/newsfirstlive-kannada/media/post_attachments/wp-content/uploads/2024/10/KL-RAHUL-1.jpg)
ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಮೊದಲ ಟೆಸ್ಟ್​ ಎರಡನೇ ದಿನವಾದ ಇಂದು ಕೂಡ ನ್ಯೂಜಿಲೆಂಡ್​ ತನ್ನ ಬಿಗಿ ಹಿಡಿತವನ್ನು ಸಾಧಿಸಿದೆ. ಮೊದಲನೇ ದಿನದಾಟದಲ್ಲಿ ಭಾರತವನ್ನು ಕೇವಲ 46ರನ್​ಗಳಿಗೆ ಕಟ್ಟಿಹಾಕಿದ ನ್ಯೂಜಿಲೆಂಡ್ ಪಡೆ ಬ್ಯಾಟಿಂಗ್​ ಇಳಿದು 180 ರನ್​ಗೆ 3 ವಿಕೆಟ್​ ನೀಡಿ ದಿನದಾಟ ಅಂತ್ಯಗೊಳಿಸಿದೆ. ಆದ್ರೆ ಇಂದು ನಡೆದ ಮ್ಯಾಚ್​ನಲ್ಲಿ ಕನ್ನಡಿಗ ಕೆ.ಎಲ್​.ರಾಹುಲ್​ಗೆ ಅಭಿಮಾನಿಗಳು ಹಿಡಿಶಾಪ ಹಾಕಿದ್ದಾರೆ. ಕ್ಯಾಚ್ ಹಿಡಿ ಮಾರಾಯ ಅಂತ ಗೇಲಿ ಮಾಡಿದ್ದಾರೆ.
ಎರಡನೇ ದಿನದಾಟದಲ್ಲಿ ಮೊಹಮ್ಮದ್ ಸಿರಾಜ್ 13ನೇ ಓವರ್ ಎಸೆಯುವಾಗ ನ್ಯೂಜಿಲೆಂಡ್​ ತಂಡದ ನಾಯಕ ಟಾಮ್ ಲ್ಯಾಥನ್​ ಬ್ಯಾಟ್​ಗೆ ಸವರಿಕೊಂಡು ಸ್ಲಿಪ್​ನತ್ತ ವೇಗದಿಂದ ಹೋಯ್ತು ಚೆಂಡು. ಸ್ಲಿಪ್​ನಲ್ಲಿ ನಿಂತಿದ್ದ ರಾಹುಲ್​ ಸರಳವಾದ ಕ್ಯಾಚ್​ ಕೈಚೆಲ್ಲಿದರು. ಅದು ಮಾತ್ರವಲ್ಲ ಬೌಲ್ ಬಂದ ವೇಗಕ್ಕೆ ಹೆದರಿದವರಂತೆ ಮಾಡಿದ ರಾಹುಲ್ ಕಣ್ಣು ಮುಚ್ಚಿ​ದ್ದ ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು. ಭಾರೀ ಟೀಕೆಗಳು ವ್ಯಕ್ತವಾಗಿವೆ.
KL Rahul :-
- 34 test average after 90 innings
- 20 test average in Australia
- Can’t take a single catch
- Let’s laugh on this 32 years old liability of a cricketer who hasn’t won a single ICC trophy and IPL till now ?#KLRahul#INDvsNZ#TeamIndiapic.twitter.com/7NQ86nPaybhttps://t.co/ZafnlUeb2a— Prateek (@prateek_295) October 17, 2024
ಕನ್ನಡಿಗ ರಾಹುಲ್​ಗೆ ಚಿನ್ನಸ್ವಾಮಿ ಕ್ರೀಡಾಂಗಣ ಅಂದ್ರೆ ಹೇಳಿ ಕೇಳಿ ತವರು. ಇಲ್ಲಿ ಬ್ಯಾಟಿಂಗ್​ನಲ್ಲೂ ಸೊನ್ನೆ ಸುತ್ತಿದ ಕೆ.ಎಲ್​.ರಾಹುಲ್ ಈಗ ಕ್ಯಾಚ್ ಹಿಡಿಯುವಲ್ಲಿಯೂ ಸಹ ವಿಫಲರಾಗಿದ್ದಾರೆ. 30 ವರ್ಷದ ಅನುಭವಿ ಆಟಗಾರ ಚೆಂಡು ಬಂದ ವೇಗಕ್ಕೆ ಬೆಚ್ಚಿ ಬಿದ್ದವರಂತೆ ಮುಖ ಮಾಡಿದ್ದು ಈಗ ಭಾರೀ ಟೀಕೆಗೆ ಗುರಿಯಾಗುತ್ತಿದೆ. ಒಟ್ಟು 53 ಟೆಸ್ಟ್ ಆಡಿರುವ ರಾಹುಲ್ 90 ಇನ್ನಿಂಗ್ಸ್ ಆಡಿದ್ದಾರೆ. ಅದರಲ್ಲಿ 20 ಟೆಸ್ಟ್​ ಆಸ್ಟ್ರೇಲಿಯಾದೊಂದಿಗೆ ಆಡಿದ್ದಾರೆ. ಆದ್ರೆ ಒಂದೇ ಒಂದು ಕ್ಯಾಚ್ ಹಿಡಿಯಲು ಆಗುತ್ತಿಲ್ಲ ಎಂದು ಜನರು ಕೆ.ಎಲ್​ ರಾಹುಲ್​ ವಿರುದ್ಧ ಟೀಕಾಪ್ರಹಾರ ಮಾಡುತ್ತಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us