Obstructing the Field: ದುರಾದೃಷ್ಟಕರ ರೀತಿಯಲ್ಲಿ ಔಟ್ ಆದ ಜಡೇಜಾ, ಭಾರೀ ವಿವಾದ..!

author-image
Ganesh
Updated On
Obstructing the Field: ದುರಾದೃಷ್ಟಕರ ರೀತಿಯಲ್ಲಿ ಔಟ್ ಆದ ಜಡೇಜಾ, ಭಾರೀ ವಿವಾದ..!
Advertisment
  • ಫೀಲ್ಡಿಂಗ್ ಅಡ್ಡಿಪಡಿಸಿದ್ದಕ್ಕೆ ಔಟ್ ಎಂದ ಅಂಪೈರ್
  • ರಾಜಸ್ಥಾನ್ ರಾಯಲ್ಸ್ ವಿರುದ್ಧ ಸಿಎಸ್​ಕೆಗೆ ಗೆಲುವು
  • ಐಪಿಎಲ್ ಇತಿಹಾಸದಲ್ಲಿ ಜಡೇಜಾ ಮೂರನೇ ಆಟಗಾರ

IPL 2024ರಲ್ಲಿ 61ನೇ ಪಂದ್ಯವು ಚೆನ್ನೈ ಸೂಪರ್ ಕಿಂಗ್ಸ್ ಮತ್ತು ರಾಜಸ್ಥಾನ್ ರಾಯಲ್ಸ್ ನಡುವೆ ನಡೆಯಿತು. ಈ ಪಂದ್ಯವನ್ನು ಚೆನ್ನೈ 5 ವಿಕೆಟ್‌ಗಳಿಂದ ಗೆದ್ದುಕೊಂಡಿತು. ಈ ಪಂದ್ಯದಲ್ಲಿ ರವೀಂದ್ರ ಜಡೇಜಾ ‘ಅಬ್​ಸ್ಟ್ರಕ್ಟಿಂಗ್​ ದಿ ಫೀಲ್ಡ್’ಗೆ (obstructing) ಬಲಿಯಾದರು.

ಐಪಿಎಲ್ ಇತಿಹಾಸದಲ್ಲಿ ಫೀಲ್ಡಿಂಗ್​ಗೆ ಅಡ್ಡಿಪಡಿಸಿ ಔಟಾದ ಮೂರನೇ ಆಟಗಾರ ಎಂಬ ಕಳಂಕಕ್ಕೆ ಜಡೇಜಾ ಗುರಿಯಾದರು. ಜಡೇಜಾರ ಈ ಔಟನ್ನು ‘ದುರಾದೃಷ್ಟಕರ’ ಎಂದು ಹಲವರು ಕರೆದಿದ್ದಾರೆ. 15ನೇ ಓವರ್‌ನಲ್ಲಿ ಜಡೇಜಾ ಎರಡನೇ ರನ್ ಕದಿಯಲು ಪ್ರಯತ್ನಿಸಿದರು. ಆಗ ಎದುರಾಳಿ ನಾಯಕ ಸ್ಯಾಮ್ಸನ್.. ಜಡೇಜಾರನ್ನು ರನೌಟ್ ಮಾಡಲು ಸ್ಟಂಪ್ ಮೇಲೆ ಬಾಲ್ ಎಸೆಯಲು ಪ್ರಯತ್ನಿಸಿದರು. ಆಗ ಜಡೇಜಾ ಸ್ಟಂಪ್‌ಗೆ ಎದುರಾಗಿ ಓಡಿದರು. ಪರಿಣಾಮ ಬಾಲ್ ನೇರವಾಗಿ ಜಡೇಜಾ ಮೈಗೆ ತಾಗಿದೆ. ನಂತರ ಸಂಜು, ಔಟ್‌ ನೀಡುವಂತೆ ಮನವಿ ಮಾಡಿಕೊಂಡರು. ಪರಿಶೀಲಿಸಿದ ಮೂರನೇ ಅಂಪೈರ್ ಔಟ್ ಎಂದು ತೀರ್ಪು ನೀಡಿದರು.

ಇದನ್ನೂ ಓದಿ:ಫಾಫ್ ಅದೇ ಹಾಡು, ಅದೇ ರಾಗ.. 3 ಭರ್ಜರಿ ಸಿಕ್ಸರ್​ ಬಾರಿಸಿಯೂ ನಿರಾಸೆ ಮೂಡಿಸಿದ ಕೊಹ್ಲಿ..!

ಜಡೇಜಾಗೂ ಮೊದಲು ಇಬ್ಬರು ಆಟಗಾರರು ‘‘ಅಬ್​ಸ್ಟ್ರಕ್ಟಿಂಗ್​ ದಿ ಫೀಲ್ಡ್’ಗೆ ಬಲಿಯಾಗಿದ್ದರು. ಯೂಸುಫ್ ಪಠಾಣ್ ಐಪಿಎಲ್ ಇತಿಹಾಸದಲ್ಲಿ ಮೊದಲ ಬಾರಿಗೆ ಫೀಲ್ಡಿಂಗ್​ಗೆ ಅಡ್ಡಿಪಡಿಸಿ ಔಟ್ ಆಗಿದ್ದರು. 2013ರಲ್ಲಿ ಪಠಾಣ್ ಔಟ್ ಆಗಿದ್ದರೆ, 2019ರಲ್ಲಿ ಅಮಿತ್ ಮಿಶ್ರಾ ಔಟ್ ಆಗಿದ್ದರು.

ಇದನ್ನೂ ಓದಿ:ಹಾಸನ ಅಶ್ಲೀಲ ವಿಡಿಯೋ ಕೇಸ್​ಗೆ ಸ್ಫೋಟಕ ಟ್ವಿಸ್ಟ್.. ಮತ್ತೊಬ್ಬ ‘ಮಹಾನಾಯಕ’ನ ಹೆಸರು ಹೇಳಿದ ಆರೋಪಿ..

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment