ವಿಜಯ್ ಸ್ಟಿಂಗ್ ಆಪರೇಷನ್ ಬೆನ್ನಲ್ಲೇ ಅಧಿಕಾರಿಗಳು ಫುಲ್ ಅಲರ್ಟ್; ಮೆಡಿಕಲ್ ಸ್ಟೋರ್​ಗಳಲ್ಲಿ ಡ್ರಗ್ಸ್ ಮಾತ್ರೆ ಪತ್ತೆ

author-image
Veena Gangani
Updated On
ವಿಜಯ್ ಸ್ಟಿಂಗ್ ಆಪರೇಷನ್ ಬೆನ್ನಲ್ಲೇ ಅಧಿಕಾರಿಗಳು ಫುಲ್ ಅಲರ್ಟ್; ಮೆಡಿಕಲ್ ಸ್ಟೋರ್​ಗಳಲ್ಲಿ ಡ್ರಗ್ಸ್ ಮಾತ್ರೆ ಪತ್ತೆ
Advertisment
  • ವೈದ್ಯಾಧಿಕಾರಿ ಡಾ ಮರಿಯಪ್ಪ ನೇತೃತ್ವದಲ್ಲಿ ಅಧಿಕಾರಿಗಳಿಂದ ಏಕಾಏಕಿ ದಾಳಿ
  • ಮೆಡಿಕಲ್ ಸ್ಟೋರ್​ಗಳಲ್ಲಿ ಮತ್ತು ಬರಿಸುವ ಡ್ರಗ್ಸ್ ಮಾತ್ರೆಗಳ ಮಾರಾಟ
  • ಮೆಡಿಕಲ್ ಸ್ಟೋರ್​ಗಳ ಮೇಲೆ ದಾಳಿ ನಡೆಸಿದ ಅಧಿಕಾರಿಗಳಿಂದ ತನಿಖೆ

ಸ್ಯಾಂಡಲ್​ವುಡ್​ ನಟ ದುನಿಯಾ ವಿಜಯ್ ಮಾದಕ ದ್ರವ್ಯದ ವಿರುದ್ಧ ಸಮರ ಸಾರಿದ್ದಾರೆ. ಸ್ಟಿಂಗ್ ಆಪರೇಷನ್ ಮಾಡುವ ಮೂಲಕ ಮಾದಕ ದ್ರವ್ಯದ ಜಾಲವನ್ನು ಎಳೆ ಎಳೆಯಾಗಿ ಬಿಚ್ಚಿಡ್ತಿದ್ದಾರೆ. ಇದ್ರಿಂದ ಎಚ್ಚೆತ್ತ ಅಧಿಕಾರಿಗಳು ಮೆಡಿಕಲ್ ಸ್ಟೋರ್​ಗಳ ಮೇಲೆ ದಾಳಿ ನಡೆಸಿದ್ದಾರೆ.

ಇದನ್ನೂ ಓದಿ: ಕಾಲೇಜು ಹಾಸ್ಟೆಲ್‌ನಲ್ಲಿ ದುರಂತ.. ಮೈಸೂರಲ್ಲಿ ವಿದ್ಯಾರ್ಥಿನಿ ಅನುಮಾನಾಸ್ಪದ ಸಾವು; ಆಗಿದ್ದೇನು?

publive-image

ಕುಣಿಗಲ್ ಪಟ್ಟಣದಲ್ಲಿರುವ ಮೆಡಿಕಲ್ ಸ್ಟೋರ್​ಗಳ ಮೇಲೆ ಡ್ರಗ್ ಕಂಟ್ರೋಲ್ ಅಧಿಕಾರಿಗಳ ತಂಡ ದಾಳಿ ನಡೆಸಿದೆ. ಈ ವೇಳೆ ಡ್ರಗ್ಸ್​ಗೆ ಸಂಬಂಧಿಸಿದಂತ ಮಾತ್ರೆಗಳು ಪತ್ತೆಯಾಗಿದ್ದು, ತನಿಖೆ ಮುಂದುವರಿಸಿದ್ದಾರೆ. ಅವ್ಯಾಹತವಾಗಿ ಯಾವುದೇ ವೈದ್ಯರ ಚೀಟಿ ಅಥವಾ ಡಿಸ್ಕ್ರಿಪ್ಷನ್ ಇಲ್ಲದೇ ಮೆಡಿಕಲ್ ಸ್ಟೋರ್​ಗಳಲ್ಲಿ ಮತ್ತು ಬರಿಸುವ ಡ್ರಗ್ಸ್ ಮಾತ್ರೆಗಳ ಮಾರಾಟ ಪ್ರಕರಣಕ್ಕೆ ಸಂಬಂಧಿಸಿದಂತೆ ಜಿಲ್ಲೆಯಲ್ಲಿ ಅಧಿಕಾರಿಗಳು ಎಚ್ಚೆತ್ತುಕೊಂಡಿದ್ದಾರೆ.

ಇದನ್ನೂ ಓದಿ: ‘ನಾಗ ಚೈತನ್ಯರಿಂದ 250 ಕೋಟಿ ಜೀವನಾಂಶ ಪಡೆದಿದ್ದೇನೆ’- ಸ್ಫೋಟಕ ಸತ್ಯ ಬಿಚ್ಚಿಟ್ಟ ನಟಿ ಸಮಂತಾ!

publive-image

ಏಕಾಏಕಿ ಮೆಡಿಕಲ್ ಸ್ಟೋರ್​ಗಳ ಮೇಲೆ ಡ್ರಗ್ ಕಂಟ್ರೋಲ್ ಅಧಿಕಾರಿಗಳ ತಂಡ ದಾಳಿ ನಡೆಸಿದ್ದಾರೆ. ಕುಣಿಗಲ್ ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜು ಬಳಿಯಿರುವ ಲಕ್ಷ್ಮೀ ವೆಂಕಟೇಶ್ವರ, ಮೆಡಿಕಲ್ ಸ್ಟೋರ್​ ಹಾಗೂ ಸಂತೆ ಮಾವತ್ತೂರಿನ ತಿರುಮಲ ಮೆಡಿಕಲ್ ಸ್ಟೋರ್ ಮೇಲೆ ದಾಳಿ ನಡೆಸಲಾಗಿದೆ. ಈ ದಾಳಿ ವೇಳೆ ಮೆಡಿಕಲ್ ಸ್ಟೋರ್​​ಗಳಲ್ಲಿ ಡ್ರಗ್ಸ್ ಮಾತ್ರೆಗಳು ಪತ್ತೆಯಾಗಿದ್ದು, ಡ್ರಗ್ ಕಂಟ್ರೋಲ್ ಅಧಿಕಾರಿಗಳು ಹಾಗೂ ಕುಣಿಗಲ್ ತಾಲೂಕು ವೈದ್ಯಾಧಿಕಾರಿ ಡಾ ಮರಿಯಪ್ಪ ನೇತೃತ್ವದಲ್ಲಿ ದಾಳಿ ಮಾಡಿರುವ ತಂಡ ಈ ಘಟನೆ ಸಂಬಂಧ ತನಿಖೆ ಮುಂದುವರಿಸಿದ್ದಾರೆ.

publive-image

ಮೆಡಿಕಲ್ಸ್ ಸ್ಟೋರ್​ಗಳಲ್ಲಿ ಮತ್ತು ಬರಿಸುವ ಡ್ರಗ್ಸ್ ಮಾತ್ರೆಗಳನ್ನ ಮಾರಾಟ ಮಾಡಲಾಗುತ್ತಿದೆ ಎಂದು ನಟ ದುನಿಯಾ ವಿಜಯ್ ತಂಡ ಸ್ಟಿಂಗ್ ಆಪರೇಷನ್ ನಡೆಸಿದ್ದ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವೈರಲ್ ಆಗಿತ್ತು. ಈ ಹಿನ್ನೆಲೆಯಲ್ಲಿ ಮೆಡಿಕಲ್ ಸ್ಟೋರ್​ಗಳ ಮೇಲೆ ದಾಳಿ ನಡೆಸಿದ ಅಧಿಕಾರಿಗಳು ತನಿಖೆ ಮುಂದುವರಿಸಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment