/newsfirstlive-kannada/media/post_attachments/wp-content/uploads/2025/07/Sanju-Basayya.jpg)
ಬೆಳಗಾವಿ: ಕಾಮಿಡಿ ಕಿಲಾಡಿಗಳು ಶೋ ಮೂಲಕ ಎಲ್ಲರ ಮಾತಾಗಿದ್ದ ಹಾಸ್ಯ ಕಲಾವಿದ ಸಂಜು ಬಸಯ್ಯ ಅವರು ಕಾಮುಕನಿಗೆ ಸರಿಯಾಗಿ ಬುದ್ಧಿ ಕಲಿಸಿದ್ದಾರೆ.
ಇದನ್ನೂ ಓದಿ: ಟ್ರೋಫಿ ಅಲ್ಲ, ಕಲೆ ಮುಖ್ಯ.. ಸರಿಗಮಪ ಲಹರಿಗೆ ಒಲಿದು ಬಂತು ಬಂಪರ್ ಆಫರ್..
ಹೌದು, ಸಂಜು ಬಸಯ್ಯ ಪತ್ನಿ ಪಲ್ಲವಿ ಬಳ್ಳಾರಿ ಯುವಕನೊಬ್ಬ ಅಶ್ಲೀಲವಾಗಿ ಮೆಸೇಜ್, ಹಾಗೂ ಫೋಟೋಗಳನ್ನು ಕಳುಹಿಸಿ ಹಿಂಸೆ ನೀಡುತ್ತಿದ್ದವನಿಗೆ ತಕ್ಕ ಪಾಠ ಕಲಿಸಿದ್ದಾರೆ. ಇನ್ಸ್ಟಾಗ್ರಾಮ್ನಲ್ಲಿ ವಿಜಯನಗರ ಮೂಲದ ಯುವಕ ಸಂಜು ಬಸಯ್ಯ ಅಶ್ಲೀಲ ಮೆಸೇಜ್ ಹಾಕಿದ್ದ. ಅಲ್ಲದೇ ಅಶ್ಲೀಲ ಫೋಟೊಗಳನ್ನು ಕಳಿಸಿದ್ದನಂತೆ. ಆಗ ತಾಳ್ಮೆ ಕಳೆದುಕೊಳ್ಳದೆ ನಟ ಸಂಜು ಬಸಯ್ಯ ಪೊಲೀಸರ ಗಮನಕ್ಕೆ ತಂದಿದ್ದಾರೆ.
ನಟ ದೂರು ನೀಡುತ್ತಿದ್ದಂತೆ ಬೈಲಹೊಂಗಲ ಠಾಣೆ ಪೊಲೀಸರು ಅಲರ್ಟ್ ಆಗಿದ್ದಾರೆ. ಅಶ್ಲೀಲ ಸಂದೇಶ ಕಳಿಸಿದವನಿಗೆ ಠಾಣೆಗೆ ಕರೆಸಿ ಬುದ್ದಿ ಹೇಳಿದ್ದಾರೆ. ಆಗ ಯುವಕನ ಭವಿಷ್ಯ ಹಾಳಾಗಬಾರದೆಂದು ನಟ ಸಂಜು ಬಸಯ್ಯ ಬುದ್ದಿ ಹೇಳಿ ಕಳಿಸಿದ್ದಾರೆ. ಇನ್ನೂ, ಇದೇ ವಿಡಿಯೋವನ್ನು ಸಂಜು ಬಸಯ್ಯ ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಜೊತೆಗೆ ಅಶ್ಲೀಲ ಸಂದೇಶ ಕಳಿಸುವವರಿಗೆ ಖಡಕ್ ವಾರ್ನಿಂಗ ಕೂಡ ಕೊಟ್ಟಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ