/newsfirstlive-kannada/media/post_attachments/wp-content/uploads/2024/12/SAMBHAL.jpg)
ಉತ್ತರ ಪ್ರದೇಶದ ಸಂಭಾಲ್ ಜಿಲ್ಲೆಯ ಕಗ್ಗು ಸರಾಯಿಯಲ್ಲಿ ಶಿವನ ದೇವಾಲಯವೊಂದು ಪತ್ತೆಯಾಗಿದೆ. ಸುಮಾರು 46 ವರ್ಷಗಳ ಹಿಂದೆ ಈ ದೇವಾಲಯಕ್ಕೆ ಬೀಗ ಜಡಿಯಲಾಗಿತ್ತು. ಕ್ರಮೇಣ ದೇಗುಲ ಇರೋದನ್ನೇ ಹಿಂದೂಗಳು ಮರೆತುಬಿಟ್ಟಿದ್ದರು. ಇದೀಗ ದೇವಸ್ಥಾನದ ಬಾಗಿಲು ಓಪನ್ ಆಗಿದೆ.
ಆಗಿದ್ದು ಏನು..?
ಮುಸ್ಲಿಂ ಸಮುದಾಯ ಈ ಪ್ರದೇಶದಲ್ಲಿ ಹೆಚ್ಚಾಗಿ ವಾಸವಿದೆ. 46 ವರ್ಷಗಳ ನಡೆದ ಗಲಾಟೆಯಲ್ಲಿ ಹಿಂದೂಗಳೆಲ್ಲರೂ ಅಲ್ಲಿಂದ ಓಡಿ ಹೋಗಿದ್ದರು. ಬಳಿಕ ದೇವಾಲಯದ ಪ್ರದೇಶವನ್ನು ಅತಿಕ್ರಮವಾಗಿ ಒತ್ತುವರಿ ಮಾಡಿದ್ದರಿಂದ ದೇವಸ್ಥಾನಕ್ಕೆ ಶಾಶ್ವತವಾಗಿ ಬೀಗ ಬಿದ್ದಿದೆ ಎನ್ನಲಾಗಿದೆ.
ಪತ್ತೆ ಆಗಿದ್ದು ಹೇಗೆ..?
ಸಂಭಲ್ ಜಿಲ್ಲೆಯಲ್ಲಿ ವಿದ್ಯುತ್ ಕಳ್ಳತನ ಪ್ರಕರಣ ಹೆಚ್ಚಾಗಿತ್ತು. ಆ ಭಾಗದ ಮಸೀದಿ, ಮದರಸಾಗಳಲ್ಲಿ ವಿದ್ಯುತ್ ಕಳ್ಳತನ, ಅಕ್ರಮ ಸಂಪರ್ಕ ಪ್ರಕರಣಗಳು ಬೆಳಕಿಗೆ ಬಂದಿದ್ದವು. ಅದರ ವಿರುದ್ಧ ಅಲ್ಲಿನ ಜಿಲ್ಲಾಧಿಕಾರಿಗಳು ಹಾಗೂ ಪೊಲೀಸ್ ವರಿಷ್ಠಾಧಿಕಾರಿಗಳು ಅಭಿಯಾನ ಆರಂಭಿಸಿದ್ದರು. ಅಂತೆಯೇ ಈ ಪ್ರದೇಶಕ್ಕೆ ಭೇಟಿ ನೀಡಿ ಪರಿಶೀಲನೆ ಮಾಡಿದಾಗ ಶಿವನ ದೇವಸ್ಥಾನ ಪತ್ತೆಯಾಗಿದೆ. ಅದನ್ನು ನೋಡಿದ ಜಿಲ್ಲಾಧಿಕಾರಿಗಳು, ದೇವಸ್ಥಾನ ಬಾಗಿಲು ತೆಗಿಸಿ ಶುದ್ಧಿಕಾರ್ಯ ಮಾಡಿಸಿದ್ದಾರೆ.
ಇದನ್ನೂ ಓದಿ:ಜಾಮೀನು ಸಿಕ್ಕ ಮೇಲೆ ನಟ ದರ್ಶನ್‌ಗೆ ಸರ್ಜರಿ ಆಗುತ್ತಾ? ಇಲ್ವಾ? ಡೆವಿಲ್‌ಗೆ ಬಿಗ್ ಟೆನ್ಷನ್!
/newsfirstlive-kannada/media/post_attachments/wp-content/uploads/2024/12/SAMBHAL-1.jpg)
1978 ರಿಂದ ಬಾಗಿಲು ಮುಚ್ಚಲಾಗಿದೆ
ದೇವಸ್ಥಾನ ಪತ್ತೆಯಾದ ಬಗ್ಗೆ ಸಂಭಾಲ್‌ನ ಉಪ ಜಿಲ್ಲಾಧಿಕಾರಿ ವಂದನಾ ಮಿಶ್ರಾ ಪ್ರತಿಕ್ರಿಯಿಸಿದ್ದಾರೆ. ನಾವು ವಿದ್ಯುತ್ ಕಳ್ಳತನದ ವಿರುದ್ಧ ಕ್ಯಾಂಪೇನ್ ಆರಂಭಿಸಿದ್ದೇವು. ಈ ವೇಳೆ ನಮಗೆ ಒಂದು ದೇವಸ್ಥಾನ ಕಂಡುಬಂದಿದೆ. 1978 ರಿಂದ ಈ ದೇವಾಲಯವನ್ನು ಮುಚ್ಚಲಾಗಿದೆ. ನಾವೀಗ ದೇವಾಲಯವನ್ನು ತೆರೆದು ಸ್ವಚ್ಛಗೊಳಿಸಿದ್ದೇವೆ. ದೇವಾಲಯದ ಸುತ್ತ ಅತಿಕ್ರಮಣಗೊಂಡ ಪ್ರದೇಶವನ್ನು ತೆರವುಗೊಳಿಸುತ್ತೇವೆ ಎಂದಿದ್ದಾರೆ.
ವಲಸೆ ಹೋಗಿದ್ದ ಹಿಂದೂ ಕುಟುಂಬ..!
ದೇವಸ್ಥಾನದ ಬಗ್ಗೆ ಅಲ್ಲಿನ ಸ್ಥಳೀಯ ಹಿಂದೂ ಸಭಾದ ಧರ್ಮದರ್ಶಿ ವಿಷ್ಣು ಶರಣ ಮಾತನಾಡಿ, ‘ನಾವು ಖಗ್ಗು ಸಾರಾಯಿ ಪ್ರದೇಶದಲ್ಲಿ ವಾಸವಿದ್ದೆವು. ನಮಗೆ ಅಲ್ಲಿ ಮನೆ ಇತ್ತು. 1978ರಲ್ಲಿ ಅಲ್ಲಿನ ಮನೆಯನ್ನು ಮಾರಿ ಬೇರೆ ಮನೆಗೆ ಬಂದ್ವಿ. ಇದು ಶಿವನ ದೇವಾಲಯ. ನಾವು ಆ ಪ್ರದೇಶವನ್ನು ತೊರೆದಿದ್ದೇವೆ. ಆ ದೇವಾಲಯವನ್ನು ನೋಡಿಕೊಳ್ಳಲು ಸಾಧ್ಯವಾಗಲಿಲ್ಲ. ಅಲ್ಲಿ ಯಾವುದೇ ಪೂಜಾರಿ ವಾಸಿಸಲಿಲ್ಲ. ಈಗ ಅಲ್ಲಿ ಸುಮಾರು 15 ರಿಂದ 20 ಕುಟುಂಬಗಳು ಅಕ್ರಮವಾಗಿ ವಾಸಿಸುತ್ತಿವೆ. ಅಲ್ಲಿ ಉಳಿಯಲು ಯಾರಿಗೂ ಧೈರ್ಯ ಇರಲಿಲ್ಲ ಎಂದಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us