₹500 ರೂಪಾಯಿಗೆ 4 ಸೀರೆ.. ಸೂಪರ್ ಆಫರ್​ಗಾಗಿ ಓಡೋಡಿ ಬಂದ ಮಹಿಳೆಯರಿಗೆ ಕಾದಿತ್ತು ಶಾಕ್!​

author-image
Veena Gangani
Updated On
₹500 ರೂಪಾಯಿಗೆ 4 ಸೀರೆ.. ಸೂಪರ್ ಆಫರ್​ಗಾಗಿ ಓಡೋಡಿ ಬಂದ ಮಹಿಳೆಯರಿಗೆ ಕಾದಿತ್ತು ಶಾಕ್!​
Advertisment
  • ಸೂಪರ್ ಆಫರ್ ಸೀರೆಗಾಗಿ ಮುಗಿಬಿದ್ದ ಮಹಿಳೆಯರು
  • ಉದ್ಘಾಟನೆ ಹಿನ್ನೆಲೆ ಸೆಂಥಿಲ್ ಕುಮಾರ್ ಟೆಕ್ಸ್​ಟೈಲ್ ಆಫರ್
  • ಮಹಿಳೆಯರಿಗೆ ಸೀರೆ ವಿತರಿಸಲಾಗದೆ ಮಾಲೀಕ ಕಂಗಾಲು

ಮಂಡ್ಯ: ಸೀರೆ ಎಂದರೆ ಹೆಣ್ಣು ಮಕ್ಕಳಿಗೆ ಅಚ್ಚುಮೆಚ್ಚು. ಹಬ್ಬ ಹರಿದಿನಗಳು ಬಂದರೆ ಸಾಕು ಹೆಣ್ಣು ಮಕ್ಕಳು ಸೀರೆ ಅಂಗಡಿಯಲ್ಲಿ ಪ್ರತ್ಯಕ್ಷರಾಗಿರುತ್ತಾರೆ. ಕೃಷ್ಣ ಜನ್ಮಾಷ್ಠಮಿ, ವರ ಮಹಾಲಕ್ಷ್ಮಿ ಸೇರಿದಂತೆ ಸಾಲು ಸಾಲು ಹಬ್ಬಗಳು ಶ್ರಾವಣ ಮಾಸದಲ್ಲೇ ಬರುತ್ತವೆ. ಹೀಗಾಗಿ ಮಹಿಳೆಯರು ಈ ಹಬ್ಬಗಳನ್ನು ಗ್ರ್ಯಾಂಡ್​ ಆಗಿ ಆಚರಿಸೋದಕ್ಕೆ ತುದಿಗಾಲಲ್ಲಿ ನಿಂತಿದ್ದಾರೆ.

ಇದನ್ನೂ ಓದಿ:ಎರಡನೇ ಪಾಯಿಂಟ್​​​ನಲ್ಲೂ ಸಿಕ್ಕಿಲ್ಲ ಯಾವುದೇ ಕುರುಹು.. SIT ಮುಂದಿನ ಪ್ಲಾನ್ ಏನು?

publive-image

ಇಂತಹ ಸಂದರ್ಭದಲ್ಲೇ ಸಾವಿರ ರೂಪಾಯಿ ಕೊಟ್ಟು ಹಬ್ಬಕ್ಕೆ ಮಹಿಳೆಯರು ಸೀರೆಯನ್ನು ಖರೀದಿ ಮಾಡ್ತಾರೆ. ಆದ್ರೆ ಜಸ್ಟ್​ 500 ರೂಪಾಯಿಗೆ 4 ಸೀರೆಗಳು ಬರುತ್ತವೆ ಅಂದರೆ ಯಾರ್​ ತಾನೇ ಸುಮ್ಮನೆ ಬಿಡ್ತಾರೆ ಹೇಳಿ. ಇದೀಗ ಅಂಗಡಿ ಮಾಲೀಕನೊಬ್ಬ 500 ರೂಪಾಯಿಗೆ 4 ಸೀರೆಗಳು ಅಂತ ಆಫರ್​ ಬಿಟ್ಟು ಫಜಿತಿಗೆ ಸಿಕ್ಕಿಹಾಕಿಕೊಂಡಿದ್ದಾನೆ.

publive-image

ಹೌದು, ನೂತನ ಬಟ್ಟೆ ಅಂಗಡಿ ಮಾಲೀಕರು ಓಪನಿಂಗ್‌ಗೆ ಅಂತ ಮಹಿಳೆಯರಿಗೆ 500 ರೂಪಾಯಿಗೆ 3 ಸೀರೆ ಆಫರ್ ಕೊಟ್ಟಿದ್ದಾರೆ. ಈ ಆಫರ್‌ ಬಗ್ಗೆ ತಿಳಿದ್ದೇ ತಡ ಮಹಿಳೆಯರೆಲ್ಲ ನಾ ಮುಂದು, ತಾ ಮುಂದು ಅಂತ ಅಂಗಡಿಗೆ ಧಾವಿಸಿದ್ದಾರೆ. ಇಂದು ಮಂಡ್ಯದ ವಿವಿ ರಸ್ತೆಯಲ್ಲಿ ಸೆಂಥಿಲ್ ಕುಮಾರ್ ಟೆಕ್ಸ್​ಟೈಲ್ ಅಂಗಡಿಯ ಉದ್ಘಾಟನೆ ವೇಳೆ 500 ರೂಪಾಯಿಗೆ 4 ಸೀರೆ ಅಂತ ಆಫರ್​ ಘೋಷಣೆ ಮಾಡಿದ್ದರು.

publive-image

ಇದೇ ವೇಳೆ ಸೀರೆಯನ್ನು ಕೊಳ್ಳಲು ಮಹಿಳೆಯರ ಮಧ್ಯೆ ನೂಕುನುಗ್ಗಲು ಉಂಟಾಗಿದೆ. ಏಕಾಏಕಿ ನೂರಾರು ಮಹಿಳೆಯರ ಜಮಾವಣೆ ಕಂಡು ಸೀರೆಯನ್ನು ವಿತರಿಸಲಾಗದೆ ಮಾಲೀಕ ಕಂಗಾಲಾಗಿದ್ದ. ಮಹಿಳೆಯ ಸಂಖ್ಯೆ ಹೆಚ್ಚಾಗುತ್ತಿದ್ದಂತೆ ಅಂಗಡಿ ಬಾಗಿಲು ಕ್ಲೋಸ್ ಮಾಡಿಬಿಟ್ಟಿದ್ದಾರೆ. ಹೀಗಾಗಿ ನೂರಾರು ಮಹಿಳೆಯರು ಬಿಸಿಲಿನಲ್ಲಿಯೃ ಕಾದು ನಿಂತ ದೃಶ್ಯ ಕಂಡು ಬಂದಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment