ಮಂಚಕ್ಕೆ ಕರೆದ ಕಾಮುಕ ಶಿಕ್ಷಕ; ಕಿರುಕುಳ ತಾಳಲಾರದೇ ಕಾಲೇಜಿನಲ್ಲೇ ಬೆಂಕಿ ಹಚ್ಚಿಕೊಂಡ ವಿದ್ಯಾರ್ಥಿನಿ

author-image
Ganesh
Updated On
ಮಂಚಕ್ಕೆ ಕರೆದ ಕಾಮುಕ ಶಿಕ್ಷಕ; ಕಿರುಕುಳ ತಾಳಲಾರದೇ ಕಾಲೇಜಿನಲ್ಲೇ ಬೆಂಕಿ ಹಚ್ಚಿಕೊಂಡ ವಿದ್ಯಾರ್ಥಿನಿ
Advertisment
  • ಕಾಮುಕ ಶಿಕ್ಷಕನ ಕಿರುಕುಳ.. ಬೆಂಕಿ ಹಚ್ಚಿಕೊಂಡ ವಿದ್ಯಾರ್ಥಿನಿ
  • ಕ್ಯಾಂಪಸ್​ನಲ್ಲೇ ಬೆಂಕಿ ಹಚ್ಚಿಕೊಂಡು ವಿದ್ಯಾರ್ಥಿನಿ ನರಳಾಟ
  • ವಿದ್ಯಾರ್ಥಿನಿಯನ್ನ ರಕ್ಷಿಸಲು ಇತರೆ ವಿದ್ಯಾರ್ಥಿಗಳು ಪರದಾಟ

ವಿದ್ಯೆ ಕಲಿಸುವ ಗುರು ದೇವರ ಸಮಾನ ಅಂತಾರೆ.. ಆದ್ರೆ ಇಲ್ಲೊಬ್ಬ ಕಾಮುಕ ಶಿಕ್ಷಕ ವಿದ್ಯಾರ್ಥಿನಿ ಮಂಚಕ್ಕೆ ಕರೆದು ಮಾನಸಿಕ ಚಿತ್ರಹಿಂಸೆ ನೀಡಿದ್ದಾನೆ. ಇದ್ರಿಂದ ಮನನೊಂದ ವಿದ್ಯಾರ್ಥಿನಿ ಕಾಲೇಜಿನಲ್ಲಿ ಬೆಂಕಿ ಹಂಚಿಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದಾಳೆ.
ಬೆಂಕಿ ಹಚ್ಚಿಕೊಂಡ ವಿದ್ಯಾರ್ಥಿನಿ

ಕಾಮುಕ ಶಿಕ್ಷಕನ ಕಿರುಕುಳಕ್ಕೆ ಬೇಸತ್ತು ಮನನೊಂದ ವಿದ್ಯಾರ್ಥಿನಿಯೊಬ್ಬಳು ಕಾಲೇಜು ಆವರಣದಲ್ಲಿ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ನಡೆದಿದ್ದು, ಇಡೀ ಒಡಿಶಾ ರಾಜ್ಯವನ್ನೇ ಬೆಚ್ಚಿಬೀಳಿಸಿದೆ.

ಕಾಮುಕ ಶಿಕ್ಷಕ!

ಬಾಲ್​​​ಸೂರ್​​ನಲ್ಲಿರುವ ಫಕೀರ್ ಮೋಹನ್ ಕಾಲೇಜಿನ ಬಿ.ಎಡ್​ ವಿದ್ಯಾರ್ಥಿನಿಗೆ ಕಾಮುಕ ಶಿಕ್ಷಕ ಕಿರುಕುಳ ನೀಡಿದ್ದಾನೆ. ಲೈಂಗಿಕವಾಗಿ ಸಹಕರಿಸುವಂತೆ ವಿಭಾಗದ HOD ದೌರ್ಜನ್ಯ ನೀಡಿದ್ದಾರೆ. ಸಹಕರಿಸದೇ ಇದ್ದರೇ ನಿನ್ನ ಭವಿಷ್ಯ ಹಾಳು ಮಾಡುತ್ತೇನೆ ಎಂದು ಬೆದರಿಕೆ ಹಾಕಿದ್ದಾನೆ. ಈ ಬಗ್ಗೆ ವಿದ್ಯಾರ್ಥಿನಿ ಜುಲೈ 1ರಂದು ಕಾಲೇಜು ಆಡಳಿತಕ್ಕೆ ದೂರು ನೀಡಿದ್ದಾರೆ. ದೂರು ಕೊಟ್ಟು ವಾರ ಕಳೆದರೂ ಶಿಕ್ಷಕನ ವಿರುದ್ಧ ಯಾವುದೇ ಕ್ರಮ ಕೈಗೊಳ್ಳದಕ್ಕೆ ಬೇಸತ್ತಿದ್ದ ವಿದ್ಯಾರ್ಥಿನಿ, ಕಾಲೇಜು ಅವರಣದಲ್ಲೇ ಬೆಂಕಿ ಹೆಚ್ಚಿಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದಾಳೆ.

ಇದನ್ನೂ ಓದಿ: ಜಾನಪದ ಗಾಯಕ ಮಾರುತಿ ಲಟ್ಟೆ ಅಪಘಾತ ಕೇಸ್​​ಗೆ ಬಿಗ್​ ಟ್ವಿಸ್ಟ್; 5 ಸಾವಿರ ರೂಗಾಗಿ ಜೀವವನ್ನೇ ತೆಗೆದರು..

ಬೆಂಕಿ ಹಚ್ಚಿಕೊಂಡ ವಿದ್ಯಾರ್ಥಿನಿ ನೋವಿನಿಂದ ಕಿರುಚುತ್ತಾ ಓಡಲು ಪ್ರಾರಂಭಿಸಿದ್ದಾಳೆ. ಬೆಂಕಿಯಿಂದ ನರಾಳುಡುತ್ತಿದ್ದ ವಿದ್ಯಾರ್ಥಿನಿಯನ್ನ ಮತ್ತೊಬ್ಬ ವಿದ್ಯಾರ್ಥಿ ರಕ್ಷಿಸಲು ಓಡಿ ಬೆಂಕಿಯನ್ನು ನಂದಿಸಲು ಪ್ರಯತ್ನಿಸಿದ್ದಾನೆ. ಆದ್ರೆ ಬೆಂಕಿಯ ತೀವ್ರತೆ ಹೆಚ್ಚಾಗಿದ್ದರಿಂದ, ಆತನಿಗೂ ಕೂಡ ಸುಟ್ಟು ಗಾಯಾಗಳಾಗಿವೆ. ಗಾಯಾಳುಗಳನ್ನ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗ್ತಿದೆ. ಆದ್ರೆ ವಿದ್ಯಾರ್ಥಿನಿಗೆ ಶೇ.90 ರಷ್ಟು ಸುಟ್ಟ ಗಾಯಗಳಾಗಿದ್ದು, ಸ್ಥಿತಿ ಚಿಂತಾಜನಕವಾಗಿದೆ.

ಇದನ್ನೂ ಓದಿ: ‘ನನ್ನ ಲೈಫ್​ನಲ್ಲಿ ಅದನ್ನ ತಿನ್ನೋ ಆಸೆ ಇತ್ತು’ ನ್ಯೂಸ್​ಫಸ್ಟ್​ನಲ್ಲಿ ನಟಿ ಲಕ್ಷ್ಮಿ ಒಲವು-ಗೆಲುವಿನ ಮಾತು..

ಘಟನೆ ಸಂಬಂಧ ವಿಭಾಗದ ಮುಖಸ್ಥ ಸಮೀರ್ ಕುಮಾರ್ ಸಾಹುರನ್ನ ಬಂಧಿಸಲಾಗಿದೆ. ವಿದ್ಯಾರ್ಥಿನಿಯ ದೂರನ್ನ ಸಮಯಕ್ಕೆ ಸರಿಯಾಗಿ ಗಂಭೀರವಾಗಿ ಪರಿಗಣಿಸಿದ್ದರೆ, ಇಷ್ಟು ದೊಡ್ಡ ಘಟನೆ ನಡೆಯುತ್ತಿರಲಿಲ್ಲ ಎಂದು ಆಕ್ರೋಶ ವ್ಯಕ್ತವಾಗ್ತಿದೆ. ಭವಿಷ್ಯವನ್ನ ಬದಲಾಯಿಸಬೇಕಿದ್ದ ಗುರುವಿನ ಈ ನೀಚ ಬುದ್ಧಿಗೆ ಪೊಲೀಸರು ತಕ್ಕ ಪಾಠ ಕಲಿಸಬೇಕಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment