ಸಂಚಲನ ಮೂಡಿಸಿದ ಗಾಯಕ ಅಭಿನವ್ ಸಾವು ಪ್ರಕರಣ.. ಱಪರ್​ಗೆ ವಿಷ ಸಿಕ್ಕಿದ್ದು ಹೇಗೆ ಗೊತ್ತಾ..?

author-image
Bheemappa
Updated On
ಸಂಚಲನ ಮೂಡಿಸಿದ ಗಾಯಕ ಅಭಿನವ್ ಸಾವು ಪ್ರಕರಣ.. ಱಪರ್​ಗೆ ವಿಷ ಸಿಕ್ಕಿದ್ದು ಹೇಗೆ ಗೊತ್ತಾ..?
Advertisment
  • ಒಡಿಶಾ ಬಿಟ್ಟು ಬೆಂಗಳೂರಲ್ಲಿ ನೆಮ್ಮದಿಯಾಗಿ ಇರಲು ಬಯಸಿದ್ದ
  • ಗಂಡನ ವಿರುದ್ಧ ಹೆಂಡತಿ ಎಷ್ಟು ಪ್ರಕರಣ ದಾಖಲು ಮಾಡಿದ್ದಳು?
  • ಅಭಿನವ್ ಇನ್ನಿಲ್ಲ, ಆನ್​ಲೈನ್​ ಅಲ್ಲೂ ವಿಷದ ಬಾಟಲ್ ಸಿಗುತ್ತಾ?

ಬೆಂಗಳೂರು: ಒಡಿಶಾ ಮೂಲದ ಖ್ಯಾತ ರ್ಯಾಪರ್ ಅಭಿನವ್ ಸಿಂಗ್ ಅಮೆಜಾನ್ ಆ್ಯಪ್​ ಮೂಲಕ ವಿಷ ತರಿಸಿಕೊಂಡು ರಾತ್ರಿ ಅದನ್ನು ಸೇವನೆ ಮಾಡಿ ಕೊನೆಯುಸಿರೆಳೆದಿದ್ದಾನೆ ಎನ್ನುವುದು ತಿಳಿದು ಬಂದಿದೆ.

ಅಭಿನವ್ ಸಿಂಗ್ (32) ವೃತ್ತಿಯಲ್ಲಿ ಇಂಜಿನಿಯರ್ ಆಗಿದ್ದರೂ ಖ್ಯಾತ ರ್ಯಾಪರ್ ಆಗಿದ್ದನು. 3 ವರ್ಷದ ಹಿಂದೆ ಮದುವೆ ಆಗಿದ್ದ ಇವರು ವರ್ಷದ ಹಿಂದೆ ಸಂಸಾರದಲ್ಲಿ ಬಿರುಕು ಮೂಡಿತ್ತು. ಹೀಗಾಗಿ ಪತ್ನಿ ಕೌಟಂಬಿಕ ದೌರ್ಜನ್ಯ ಆರೋಪದಡಿ ದೂರು ನೀಡಿದ್ದರು. ಇದು ಅಲ್ಲದೇ ವರದಕ್ಷಿಣೆ ಕಿರುಕುಳ ಆರೋಪದಡಿ ಮತ್ತೊಂದು ದೂರು ನೀಡಿದ್ದರು. ಇದರಿಂದ ಮನನೊಂದಿದ್ದ ಅಭಿನವ್ ಫೆಬ್ರುವರಿ ಮೊದಲ ವಾರದಲ್ಲೇ ಬೆಂಗಳೂರಿಗೆ ಬಂದು ಕಂಪನಿಯಲ್ಲಿ ಕೆಲಸಕ್ಕೆ ಸೇರಿಕೊಂಡಿದ್ದರು.

ಇದನ್ನೂ ಓದಿ: Modi in US; ಫ್ರಾನ್ಸ್​ ಪ್ರವಾಸ ಬೆನ್ನಲ್ಲೇ ಅಮೆರಿಕ ಭೇಟಿ.. ಟ್ರಂಪ್ ಜೊತೆ ಮೋದಿ ಮಹತ್ವದ ಚರ್ಚೆ

publive-image

ಅಭಿನವ್ ಕೆಲಸಕ್ಕೆ ಹೋಗುವ ಮೊದಲು ತಾಯಿಗೆ ಫೋನ್ ಮಾಡಿ ಮಾತನಾಡುತ್ತಿದ್ದರು. ಬಳಿಕ ಬೆಳಗ್ಗೆ 8 ಗಂಟೆಗೆ ಕಂಪನಿಯ ಕೆಲಸಕ್ಕೆ ಹೋಗುತ್ತಿದ್ದ. ಆದರೆ ಫೆ.10 ರಂದು ಫೋನ್ ಕಾಲ್ ಮಾಡಿರಲಿಲ್ಲ. ಇದಕ್ಕಿಂತ ಒಂದಿನ ಮೊದಲು ಅಭಿನವ್ ಫೆ.9 ರಂದು ಅಮೆಜಾನ್ ಆ್ಯಪ್ ಮೂಲಕ ವಿಷ ತರಿಸಿಕೊಂಡಿದ್ದಾನೆ ಎನ್ನಲಾಗಿದೆ. ಬಳಿಕ ಅದನ್ನು ಊಟದ ನಂತರ ಸೇವನೆ ಮಾಡಿದ್ದಾನೆ. ತಂದೆ, ತಾಯಿ ಎಷ್ಟು ಬಾರಿ ಫೋನ್ ಮಾಡಿದರೂ ಫೋನ್ ರಿಸೀವ್ ಮಾಡಿಲ್ಲ. ಏನಾಗಿದೆಯೋ ಏನೋ ಎಂದು ಬೆಂಗಳೂರಿನಲ್ಲಿರುವ ತಮ್ಮ ಸಂಬಂಧಿ ಅಮಿತ್​ಗೆ ಫೋನ್ ಮಾಡಿ ಫೋಷಕರು ವಿಷಯ ತಿಳಿಸಿದ್ದಾರೆ.

ಬಳಿಕ ಅಮಿತ್, ಕಾಡುಬೀಸನಹಳ್ಳಿಯ ಅಪಾರ್ಟ್​ಮೆಂಟ್​ಗೆ ಹೋಗಿ ನೋಡಿದಾಗ ಪ್ರಕರಣ ಬೆಳಕಿಗೆ ಬಂದಿದೆ. ಇದಾದ ಮೇಲೆ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ಮಾಡಿ ಮೃತದೇಹವನ್ನು ಆಸ್ಪತ್ರೆಗೆ ರವಾನಿಸಿ, ಒಡಿಶಾದಲ್ಲಿರುವ ಕುಟುಂಬಸ್ಥರಿಗೆ ಮಾಹಿತಿ ನೀಡಿದ್ದಾರೆ. ಯಾವುದೇ ಪತ್ರ ಸಿಕ್ಕಿಲ್ಲ. ಆದರೆ ಸೊಸೆಯ ವಿರುದ್ಧ ಅಭಿನವ್ ಫೋಷಕರು ಕಿರುಕುಳ ಆರೋಪ ಮಾಡಿದ್ದಾರೆ. ಮಾರತಹಳ್ಳಿಯ ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲು ಆಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment