ಮ್ಯಾಟ್ರಿಮೋನಿಗಳಲ್ಲಿ ಮಧ್ಯವಯಸ್ಸಿನ ಮಹಿಳೆಯರೇ ಈತನ ಟಾರ್ಗೆಟ್
ಮಹಿಳೆಯರನ್ನು ಬುಟ್ಟಿಗೆ ಬೀಳಿಸಿಕೊಂಡು ಅವರಿಂದ ಹಣ ಪೀಕ್ತಿದ್ದ ಆಸಾಮಿ
ಅನ್ಯಾಯ ಪ್ರಶ್ನಿಸಿದ ಮಹಿಳೆಯರಿಗೆ ಖಾಸಗಿ ವಿಡಿಯೋ ಫೋಟೋಗಳ ಧಮ್ಕಿ
ಭುವನೇಶ್ವರ್: ಭಾರತದ ಹಲವು ರಾಜ್ಯಗಳ ಯುವತಿಯರನ್ನ ಮದುವೆಯಾಗಿ ಅವರಿಗೆ ಪಂಗನಾಮ ಹಾಕಿದ ಖತರ್ನಾಕ್ ಕಿಲಾಡಿಯನ್ನ ಒಡಿಶಾ ಪೊಲೀಸರು ಬಂಧಿಸಿದ್ದಾರೆ. ತನ್ನನ್ನು ತಾನು ರೈಲ್ವೆ ಇಲಾಖೆಯ ಅಧಿಕಾರಿ, ಇನ್ಕಮ್ ಟ್ಯಾಕ್ಸ್ ಇನ್ಸ್ಪೆಕ್ಟರ್, ಕಸ್ಟಮ್ ಆಫೀಸ್ ಅಂತೆಲ್ಲಾ ಹೇಳಿ, ಮ್ಯಾಟ್ರಿಮೋನಿಯಲ್ಲಿ ಸಿಗುವ ಮಧ್ಯವಯಸ್ಸಿನ ಮಹಿಳೆಯರನ್ನೇ ಟಾರ್ಗೆಟ್ ಮಾಡಿಕೊಂಡು ಅವರನ್ನು ಬುಟ್ಟಿಗೆ ಬೀಳಿಸುತ್ತಿದ್ದ ಬಿರಾಂಚಿ ನಾರಾಯಣನಾಥ್ ಅನ್ನೋ ಐನಾತಿ.
ಇದನ್ನೂ ಓದಿ: ‘ವಿರಾಟ್ ಕೊಹ್ಲಿ ನನ್ನ ಕ್ಯಾಪ್ಟನ್ಸಿಯಲ್ಲಿ ಆಡಿದ್ದರು’- ಮಾಜಿ DCM ತೇಜಸ್ವಿ ಯಾದವ್ ಅಚ್ಚರಿ ಹೇಳಿಕೆ!
ಪ್ರಮುಖವಾಗಿ ಮದುವೆಯಾಗದೇ ಉಳಿದ ಮಧ್ಯವಯಸ್ಸಿನ ಹೆಣ್ಣು ಮಕ್ಕಳು, ಗಂಡನನ್ನು ಕಳೆದುಕೊಂಡ ಮಹಿಳೆಯರು, ಡಿವೋರ್ಸ್ ಆಗಿರುವ ಮಹಿಳೆಯರನ್ನೇ ಈತ ಟಾರ್ಗೆಟ್ ಮಾಡಿ ಬುಟ್ಟಿಗೆ ಬೀಳಿಸಿಕೊಳ್ಳುತ್ತಿದ್ದ. ಅವರೊಂದಿಗೆ ದೈಹಿಕವಾಗಿ ಮುಂದುವರಿಯುತ್ತಿದ್ದ, ಬಳಿಕ ಅವರಿಗೆ ಕೈಕೊಟ್ಟು ಮತ್ತೊಂದು ಮದುವೆಗೆ ಅಣಿಯಾಗುತ್ತಿದ್ದ. ಅವನ ನಡೆಯನ್ನು ವಿರೋಧಿಸಿದವರಿಗೆ ನಿನ್ನ ಖಾಸಗಿ ಕ್ಷಣಗಳ ಫೋಟೋ ಹಾಗೂ ವಿಡಿಯೋ ವೈರಲ್ ಮಾಡುವುದಾಗಿ ಬೆದರಿಕೆ ಹಾಕುತ್ತಿದ್ದನಂತೆ.
ಇದನ್ನೂ ಓದಿ: VIDEO; ಅಪಾರ್ಟ್ಮೆಂಟಿನ 5ನೇ ಮಹಡಿಯಿಂದ ಬಿದ್ದು ಯುವತಿ ಸಾವು; ಬೆಚ್ಚಿ ಬೀಳಿಸುತ್ತೆ ವಿಡಿಯೋ
ಇವನು ಒಡಿಶಾ, ರಾಜಸ್ಥಾನ, ಪಶ್ಚಿಮ ಬಂಗಾಳ, ಮಹಾರಾಷ್ಟ್ರ, ಮಧ್ಯಪ್ರದೇಶ ಹರಿಯಾಣ ಹಾಗೂ ದೆಹಲಿಗಳ ಹೆಣ್ಣು ಮಕ್ಕಳ ಜೊತೆ ಆಟವಾಡಿ ಈಗ ಪೊಲೀಸರ ಬಲೆಗೆ ಬಿದ್ದಿದ್ದಾನೆ. ಕಟಕ್ನ ಮಹಿಳೆಯೊಬ್ಬಳು ನೀಡಿದ ದೂರನನ್ವಯ ಒಡಿಶಾ ಸೈಬರ್ ಪೊಲೀಸರು ಈತನನ್ನು ಬಂಧಿಸಿದ್ದಾರೆ.
ದೂರು ಕೊಟ್ಟ ಮಹಿಳೆ 2022ರಲ್ಲಿ ತನ್ನ ಗಂಡನನ್ನು ಕಳೆದುಕೊಂಡಿದ್ದರು. ಅವರಿಗೆ ಎರಡು ಮಕ್ಕಳು ಕೂಡ ಇದ್ರು. ಈ ಹೆಣ್ಣು ಮಗಳು ಮ್ಯಾಟ್ರಿಮೊನಿಯೊಂದರಲ್ಲಿ ಈ ನಾರಾಯಣನಾಥ್ನನ್ನು ಪರಿಚಯ ಮಾಡಿಕೊಂಡಿದ್ದರು. ಪರಿಚಯ ಪ್ರೇಮಕ್ಕೆ ತಿರುಗಿ ಕೊನೆಗೆ ಮದುವೆಯವರೆಗೂ ಹೋಗಿದೆ. ಕೊನೆಯ ಆ ಮಹಿಳೆಯಿಂದ 5 ಲಕ್ಷ ರೂಪಾಯಿ ಜೊತೆಗೆ 32 ಗ್ರಾಂ ಚಿನ್ನವನ್ನು ಪಡೆದುಕೊಂಡು ಎಸ್ಕೇಪ್ ಆಗಿದ್ದಾನೆ. ತಾನು ಮೋಸ ಹೋಗಿರುವ ವಿಚಾರ ತಿಳಿದು ಕೂಡಲೇ ಪೊಲೀಸ್ ಠಾಣೆಗೆ ದೂರು ನೀಡಿದ್ದಾಳೆ ಯುವತಿ. ಪ್ರಕರಣವನ್ನು ಕೈಗೆತ್ತಿಕೊಂಡ ಪೊಲೀಸರು ಬಿರಾಂಚಿ ನಾರಾಯಣನನ್ನು ಬಲೆಗೆ ಕೆಡವಿದ್ದಾರೆ.
ಇದನ್ನೂ ಓದಿ: ಬಾಹ್ಯಾಕಾಶದಿಂದ ಸುದ್ದಿಗೋಷ್ಟಿ! ಸುನಿತಾ, ವಿಲ್ಮೋರ್ ಹೇಗೆ ಕಾಣ್ತಿದ್ದರು..? VIDEO
ವಿಚಾರಣೆ ವೇಳೆ ಬಿರಾಂಚಿ ನಾರಾಯಣ ಇದೇ ರೀತಿ ಒಟ್ಟು 15 ಮದುವೆಯಾಗಿರುವುದಾಗಿ ಹೇಳಿದ್ದಾನೆ. ಒಟ್ಟು 7 ರಾಜ್ಯಗಳಲ್ಲಿ 15 ಮಹಿಳೆಯರನ್ನು ಮದುವೆಯಾಗಿರುವ ಈತ ಎಲ್ಲರಿಂದಲೂ ಹಣ ಪೀಕಿದ್ದಾನೆ . ಪೊಲೀಸರಿಗೆ ದೂರು ಕೊಟ್ಟರೆ ಖಾಸಗಿ ಕ್ಷಣಗಳ ವಿಡಿಯೋ ಫೋಟೋ ವೈರಲ್ ಮಾಡುವುದಾಗಿ ಬೆದರಿಕೆ ಹಾಕಿದ್ದಾನೆ. ಹೀಗಾಗಿ ಈ ಹಿಂದೆ ಮೋಸವಾದ ಮಹಿಳೆಯರು ಹೆದರಿ ಸೈಲೆಂಟ್ ಆಗಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ