ಯಾರೂ ಇಲ್ಲದ ವೇಳೆ ಪ್ರಿಯಕರನ ಮನೆಗೆ ಕರೆಸಿದ ಪ್ರಿಯತಮೆ.. ಪೋಷಕರು ಬರ್ತಿದ್ದಂತೆ ಟ್ರಂಕ್​ನಲ್ಲಿ ಮುಚ್ಚಿಟ್ಟ ಗೆಳತಿ

author-image
Bheemappa
Updated On
ಯಾರೂ ಇಲ್ಲದ ವೇಳೆ ಪ್ರಿಯಕರನ ಮನೆಗೆ ಕರೆಸಿದ ಪ್ರಿಯತಮೆ.. ಪೋಷಕರು ಬರ್ತಿದ್ದಂತೆ ಟ್ರಂಕ್​ನಲ್ಲಿ ಮುಚ್ಚಿಟ್ಟ ಗೆಳತಿ
Advertisment
  • ಪೋಷಕರಿಗೆ ಮಗಳ ಮೇಲೆ ಅನುಮಾನ ಬಂದು ಹುಡುಕಾಟ
  • ಓಪನ್ ಮಾಡಿದಾಗ ಹೊರ ಬಂದ ಶರ್ಟ್​ಲೆಸ್ ಬಾಯ್​ಫ್ರೆಂಡ್
  • ಗೆಳೆಯ ನೀನೇಕೆ ಟ್ರಂಕ್​ನಲ್ಲಿ ಅವಿತೆ ಅನ್ನೋ ಪ್ರೀತಿ ಇದು

ಪ್ರೀತಿ.. ಈ ಪ್ರೀತಿಯನ್ನ ವ್ಯಕ್ತಪಡಿಸಲು ಇದೆ ನೂರಾರು ರೀತಿ. ಆದ್ರೆ, ಕದ್ದು ಮುಚ್ಚಿ ಮಾಡಿದ್ರೆ ಫಿಕ್ಸ್ ಪಜೀತಿ. ಹೀಗೆ ಒಡಿಶಾದಲ್ಲೊಂದು ಜೋಡಿ ಕದ್ದು ಮುಚ್ಚಿ ಪ್ರೀತಿ ಮಾಡಲು ಹೋಗಿ ಪಜೀತಿ ತಂದ್ಕೊಂಡಿದೆ. ಈ ಟ್ರಂಕ್ ಪ್ರೀತಿಯಲ್ಲಿ ಏನೇನು ಆಗಿದೆ ಗೊತ್ತಾ?.

ಇದು ಒಂಥಾರ ಲವ್.. ಮಿನಿ ಟ್ರಂಕ್​ನಲ್ಲಿ ಪ್ರಿಯಕರನ ಏನಪ್ಪಾ ಲವ್ ಅನ್ಕೋಬೇಡಿ. ಕವಿತೆ ನೀನೇಕೆ ಪದಗಳಲಿ ಅವಿತೆ ಅನ್ನೋ ಪ್ರೀತಿ ಇವರದ್ದಲ್ಲ. ಗೆಳೆಯ ನೀನೇಕೆ ಟ್ರಂಕ್​ನಲ್ಲಿ ಅವಿತೆ ಅನ್ನೋ ಪ್ರೀತಿ ಇವರದ್ದು. ಮಿನಿ ಟ್ರಂಕ್ ಲವ್​ಸ್ಟೋರಿ ನಡೆದಿರೋದು ಒಡಿಶಾದಲ್ಲಿ, ಅದೊಂದು ದೊಡ್ಡ ಕಥೆ.

ಇದನ್ನೂ ಓದಿ:ಚನ್ನಪಟ್ಟಣ ಟಿಕೆಟ್ ಯಾರಿಗೆ..? ಹೆಚ್​.ಡಿ ಕುಮಾರಸ್ವಾಮಿ, ಬಿ.ವೈ ವಿಜಯೇಂದ್ರ ನೇತೃತ್ವದಲ್ಲಿ ಇಂದು ಮಹತ್ವದ ಸಭೆ

publive-image

ಜಾಲಿ.. ಎಲ್ಲಾ ಜಾಲಿ!

  • ಮನೆಯಲ್ಲಿ ಯಾರೂ ಇಲ್ಲ ಅಂತಾ ಪ್ರಿಯಕರನಿಗೆ ಗೆಳತಿ ಆಹ್ವಾನ
  • ಗೆಳತಿಯನ್ನು ಭೇಟಿಯಾಗಲು ಆಕೆಯ ಮನೆಗೆ ಬಂದಿದ್ದ ಗೆಳೆಯ
  • ಇದೇ ವೇಳೆ ದಿಢೀರ್ ಮನೆಗೆ ಬಂದ ಯುವತಿಯ ಕುಟುಂಬಸ್ಥರು
  • ತಕ್ಷಣ ಕಂಗಾಲಾದ ಪ್ರೇಮ ಪಕ್ಷಿಗಳಿಗೆ ಕಾಣಿಸಿದ್ದು ಟ್ರಂಕ್
  • ಪ್ರಿಯಕರನನ್ನು ಟ್ರಂಕ್​ನಲ್ಲಿ ಕೂಡಿ ಹಾಕಿ ಬೀಗ ಹಾಕಿದ ಯುವತಿ
  • ಪೋಷಕರಿಗೆ ಮಗಳ ಮೇಲೆ ಅನುಮಾನ ಬಂದು ಹುಡುಕಾಟ
  • ಬಟ್ಟೆ ಚೆಲ್ಲಾಪಿಲ್ಲಿಯಾಗಿದ್ದನ್ನ ಕಂಡು ಟ್ರಂಕ್​ ತೆರೆಯಲು ಸೂಚನೆ
  • ಮೊದಲು ಟ್ರಂಕ್ ಓಪನ್ ಮಾಡೋದಕ್ಕೆ ಹುಡುಗಿ ಒಪ್ಪುವುದಿಲ್ಲ
  • ಓಪನ್ ಮಾಡ್ದಾಗ ಹೊರ ಬಂದ ಶರ್ಟ್​ಲೆಸ್ ಬಾಯ್​ಫ್ರೆಂಡ್

publive-image

ಇಡೀ ಘಟನೆಯನ್ನ ಯುವತಿ ಕುಟುಂಬಸ್ಥರು ರೆಕಾರ್ಡ್​ ಮಾಡಿದ್ದು, ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ. ಇದನ್ನ ನೋಡಿದ ನೆಟ್ಟಿಗರು. ಪ್ರೀತಿ ಮಾಡಬಾರದು ಮಾಡಿದರೆ ಜಗಕೆ ಹೆದರಬಾರದು ಅಂತಿದ್ದಾರೆ.

ಪ್ರೀತಿ ಮಾಡಬಾರದು ಮಾಡಿದರೆ ಟ್ರಂಕ್ ಸೇರಬಾರದು ಅಂತಾ ಈ ವಿಡಿಯೋ ನೋಡಿದವರು ಗುನುಗ್ತಿದ್ದಾರೆ. ಇನ್ನೂ ಈ ಕಣ್ಣಲ್ಲಿ ಏನೇನ್ ನೋಡ್ಬೇಕೋ ಅಂತಿದ್ದಾರೆ.


">October 18, 2024

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment