newsfirstkannada.com

ಮಂಡ್ಯದಲ್ಲಿ ಭ್ರೂಣ ಹತ್ಯೆ ಮಾಡುವ ಮತ್ತೊಂದು ಜಾಲ ಪತ್ತೆ.. ಬೆಚ್ಚಿ ಬಿದ್ದ ಅಧಿಕಾರಿಗಳು!

Share :

Published May 6, 2024 at 3:04pm

Update May 6, 2024 at 3:08pm

  2023ರಲ್ಲಿ ಮಂಡ್ಯದ ಆಲೆಮನೆಯಲ್ಲಿ ಅಕ್ರಮವಾಗಿ ಭ್ರೂಣ ಹತ್ಯೆ ಪತ್ತೆ

  ಈಗ ತಾಲ್ಲೂಕು ಹೆಲ್ತ್ ಕ್ವಾರ್ಟರ್ಸ್‌ನಲ್ಲಿ ಈ ರೀತಿಯ ಪ್ರಕರಣ ಬೆಳಕಿಗೆ

  ಸರ್ಕಾರಿ ವಸತಿ ಗೃಹದಲ್ಲೇ ಭ್ರೂಣ ಹತ್ಯೆ ನಡೆಯುತ್ತಿರುವ ಜಾಲ ಕಂಡು ಶಾಕ್!

ಮಂಡ್ಯ: ಹೆಣ್ಣು ಭ್ರೂಣ ಹತ್ಯೆಗೆ ಎಷ್ಟೇ ಕಠಿಣ ಕ್ರಮ ಕೈಗೊಂಡರೂ ಭ್ರೂಣ ಹತ್ಯೆ ಮಾಡುವ ಪ್ರಯತ್ನಗಳು ನಿಂತಿಲ್ಲ. ಕಳೆದ ವರ್ಷ ಮಂಡ್ಯ ಜಿಲ್ಲೆಯ ಆಲೆಮನೆಯಲ್ಲಿ ಅಕ್ರಮವಾಗಿ ನಡೆಸಲಾಗುತ್ತಿದ್ದ ಭ್ರೂಣ ಹತ್ಯೆಯ ದೊಡ್ಡ ದಂಧೆಯನ್ನು ಪತ್ತೆ ಹಚ್ಚಲಾಗಿತ್ತು. ಇದೀಗ ಮತ್ತೆ ಮಂಡ್ಯ ಜಿಲ್ಲೆಯಲ್ಲಿ ಭ್ರೂಣ ಹತ್ಯೆ ಮಾಡುವ ಜಾಲವೊಂದು ಸಿಕ್ಕಿ ಬಿದ್ದಿದೆ.

ಸರ್ಕಾರಿ ವಸತಿ ಗೃಹದಲ್ಲೇ ಭ್ರೂಣ ಹತ್ಯೆ ನಡೆಯುತ್ತಿರುವ ಪ್ರಕರಣ ಬೆಳಕಿಗೆ ಬಂದಿದೆ. ಈ ಬಗ್ಗೆ ಮಾಹಿತಿ ಬಂದ ತಕ್ಷಣವೇ ಅಧಿಕಾರಿಗಳು ದಾಳಿ ಮಾಡಿ ನಾಲ್ಕು ಜನರನ್ನು ವಶಕ್ಕೆ ಪಡೆದಿದ್ದಾರೆ. ಪಾಂಡವಪುರದಲ್ಲಿ ಮಾತನಾಡಿದ ಜಿಲ್ಲಾಧಿಕಾರಿ ಡಾ. ಕುಮಾರ್ ಅವರು ವಿಷಯ ಗೊತ್ತಾದ ಕೂಡಲೇ ಸ್ಥಳಕ್ಕೆ ಡಿಎಚ್ಓರನ್ನ ಕಳುಹಿಸಿಕೊಟ್ಟಿದ್ದೇವೆ. ತಾಲ್ಲೂಕು ಹೆಲ್ತ್ ಕ್ವಾರ್ಟರ್ಸ್‌ನಲ್ಲಿ ಈ ರೀತಿಯ ಪ್ರಕರಣ ಕಂಡು ಬಂದಿದೆ. ಭ್ರೂಣ ಹತ್ಯೆಗೆ ಬಳಸಿಕೊಂಡ ಮನೆಯನ್ನು ಸೀಜ್‌ ಮಾಡಿದ್ದೇವೆ ಎಂದಿದ್ದಾರೆ.

ಮೈಸೂರಿನಿಂದ ಗರ್ಭಪಾತಕ್ಕಾಗಿ ಮಂಡ್ಯ ಜಿಲ್ಲೆ ಪಾಂಡವಪುರಕ್ಕೆ ಬಂದಿದ್ದಾರೆ. ಅಧಿಕಾರಿಗಳು ಗರ್ಭಿಣಿಯನ್ನ ಮಾತನಾಡಿಸಿದ್ದು, ಅವರು ಕೊಟ್ಟ ಹೇಳಿಕೆ ಮೇಲೆ ವಿಚಾರಣೆ ನಡೆಸುತ್ತಿದ್ದಾರೆ. ಭ್ರೂಣ ತೆಗಿಸಲು ಬಂದಿದ್ದ ಮಹಿಳೆಗೆ ಅನ್ವಾಂಟೆಡ್ 5 ಮಾತ್ರೆ ಕೊಟ್ಟಿದ್ದಾರೆ. ಬಳಿಕ ನೋವು ಬಂದಾಗ ಬರುವಂತೆ ಲಾಡ್ಜ್ ಒಂದಕ್ಕೆ ಕಳುಹಿಸಿದ್ದಾರೆ. ಅದಕ್ಕೂ ಮುನ್ನ 15 ದಿನಗಳ ಹಿಂದೆ ಬೇರೆಡೆ ಸ್ಕ್ಯಾನಿಂಗ್ ನಡೆಸಿ ಹೆಣ್ಣು ಭ್ರೂಣ ಇದೆ ಅಂತ ಹೇಳಿದ್ದಾರೆ. ಭ್ರೂಣ ಹತ್ಯೆ ಮಾಡಿಸಲು ಇಲ್ಲಿಗೆ ಬಂದಿದ್ದಾರೆ. ಎಲ್ಲವೂ ತನಿಖೆ ಬಳಿಕ ಬಹಿರಂಗವಾಗಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಇದನ್ನೂ ಓದಿ: ಹಾಸನ ಅಶ್ಲೀಲ ವಿಡಿಯೋ ಶೇರ್ ಮಾಡಿದ್ರೆ ಜೈಲಿಗೆ ಹೋಗ್ತೀರಿ ಹುಷಾರ್..! 

ಗರ್ಭಪಾತಕ್ಕೆ ಆಗಮಿಸಿದ ಮಹಿಳೆ ಮೈಸೂರು ಜಿಲ್ಲೆಯ ಸಾಲೂಂಡಿ ಗ್ರಾಮದವರಾಗಿದ್ದಾರೆ. ಸ್ಕ್ಯಾನಿಂಗ್ ಮಾಡಿಸಿದ ಜಾಗ ಫೋನ್ ನಂಬರ್ ಕೊಟ್ಟವರ ಬಗ್ಗೆ ಮಾಹಿತಿ ಕೊಟ್ಟಿದ್ದಾರೆ. ಈ ರೀತಿಯ ಭ್ರೂಣ ಹತ್ಯೆ ನಡೆದಿರುವುದು ವಿಷಾದನೀಯ. ಆರೋಗ್ಯ ಇಲಾಖೆ ಸಿಬ್ಬಂದಿಗಳ ಜೊತೆ ಸಭೆ ಮಾಡಲಾಗಿದೆ. ಕಾನೂನು ಪ್ರಕಾರ ಸೂಕ್ರವಾದ ಕ್ರಮ ಕೈಗೊಳ್ಳಲಾಗುತ್ತೆ. ಇದು ದೊಡ್ಡ ಮಟ್ಟದ ಜಾಲ ಇರುವ ಬಗ್ಗೆ ಶಂಕೆ ಇದೆ. ಕೂಲಂಕುಶವಾಗಿ ತನಿಖೆ ಬಳಿಕ ಎಲ್ಲವೂ ತಿಳಿಯಲಿದೆ ಎಂದು ಜಿಲ್ಲಾಧಿಕಾರಿ ಡಾ. ಕುಮಾರ್ ಮಾಹಿತಿ ನೀಡಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಮಂಡ್ಯದಲ್ಲಿ ಭ್ರೂಣ ಹತ್ಯೆ ಮಾಡುವ ಮತ್ತೊಂದು ಜಾಲ ಪತ್ತೆ.. ಬೆಚ್ಚಿ ಬಿದ್ದ ಅಧಿಕಾರಿಗಳು!

https://newsfirstlive.com/wp-content/uploads/2024/05/Mandya-Baby-Death.jpg

Load More