/newsfirstlive-kannada/media/post_attachments/wp-content/uploads/2023/09/Snake-7.jpg)
ಇದೊಂದು ಬೇರೆಯದ್ದೇ ಪ್ರಪಂಚ. ಒಂದು ಕಡೆ ದೇವರೆಂದು ಪೂಜಿಸುವ ಜನರಿದ್ದಾರೆ. ಅದೇ ಇನ್ನೊಂದು ಕಡೆ, ನಶೆ ಏರಿಸಿಕೊಳ್ಳಲು ಕಾತರರಾಗಿರೋ ಜನರಿದ್ದಾರೆ. ನಶೆ ಏರಿಸಿಕೊಳ್ಳೋರನ್ನೇ ಟಾರ್ಗೆಟ್ ಮಾಡಿಕೊಂಡವರು, ಇದನ್ನೇ ಮಾಫಿಯಾ ಮಾಡಿಕೊಂಡು, ಕೋಟ್ಯಂತರ ರೂಪಾಯಿ ಹಣ ಮಾಡ್ತಿದ್ದಾರೆ. ಸಂದೀಪ್ ಎಂಬಾತ ಮೂಲತಃ ಮೈಸೂರಿನವನು. ದೀಪು ಅಂತಾನೇ ಇವನನ್ನೇ ಕರೆಯೋರು ಇದ್ದಾರೆ. ಇವರ ಕೆಲಸ ಏನೂ ಅಂತಾ ಹೇಳೋದು. ಇದು ಸಂದೀಪ್ ಮನೆಯಲ್ಲಿದ್ದ 9 ವಿಧದ ಹಾವುಗಳು. ಅಷ್ಟಕ್ಕೂ ಮನೆಯಲ್ಲಿ ಇಷ್ಟೊಂದು ಜಾತಿಯ ಹಾವುಗಳನ್ನ ಏಕೆ ಸಾಕಿದ್ದಾನೆ ಈತ ಅನ್ನೋದೇ ಇಂಟರೆಸ್ಟಿಂಗ್ ವಿಚಾರ.
/newsfirstlive-kannada/media/post_attachments/wp-content/uploads/2023/09/Snake-9.jpg)
ವಿಷಕ್ಕಾಗಿ ಸಾಕಲಾಗಿದೆ ಅಪಾಯಕಾರಿ ಹಾವುಗಳು!
ದಾಳಿ ವೇಳೆ 9 ಜಾತಿಯ ಹಾವು ಕಂಡು ಸಿಐಡಿ ಅಧಿಕಾರಿಗಳು ಶಾಕ್!
ಹಾವುಗಳು ಅಂದ್ರೆ ಒಂದು ದೊಡ್ಡ ವರ್ಗಕ್ಕೆ ಪೂಜ್ಯನೀಯ. ವ್ರತ, ಉಪವಾಸ, ಅನುಕ್ಷಣವೂ ಪ್ರಾರ್ಥನೆ ಮಾಡೋ ಕೋಟ್ಯಂತರ ಭಕ್ತರಿದ್ದಾರೆ. ಆದರೆ ಅದೇ ರೀತಿ ಇಂತಹ ವ್ಯಕ್ತಿಗಳು ಇದ್ದಾರೆ. ಯಾಕಂದ್ರೆ, ಸಂದೀಪ್ ಅಂತವರು ಹಾವಿನ ವಿಷಕ್ಕಾಗಿ ಹಲವು ಜಾತಿಯ ಹಾವುಗಳನ್ನ ಸಾಕುತ್ತಿದ್ದಾರೆ. ಹೌದು, ಖಚಿತ ಮಾಹಿತಿ ಮೇರೆಗೆ ಸಂದೀಪ್ ಮನೆಯ ಮೇಲೆ ದಾಳಿ ಮಾಡಿದ್ದ ಸಿಐಡಿ ಫಾರೆಸ್ಟ್ ಸೆಲ್ ಅಧಿಕಾರಿಗಳು ಶಾಕ್ ಆಗಿದ್ದರು. ಯಾಕಂದ್ರೆ, ದಾಳಿ ವೇಳೆ 9 ಜಾತಿಯ ಹಾವುಗಳನ್ನ ಸಂದೀಪ್ ಸಾಕಿದ್ದ. ಮನೆಯಲ್ಲಿಯೇ ಗೌಪ್ಯವಾಗಿ 9 ಜಾತಿಯ ಹಾವುಗಳು ಪೋಷಿಸಲಾಗ್ತಿತ್ತು.
ಹಾವಿನ ಜೊತೆ ನಾಲ್ಕು ಸಿವೆಟ್ ಬೆಕ್ಕುಗಳನ್ನು ಸಾಕಿದ್ದ ಆರೋಪಿ. ನಾಲ್ಕು ಕನ್ನಡಕ ನಾಗರ, ಎರಡು ಟ್ರಿಂಕೆಟ್ ಹಾವು, ಸಾಮಾನ್ಯ ಕ್ರೈಟ್, 1 ಸಾಮಾನ್ಯ ತೋಳ ಹಾವು, ಒಂದು, ಸಾಮಾನ್ಯ ಕುಕ್ರಿ, 2 ಸಾ ಸ್ಕಾಲ್ಡ್ ವೈಪರ್, 2 ಇಲಿ ಹಾವು, 1 ಚೆಕರ್ಡ್ ಕೀಲ್‌ಬ್ಯಾಕ್ ಮತ್ತು 1 ಸ್ಯಾಂಡ್ ಬೋವಾ ರಕ್ಷಣೆ ಮಾಡಲಾಗಿದೆ. ರಕ್ಷಣೆ ಮಾಡಲಾದ ಹಾವು ಮತ್ತು ಬೆಕ್ಕುಗಳೊಂದಿಗೆ, ಆರೋಪಿಯನ್ನು ಸಿಐಡಿ ಫಾರೆಸ್ಟ್ ಸೆಲ್‌ನ ಅಧಿಕಾರಿಗಳು ಅರೆಸ್ಟ್ ಮಾಡಿದ್ದಾರೆ. ಮನೆಯಲ್ಲಿಯೇ ಹಾವುಗಳನ್ನ ಸಾಕೋದು ಏಕೆ ಅನ್ನೋದೇ ತೀವ್ರ ಕುತೂಹಲಕಾರಿ ಸಂಗತಿ. ಅದಕ್ಕೆ ಕಾರಣ, ಹಾವಿನ ವಿಷ. ಹೌದು, ಹಾವಿನ ವಿಷಕ್ಕೆ ಲಕ್ಷ ಲಕ್ಷ ಬೆಲೆಯಿದೆ. ಇದೇ ಕಾರಣಕ್ಕಾಗಿ ಆರೋಪಿ ಸಂದೀಪ್ ಹಾವುಗಳನ್ನ ಸಾಕಿದ್ದ. ಆದ್ರೆ, ಖಚಿತ ಮಾಹಿತಿಯ ಮೇರೆಗೆ ಸಿಐಡಿ ಅಧಿಕಾರಿಗಳು ದಾಳಿ ಮಾಡಿ, ಹಾವುಗಳನ್ನ ರಕ್ಷಣೆ ಮಾಡಿದ್ದಾರೆ.
/newsfirstlive-kannada/media/post_attachments/wp-content/uploads/2023/09/Snake-10.jpg)
ಹಾವಿನ ವಿಷ ಸಂಗ್ರಹಿಸೋ ದೊಡ್ಡ ಮಾಫಿಯಾ ಇದೆ!
ಕೋಟ್ಯಂತರ ರೂಪಾಯಿ ಬೆಲೆ ಬಾಳುವ ವಿಷವೂ ಸಿಕ್ಕಿದೆ!
2021 ನವೆಂಬರ್ ತಿಂಗಳಲ್ಲಿ ಒಡಿಶಾ ಪೊಲೀಸರು ಭರ್ಜರಿ ಬೇಟೆಯಾಡಿದ್ದರು. ಒಂದೂವರೆ ಕೋಟಿ ಮೌಲ್ಯದ, 1 ಕೆಜಿ ಹಾವಿನ ವಿಷವನ್ನ ಸಾಗಿಸುತ್ತಿದ್ದ ಜಾಲವನ್ನ ಭೇದಿಸಿದ್ದರು. ಸೀಲ್ ಮಾಡಿರೋ ಕಂಟೈನರ್‌ನಲ್ಲಿರಿಸಿದ್ದ ವಿಷಯವನ್ನ ಪೊಲೀಸರು ಪತ್ತೆ ಹಚ್ಚಿ ಆರೋಪಿಗಳನ್ನ ಹಿಡಿದಿದ್ದರು. ಸೀಲ್ ಮಾಡಿರೋ ಕಂಟೈನರ್‌ನಲ್ಲಿ, 1 ಕೆಜಿ ಹಾವಿನ ವಿಷವನ್ನ ಸಂಗ್ರಹಿಸಲಾಗಿತ್ತು. ಪೊಲೀಸರು ಈ ತಂಡವನ್ನ ಸಿನಿಮೀಯ ರೀತಿಯಲ್ಲಿ ಟ್ರ್ಯಾಕ್ ಮಾಡಿತ್ತು. ವಿಷ ಖರೀದಿಸುವ ಮಧ್ಯವರ್ತಿಗಳ ವೇಷ ಹಾಕಿ, ಅವರ ಜೊತೆ ಮಾತುಕತೆ ನಡೆಸಿ. ವಿಷದ ಕಂಟೈನರ್ ತರಿಸಿಕೊಂಡು, ನಂತರ ಅವರನ್ನ ಅರೆಸ್ಟ್ ಮಾಡಲಾಗಿತ್ತು. 6 ವರ್ಷಗಳ ಹಿಂದೆ ಪಶ್ಚಿಮ ಬಂಗಾಳದಲ್ಲಿ 250 ಕೋಟಿ ರೂಪಾಯಿ ಬೆಲೆ ಬಾಳುವ ಹಾವಿನ ವಿಷವನ್ನ ಫಾರೆಸ್ಟ್ ಅಧಿಕಾರಿಗಳು ಜಪ್ತಿ ಮಾಡಿದ್ದರು. ಹಾವಿನ ವಿಷವನ್ನ ಸಂಗ್ರಹಿಸುವ ದೊಡ್ಡ ಜಾಲವನ್ನ ಬಯಲಿಗೆಳೆದಿದ್ದರು.
/newsfirstlive-kannada/media/post_attachments/wp-content/uploads/2023/09/Snake-11.jpg)
ಕಿಕ್‌ಗಾಗಿ ಹಾವಿನಿಂದ ಕಚ್ಚಿಸಿಕೊಳ್ಳೋರು ಇದ್ದಾರೆ!
ಹಾವಿನ ವಿಷವನ್ನ ಇಂಜೆಕ್ಟ್ ಕೂಡ ಮಾಡಿಕೊಳ್ತಾರೆ!
ಭೂಗತ ಲೋಕದಲ್ಲಿ ಹಾವಿನ ವಿಷಕ್ಕೆ ದೊಡ್ಡ ಬೇಡಿಕೆಯಿದೆ. 1 ಕೆಜಿಗೆ ಕೋಟ್ಯಂತರ ರೂಪಾಯಿ ಕೊಡೋರು ಇದ್ದಾರೆ. ಹೀಗಾಗಿಯೇ ಇಂತಹದೊಂದು ದೊಡ್ಡ ಗ್ಯಾಂಗೇ ಇಡೀ ವಿಶ್ವಾದ್ಯಂತ ಇದೆ. ನಿಮಗೆ ಗೊತ್ತಿರಲಿ, ನಶೆಯನ್ನ ಏರಿಸಿಕೊಳ್ಳುವ ಚಟವಿರೋ ಅದೆಷ್ಟೋ ಯುವಕರು, ಹಾವಿನಿಂದ ಕಚ್ಚಿಸಿಕೊಳ್ಳುತ್ತಾರೆ ಕೂಡ. ಹೀಗೇ ಹಾವಿನಿಂದ ಕಚ್ಚಿಸಿಕೊಂಡರೇ ಅವರಿಗೆ ಸಿಗೋದು ಅಂತಿಂಥಾ ಕಿಕ್ ಅಲ್ಲ. ಅವರಿಗೊಂದು ಖುಷಿ ಸಿಗುತ್ತೆ. ಆನಂದಭರಿತ ಅನುಭವವಾಗುತ್ತೆ. ಕಣ್ಣು ತುಂಬಾ ನಿದ್ರೆನೂ ಮಾಡ್ತಾರಂತೆ. ಅದು ಸತತವಾಗಿ 3 ರಿಂದ 4 ವಾರ. ಕೈಗೆ ಅಥವಾ ತುಟಿಗೆ ಹಾವಿನಿಂದ ಕಚ್ಚಿಸಿಕೊಳ್ಳುತ್ತಾರೆ. ಇದಕ್ಕೆ ದೊಡ್ಡ ದೊಡ್ಡ ವೇದಿಕೆಗಳೇ ಇದೆ.
/newsfirstlive-kannada/media/post_attachments/wp-content/uploads/2023/09/Snake-12.jpg)
ಆರಂಭದಲ್ಲಿ ಬ್ಲರ್ ಬ್ಲರ್ ಆಗಿ ಕಾಣೋಕೆ ಶುರುವಾಗೋದು, ಎದ್ದ ನಂತರ ಅದೆನೋ ಖುಷಿ ಅವ್ರಿಗೆ ಸಿಗುತ್ತಂತೆ. ಆದ್ರೆ, ಕಾಲ ನಂತರದಲ್ಲಿ ಇದು ಆರೋಗ್ಯದ ಮೇಲೆ ಪರಿಣಾಮ ಬೀರಲಿದೆ ಅನ್ನೋದು ಎಲ್ಲರಿಗೂ ಗೊತ್ತಿರೋ ಸತ್ಯವೇ. ಹೀಗೇ ಹಾವುಗಳನ್ನ ದುರ್ಬಳಕೆ ಮಾಡಿಕೊಳ್ಳುವ ದೊಡ್ಡ ಮಾಫಿಯಾವೇ ಇದೆ. ಇದಕ್ಕೆ ಆಗಾಗ್ಗೆ ಪೊಲೀಸರು ಕಾನೂನಿನ ಮೂಲಕ ನಿರ್ಬಂಧವನ್ನು ಮಾಡಿದ್ದಾರೆ. ಆದ್ರೆ, ಇವತ್ತಿಗೂ ಈ ಮಾಫಿಯಾ ವಿಶ್ವದಾದ್ಯಂತ ಅಸ್ತಿತ್ವದಲ್ಲಿದೆ. ಆದ್ರೆ, ಇದನ್ನೇ ಅಭ್ಯಾಸ ಮಾಡಿಕೊಂಡವರಿಗೆ ಆಯಸ್ಸಂತೂ ತೀರ ಕಡಿಮೆಯೇ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us