newsfirstkannada.com

ಒಡಿಶಾ ರೈಲು ದುರಂತದಲ್ಲಿ ಅನಾಥರಾದ ಮಕ್ಕಳ ಪಾಲಿಗೆ ಆಪದ್ಬಾಂಧವರಾದ್ರು ಗೌತಮ್ ಅದಾನಿ; ಮಹತ್ವದ ಘೋಷಣೆ

Share :

05-06-2023

    ಒಡಿಶಾದ ಬಾಲಾಸೋರ್​ನಲ್ಲಿ ನಡೆದ​ ಭೀಕರ​ ರೈಲು ದುರಂತ

    ತಂದೆ ತಾಯಿಯನ್ನು ಕಳೆದುಕೊಂಡ ಅನಾಥ ಮಕ್ಕಳಿಗೆ ಅಂದಾನಿ ನೆರವು

    ಈ ಕುರಿತು ಗೌತಮ್ ಅದಾನಿ ಹೇಳಿದ್ದೇನು..?

ಒಡಿಶಾದ ಬಾಲಾಸೋರ್​ನಲ್ಲಿ ನಡೆದ​ ಭೀಕರ​ ರೈಲು ದುರಂತದಲ್ಲಿ ಒಟ್ಟು 275 ಪ್ರಯಾಣಿಕರು ದಾರುಣವಾಗಿ ಮೃತಪಟ್ಟಿದ್ದಾರೆ. ಈ ಭೀಕರ ರೈಲುಗಳ ಅಪಘಾತಕ್ಕೆ ಪಾಯಿಂಟ್ ಸಿಸ್ಟಮ್‌ ಸೆಟ್ಟಿಂಗ್‌ನಲ್ಲಿ ಆಗಿರುವ ಬದಲಾವಣೆಯೇ ಮೂಲ ಕಾರಣ ಎನ್ನಲಾಗಿದೆ. ಈ ಸರಣಿ ರೈಲು ಅಪಘಾತದಲ್ಲಿ ಅದೇಷ್ಟೋ ಜನರು ತಮ್ಮ ಕುಟುಂಬದ ಸದ್ಯಸರನ್ನು ಕಳೆದುಕೊಂಡು ಕಣ್ಣೀರು ಹಾಕುತ್ತಿದ್ದಾರೆ. ಈ ಘನ ಘೋರ ಅಪಘಾತದಲ್ಲಿ ತಮ್ಮ ತಂದೆ ಹಾಗೂ ತಾಯಿಯನ್ನು ಕಳೆದುಕೊಂಡು ಅನಾಥರಾದ ಮಕ್ಕಳ ಪಾಲಿಗೆ ಖ್ಯಾತ ಉದ್ಯಮಿ ಗೌತಮ್ ಅದಾನಿ ಆಪತ್ಬಾಂಧವರಾಗಿದ್ದಾರೆ.

ಭೀಕರ ರೈಲ್ವೆ ದುರಂತದಲ್ಲಿ ಪೋಷಕರನ್ನು ಕಳೆದುಕೊಂಡ ಮಕ್ಕಳ ಶಾಲಾ ಶಿಕ್ಷಣದ ಜವಾಬ್ದಾರಿಯನ್ನು ಅದಾನಿ ಗ್ರೂಪ್ ವಹಿಸಿಕೊಳ್ಳುತ್ತದೆ ಎಂದು ಗೌತಮ್ ಅದಾನಿ ಘೋಷಿಸಿದ್ದಾರೆ. ಈ ಕುರಿತು ಟ್ವೀಟ್​ ಮಾಡಿದ ಅವರು, ‘ಒಡಿಸಾ ರೈಲು ದುರಂತ ಘಟನೆಯಿಂದ ನಮಗೆಲ್ಲಾ ಬಹಳ ನೋವು ತಂದಿದೆ.

ಈ ಅಪಘಾತದಲ್ಲಿ ತಮ್ಮ ಪೋಷಕರನ್ನು ಕಳೆದುಕೊಂಡ ಮುಗ್ಧ ಮಕ್ಕಳ ಶಾಲಾ ಶಿಕ್ಷಣದ ಜವಾಬ್ದಾರಿಯನ್ನು ಅದಾನಿ ಸಮೂಹ ಸಂಸ್ಥೆಯು ವಹಿಸಿಕೊಳ್ಳುತ್ತದೆ. ಸಂತ್ರಸ್ತರು ಹಾಗೂ ಅವರ ಕುಟುಂಬಗಳಿಗೆ ನೆರವು ಒದಗಿಸುವುದು ಮತ್ತು ಮಕ್ಕಳಿಗೆ ಒಳ್ಳೆಯ ಭವಿಷ್ಯ ರೂಪಿಸುವುದು ನಮ್ಮೆಲ್ಲರ ಜಂಟಿ ಜವಾಬ್ದಾರಿ ಆಗಿದೆ’ ಎಂದು ಅದಾನಿ ಗ್ರೂಪ್ ಮುಖ್ಯಸ್ಥ ಗೌತಮ್ ಅದಾನಿ ಟ್ವೀಟ್​ನಲ್ಲಿ ಬರೆದುಕೊಂಡಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಒಡಿಶಾ ರೈಲು ದುರಂತದಲ್ಲಿ ಅನಾಥರಾದ ಮಕ್ಕಳ ಪಾಲಿಗೆ ಆಪದ್ಬಾಂಧವರಾದ್ರು ಗೌತಮ್ ಅದಾನಿ; ಮಹತ್ವದ ಘೋಷಣೆ

https://newsfirstlive.com/wp-content/uploads/2023/06/New-Project-6-2.jpg

Load More