/newsfirstlive-kannada/media/post_attachments/wp-content/uploads/2025/03/dr-saritha-r.jpg)
ಸಾಧನೆಗೆ ಗಂಡು ಹೆಣ್ಣೆಂಬ ಬೇಧ ಇದ್ಯಾ.. ಖಂಡಿತಾ ಇಲ್ಲ. ಅದಕ್ಕೆ ಬೇಕಿರೋದು. ಛಲ, ಹಠ, ದೃಢ ವಿಶ್ವಾಸ. ಬೇರೆಯವರ ಬಾಳಿಗೂ ಬೆಳಕು ನೀಡಬೇಕು ಅನ್ನೋ ಸಹೃದಯ ಇರಬೇಕು. ಅಂಥದ್ದೇ ಛಲದೊಂದಿಗೆ ಹೆಜ್ಜೆ ಹಾಕಿದವರು ಡಾ.ಸರಿತಾ ಆರ್. ಬೆಂಗಳೂರನ ಖ್ಯಾತ ಪ್ರಸೂತಿ ಮತ್ತು ಸ್ತ್ರೀರೋಗತಜ್ಞೆ.
ಇದನ್ನೂ ಓದಿ:ಸವಾಲುಗಳ ಮೆಟ್ಟಿಲಲ್ಲೇ ಶಿಕ್ಷಣ ಸಂಸ್ಥೆ ಕಟ್ಟಿದ ಸ್ಫೂರ್ತಿ ಇವರೇ.. ಗೀತಾ ಪ್ರಿಯ ಪ್ರತಿ ಮಹಿಳೆಯರಿಗೂ ಆದರ್ಶ!
ಮಗು ಅಂದ್ರೆ ಒಂದು ಕುಟುಂಬದ ನಗು. ಮನೆಯೊಂದರ ಖುಷಿ. ಆ ಮಗುವನ್ನ ಪಡೆಯೋಕೆ ನೆರವು ನೀಡುತ್ತಾ ಜನರ ಪ್ರೀತಿ, ವಿಶ್ವಾಸ ಗಳಿಸಿರೋ ಡಾ.ಸರಿತಾ ಆರ್ ಅವರದ್ದು, ಸಣ್ಣ ವಯಸ್ಸಲ್ಲೇ ಗುರುತರ ಸಾಧನೆ. ಕಿಮ್ಸ್‌ನಲ್ಲಿ ಎರಡು ವರ್ಷಗಳ ಕಾಲ ಸೀನಿಯರ್ ರೆಸಿಡೆಂಟ್. ಆಸ್ಟರ್ ಸಿಎಂಐ ಆಸ್ಪತ್ರೆಯಲ್ಲಿ ಸೀನಿಯರ್ ಸ್ಪೆಷಲಿಸ್ಟ್ ಆಗಿ 2 ವರ್ಷ, ಹೆಬ್ಬಾಳ ಆಸ್ಟರ್ ಸಿಎಂಐನಲ್ಲಿ ಕನ್ಸಲ್ಟೆಂಟ್ ಆಗಿ 5 ವರ್ಷ, ದೇವನಹಳ್ಳಿ ಮಾನಸಾ ಆಸ್ಪತ್ರೆ ಸೇರಿದಂತೆ ವಿವಿಧ ಆಸ್ಪತ್ರೆಗಳಲ್ಲಿ ಕೆಲಸ ಮಾಡಿರೋ ಅನುಭವ ಹೊಂದಿರೋರು ಡಾ. ಸರಿತಾ ಅವರು.
ನಗರ ಹಾಗೂ ಗ್ರಾಮೀಣ ಭಾಗಗಳಲ್ಲಿ ನೂರಾರು ಹೆಲ್ತ್ ಕ್ಯಾಂಪ್‌ಗಳಲ್ಲಿ ಭಾಗಿಯಾಗಿದ್ದಾರೆ. ಗ್ರಾಮೀಣ ಭಾಗದ ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ಭೇಟಿ ನೀಡಿದ್ದಾರೆ. ಡಾ.ಸರಿತಾ ಆರ್ ಅವರು ನ್ಯೂಸ್‌ಫಸ್ಟ್‌ನ ಮಹಿಳಾ ಮಾಣಿಕ್ಯ. ನ್ಯೂಸ್ಫಸ್ಟ್ ವಾಹಿನಿಯ ಮಹಿಳಾ ಮಾಣಿಕ್ಯ ಕಾರ್ಯಕ್ರಮವು ಇಂದು ಸಂಜೆ 5 ಗಂಟೆಗೆ ಪ್ರಸಾರವಾಗಲಿದೆ. ತಪ್ಪದೇ ವೀಕ್ಷಿಸಿ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ