachments/wp-content/uploads/2024/11/Nawana.jpg)
ಬಹುನಿರೀಕ್ಷಿತ 2025ರ 2ನೇ ದಿನದ ಇಂಡಿಯನ್ ಪ್ರೀಮಿಯರ್ ಲೀಗ್ ಮೆಗಾ ಹರಾಜಿನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಶ್ರೀಲಂಕಾ ತಂಡದ ಸ್ಟಾರ್ ಬೌಲರ್ಗೆ ಮಣೆ ಹಾಕಿದೆ. ಶ್ರೀಲಂಕಾ ಕ್ರಿಕೆಟ್ ತಂಡದ ನುವಾನ್ ತುಷಾರ ಅವರನ್ನು ಖರೀದಿ ಮಾಡಿದೆ. ಇವರು 1.60 ಕೋಟಿ ರೂ.ಗೆ ಆರ್ಸಿಬಿ ತಂಡ ಸೇರಿದ್ರು.
ನುವಾನ್ ತುಷಾರ ಅವರನ್ನು ಮೊದಲು ಪಂಜಾಬ್ ತಂಡ ಬಿಡ್ ಮಾಡಿತು. ಬಳಿಕ ರಾಯಲ್ ಚಾಲೆಂಜರ್ಸ್ ಬೆಂಗಳೂರು, ರಾಜಸ್ಥಾನ್ ರಾಯಲ್ಸ್, ಪಂಜಾಬ್ ಮಧ್ಯೆ ಇವರಿಗಾಗಿ ಪೈಪೋಟಿ ನಡೆಯಿತು. ಕೊನೆಗೆ ಆರ್ಸಿಬಿ 1.60 ಕೋಟಿ ರೂ. ನೀಡಿ ನುವಾನ್ ತುಷಾರ ಅವರನ್ನು ಬಿಡ್ ಮಾಡಿದೆ.
ಯಾರು ಈ ನುವಾನ್ ತುಷಾರ?
ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿ ನುವಾನ್ ತುಷಾರ ಅವರು ಮುಂಬೈ ಇಂಡಿಯನ್ಸ್ ತಂಡದ ಭಾಗವಾಗಿದ್ರು. ಇವರು ಮುಂಬೈ ಇಂಡಿಯನ್ಸ್ ಪರ ಆಡಿರೋ 7 ಪಂದ್ಯಗಳಲ್ಲಿ 8 ವಿಕೆಟ್ ಪಡಿದಿದ್ದಾರೆ. ಅಂತರಾಷ್ಟ್ರೀಯ ಕ್ರಿಕೆಟ್ನಲ್ಲಿ ಶ್ರೀಲಂಕಾ ಪರ ನುವಾನ್ ತುಷಾರ 15 ಪಂದ್ಯ ಆಡಿದ್ದು, 24 ವಿಕೆಟ್ ಕಬಳಿಸಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ