/newsfirstlive-kannada/media/post_attachments/wp-content/uploads/2024/05/PRAJWAL-REVANNA.jpg)
ಚಿಕ್ಕಬಳ್ಳಾಪುರ: ಹಾಸನ ಅಶ್ಲೀಲ ವಿಡಿಯೋ ಪ್ರಕರಣಕ್ಕೆ ಮತ್ತು ಕಿಡ್ನಾಪ್​ ಕೇಸ್​ಗೆ ಸಂಬಂಧಿಸಿ ಮಾಜಿ ಸಚಿವ ಎಚ್​ ಡಿ ರೇವಣ್ಣ ಅವರ ಬಂಧನವಾಗಿದೆ. ಇತ್ತ ವಿದೇಶದಲ್ಲಿ ತಲೆಮರೆಸಿಕೊಂಡಿರುವ ಮಗ ಪ್ರಜ್ವಲ್​ ರೇವಣ್ಣನಿಗಾಗಿ ಎಸ್​ಐಟಿ ಕಾದು ಕುಳಿತಿದೆ. ಅದಕ್ಕಾಗಿ ಕೇಂದ್ರೀಯ ತನಿಖಾ ದಳ ‘ಬ್ಲೂ ಕಾರ್ನರ್​’ ನೋಟಿಸ್​ ನೀಡಿದೆ. ನೋಟಿಸ್​ ನೀಡಿದರು ಪ್ರಜ್ವಲ್​ ಮಾತ್ರ ಭಾರತಕ್ಕೆ ವಾಪಾಸ್ಸಾಗಿಲ್ಲ. ಹೀಗಾಗಿ ಅಧಿಕಾರಿಗಳ ತಂಡ ವಿದೇಶಕ್ಕೆ ತೆರಳಲು ಸಜ್ಜಾಗಿದೆ ಎಂಬ ಮಾಹಿತಿ ಹೊರಬಿದ್ದಿದೆ.
ಹಿರಿಯ ಅಧಿಕಾರಿಗಳ ನೇತೃತ್ವದಲ್ಲಿ ಗುಪ್ತ ಸಭೆ ನಡೆದಿದ್ದು, ಸಭೆಯಲ್ಲಿ ಮೈಸೂರು, ಹಾಸನ, ಮಂಡ್ಯ, ರಾಮನಗರ ಅಧಿಕಾರಿಗಳ ಟೀಂ ವಿದೇಶಕ್ಕೆ ತೆರಳಿದ್ದಾರೆ ಎಂಬ ಬಗ್ಗೆ ಚರ್ಚೆಯಾಗಿದೆ ಎನ್ನಲಾಗುತ್ತಿದೆ. ನಾಲ್ಕು ಜಿಲ್ಲೆಗಳ ಎಂಟು ಮಂದಿಯ ಟೀಂ ಕಳುಹಿಸಲು ಸಿದ್ಧತೆ ಮಾಡಿಕೊಂಡಿದ್ದಾರೆ ಎನ್ನಲಾಗುತ್ತಿದೆ.
ಸ್ಯಾಂಟ್ರೋ ರವಿ ಕೇಸ್ ನಲ್ಲಿ ಕರ್ತವ್ಯ ನಿರ್ವಹಿಸಿದ್ದ ಕೆಲವರನ್ನು ಆಯ್ಕೆ ಮಾಡಿಕೊಳ್ಳಲಾಗಿದೆ. ಪ್ರಜ್ವಲ್​ ಪೆನ್​ಡ್ರೈವ್​ ಕೇಸ್​ಗೆ ಈ ಅಧಿಕಾರಿಗಳನ್ನು ಬಳಸಿಕೊಂಡು ವಿದೇಶಕ್ಕೆ ಕಳಿಸಲಾಗುತ್ತದೆ. ಇವತ್ತು ಅಥವಾ ನಾಳೆ ವಿದೇಶಕ್ಕೆ ತೆರಳಲು ಪ್ಲಾನ್ ಮಾಡಿಕೊಂಡಿದ್ದಾರೆ ಎನ್ನಲಾಗುತ್ತಿದೆ.
ಇದನ್ನೂ ಓದಿ: ವೇಗವಾಗಿ ಬಂದು ವಿದ್ಯುತ್​ ಕಂಬಕ್ಕೆ ಡಿಕ್ಕಿ ಹೊಡೆದ ಬೈಕ್​.. ಸವಾರರಿಬ್ಬರು ಸ್ಥಳದಲ್ಲೇ ಸಾವು
ಇತ್ತ ಪ್ರಜ್ವಲ್ ರೇವಣ್ಣನಿಗಾಗಿ ಎಸ್​ಐಟಿ ಅಧಿಕಾರಿಗಳು ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ದಲ್ಲಿ ಕಾದು ಕುಳಿತ್ತಿದ್ದಾರೆ. ಎರಡು ದಿನಗಳಿಂದ ಪ್ರಜ್ವಲ್ ರೇವಣ್ಣ ಬಗ್ಗೆ ಇಂಚಿಂಚು ಮಾಹಿತಿ ಪಡೆಯುತ್ತಿದ್ದಾರೆ. ಜರ್ಮನಿಯಿಂದ ದುಬೈಗೆ ಹೋಗಿದ್ದಾರೆಂಬ ಮಾಹಿತಿ ಕಲೆಹಾಕಿರುವ ಎಸ್​ಐಟಿ ಟೀಂ ದುಬೈನಿಂದ ಬರುವ ಎಲ್ಲಾ ವಿಮಾನಗಳ ಪ್ರಯಾಣಿಕರ ಲಿಸ್ಟ್ ಚೆಕ್ ಮಾಡುತ್ತಿದ್ದಾರೆ. ಮಾತ್ರವಲ್ಲದೆ ಪ್ರಜ್ವಲ್​ ಲೊಕೇಶನ್​ ಟ್ರ್ಯಾಕ್​ ಮಾಡಿದ್ದಾರೆ.
ಆದರಿಂದು ಪ್ರಜ್ವಲ್ ರೇವಣ್ಣ ಭಾರತಕ್ಕೆ ಬರುವ ಸಾಧ್ಯತೆಯಿದೆ. ಅಧಿಕಾರಿಗಳಂತೂ ವಿದೇಶಗಳಿಂದ ಬರುವ ಎಲ್ಲಾ ವಿಮಾನಗಳ ಮೇಲೆ ನಿಗಾ ಇಟ್ಟಿದ್ದಾರೆ. ದೇವನಹಳ್ಳಿ ಬಳಿಯ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣ, ಮಂಗಳೂರು ಏರ್​ಪೋರ್ಟ್​ನಲ್ಲಿ ನಿಗಾ ವಹಿಸಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us