/newsfirstlive-kannada/media/post_attachments/wp-content/uploads/2025/02/INDIAN-DEPORTED.jpg)
ಅಮೆರಿಕಾದಲ್ಲಿ ಅಕ್ರಮವಾಗಿ ನೆಲೆಸಿರುವ ಭಾರತೀಯರನ್ನು ಅತ್ಯಂತ ಅಮಾನವೀಯವಾಗಿ ಗಡಿಪಾರು ಮಾಡಲಾಗಿದೆ. ಯುಎಸ್ನಿಂದ ಭಾರತಕ್ಕೆ ಬಂದ ಒಬ್ಬೊಬ್ಬ ವ್ಯಕ್ತಿಯೂ ಒಂದೊಂದು ಕಥೆಯನ್ನು ಹೇಳುತ್ತಿದ್ದಾನೆ. ಸದ್ಯ ಬಜೆಟ್ ಅಧಿವೇಶನದಲ್ಲಿ ವಿಪಕ್ಷಗಳು ಆಡಳಿತ ಪಕ್ಷವನ್ನು ಇದೇ ವಿಚಾರವಾಗಿ ತರಾಟೆಗೆ ತೆಗೆದುಕೊಳ್ಳುತ್ತಿವೆ. ಈ ವಿಚಾರವಾಗಿ ವಿದೇಶಾಂಗ ಸಚಿವ ಎಸ್ ಜೈಶಂಕರ್ ಸ್ವಯಂಪ್ರೇರಣೆ ಹೇಳಿಕೆ ನೀಡಿದ್ದಾರೆ.
ಕಾನೂನು ಬದ್ದ ಸಂಚಾರವನ್ನು ಪ್ರೋತ್ಸಾಹಿಸಿ, ಅಕ್ರಮ ವಲಸೆಯನ್ನು ಪ್ರೋತ್ಸಾಹಿಸಬಾರದು. ಇದು ನಮ್ಮೆಲ್ಲರ ಸಾಮೂಹಿಕ ಜವಾಬ್ದಾರಿ, ಅಕ್ರಮ ಓಡಾಟ, ಸಂಚಾರ, ಅಕ್ರಮ ವಲಸೆಯ ಅಕ್ರಮ ಸ್ವರೂಪವನ್ನೇ ಹೊಂದಿದೆ ಎಂದು ಜೈಶಂಕರ್ ಹೇಳಿದ್ದಾರೆ. ಅಕ್ರಮ ಓಡಾಟ, ವಲಸೆಗೆ ಹೋದ ನಮ್ಮ ನಾಗರಿಕರು ಬೇರೆ ಬೇರೆ ರೀತಿ ಸಿಲುಕಿಕೊಂಡಿದ್ದಾರೆ. ಅಮಾನವೀಯ ಸ್ಥಿತಿಯಲ್ಲಿ ಕೆಲಸ ಮಾಡುವ ಸ್ಥಿತಿಗೆ ಟ್ರ್ಯಾಪ್ ಆಗಿದ್ದಾರೆ. ಅಕ್ರಮ ವಲಸೆ ವೇಳೆ ದುರಾದೃಷ್ಟಕರವಾಗಿ ಕೆಲವು ಸಾವುಗಳು ಸಂಭವಿಸಿವೆ. ಅದರ ಭಯಾನಕ ಸತ್ಯಗಳನ್ನು ಅಲ್ಲಿಂದ ಬಂದವರು ಬಿಚ್ಚಿಡುತ್ತಿದ್ದಾರೆ ಎಂದು ಜೈ ಶಂಕರ್ ಹೇಳಿದ್ದಾರೆ.
ಇದನ್ನೂ ಓದಿ: ಸಂಕಷ್ಟಕ್ಕೆ ಸಿಲುಕಿದ ನಲಪಾಡ್.. ದಿಢೀರ್ ಡಿಕೆ ಶಿವಕುಮಾರ್ ಭೇಟಿಯಾಗಿ ಚರ್ಚೆ..!
ವಿದೇಶಗಳಲ್ಲಿ ತಮ್ಮ ನಾಗರಿಕರು ಅಕ್ರಮವಾಗಿ ವಾಸಿಸುತ್ತಿದ್ದರೆ, ಅಂತವರನ್ನು ವಾಪಸ್ ಕರೆಸಿಕೊಳ್ಳುವುದು ಎಲ್ಲ ದೇಶಗಳ ಜವಾಬ್ದಾರಿ. ಅವರ ನಾಗರೀಕತ್ವವನ್ನು ಪರಿಶೀಲಿಸಿ ವಾಪಸ್ ಕರೆಸಿಕೊಳ್ಳುವುದು ಆಯಾ ದೇಶಗಳ ಜವಾಬ್ದಾರಿ. ಅಕ್ರಮ ವಲಸಿಗರ ಗಡಿಪಾರು ಹೊಸದಲ್ಲ, ಇದು ಹಿಂದಿನಿಂದಲೂ ನಡೆದುಕೊಂಡು ಬಂದಿದೆ. 2009ರಿಮದಲೂ ಅಮೆರಿಕಾದಿಂದ ಅಕ್ರಮ ವಲಸಿಗ ನಾಗರಿಕರನ್ನು ಗಡಿಪಾರು ಮಾಡಲಾಗಿದೆ ಎಂದು ಹೇಳಿದ ವಿದೇಶಾಂಗ ಸಚಿವ 2009ರಿಂದ 2025ರವರೆಗಿನ ಗಡಿಪಾರು ಅಂಕಿಅಂಶಗಳನ್ನು ಸದನದ ಮುಂದಿಟ್ಟರು.
ಇದನ್ನೂ ಓದಿ:ಮೋದಿ ಮತ್ತು ಡೊನಾಲ್ಡ್ ಟ್ರಂಪ್ ಭೇಟಿಗೆ ಮುಹೂರ್ತ ಫಿಕ್ಸ್: ಫೆಬ್ರವರಿ 13ರಂದು ಭೇಟಿಯಾಗಲಿದ್ದಾರೆ ದಿಗ್ಗಜ ನಾಯಕರು
2024ರಲ್ಲಿ 1368 ಮಂದಿ ಭಾರತೀಯ ನಾಗರಿಕರನ್ನು ಗಡಿಪಾರು ಮಾಡಲಾಗಿದೆ. ಅಮೆರಿಕಾದ ಐಸಿಎ ಅಥಾರಿಟಿ ಗಡಿಪಾರು ಮಾಡಿದೆ. ಭಾರತದ ನಾಗರಿಕರಿಗೆ ದೇಶದಿಂದ ಹೊರಗೆ ಹಾಕುವಾಗ ಊಟ, ಚಿಕಿತ್ಸೆ ನೀಡಲಾಗಿದೆ. ಭಾರತೀಯ ನಾಗರಿಕರನ್ನು ಕೆಟ್ಟದಾಗಿ ನಡೆಸಿಕೊಳ್ಳದಂತೆ ಅಮೆರಿಕಾದ ಜೊತೆ ಮಾತುಕತೆ ನಡೆಸಲಾಗುವುದು. ನಾವು ಅಕ್ರಮ ವಲಸೆ ಹಾಗೂ ಉದ್ಯಮದ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕಿದೆ. ಕಾನೂನುಬದ್ಧ ವಲಸೆಗೆ ವೀಸಾ ನಿಯಮ ಸರಳೀಕರಣ ಮಾಡಬೇಕಿದೆ ಎಂದು ರಾಜ್ಯಸಭೆಯಲ್ಲಿ ಭಾರತೀಯ ನಾಗರಿಕರ ಗಡಿಪಾರು ವಿಷಯದ ಬಗ್ಗೆ ಎಸ್. ಜೈ ಶಂಕರ್ ಮಾತನಾಡಿದರು.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ