/newsfirstlive-kannada/media/post_attachments/wp-content/uploads/2024/11/JOB_COAL_INDIA_1.jpg)
ಸಮರ್ಥ ಅಭ್ಯರ್ಥಿಗಳಿಂದ ಆಯಿಲ್ ಇಂಡಿಯಾ ಲಿಮಿಟೆಡ್ (ಒಐಎಲ್) ಅರ್ಜಿಗಳನ್ನು ಆಹ್ವಾನ ಮಾಡಿದೆ. ಈ ಉದ್ಯೋಗಗಳನ್ನು ನುರಿತ ಅಭ್ಯರ್ಥಿಗಳಿಗೆ ನೀಡಲಾಗುತ್ತದೆ. ಹೀಗಾಗಿ ಸಾಮಾನ್ಯ ಅಭ್ಯರ್ಥಿಗಳಿಗಿಂತ ಉದ್ಯೋಗದಲ್ಲಿ 15 ವರ್ಷಕ್ಕೂ ಅಧಿಕ ಅನುಭವ ಇರುವವರು ಅಪ್ಲೇ ಮಾಡಿದರೆ ಉತ್ತಮ. ಕಾಂಟ್ರಾಕ್ಟ್ ಬೇಸ್ ಮೇಲೆ ಈ ಹುದ್ದೆಗಳಿಗೆ ನೇಮಕ ಮಾಡಲಾಗುತ್ತದೆ ಎಂದು ತಿಳಿಸಲಾಗಿದೆ.
ಇನ್ನು ಈ ಹುದ್ದೆಗಳಿಗೆ ಸಂಬಂಧಿಸಿದ ಅರ್ಹತೆ, ವೇತನ ಶ್ರೇಣಿ, ವಯಸ್ಸಿನ ಮಿತಿ, ಯಾವ ಕೋರ್ಸ್ ಮಾಡಿದವರಿಗೆ ಈ ಉದ್ಯೋಗ ನೀಡಲಾಗುತ್ತದೆ ಎಂಬುದರ ವಿವರ ಇಲ್ಲಿದೆ. ಫಾರ್ಮ್ ಅನ್ನು ಇಲಾಖೆ ವೆಬ್ಸೈಟ್ನಿಂದ ಡೌನ್ಲೋಡ್ ಮಾಡಿಕೊಳ್ಳಬೇಕು. ಹೀಗಾಗಿ ಆಸಕ್ತರು ಈ ಆರ್ಟಿಕಲ್ ಅನ್ನು ಸಂಪೂರ್ಣವಾಗಿ ಗಮನಿಸಬೇಕು. ಹುದ್ದೆಗೆ ನೇಮಕವಾದರೆ ಅಭ್ಯರ್ಥಿಗಳು ದೇಶದಲ್ಲಿರುವ ಆಯಿಲ್ ಇಂಡಿಯಾ ಲಿಮಿಟೆಡ್ನ ಯಾವುದೇ ಪ್ರದೇಶದ ಕಚೇರಿಗಳಲ್ಲಿ ಕೆಲಸ ಮಾಡಲು ಸಿದ್ಧರಾಗಿರಬೇಕು.
ತಿಂಗಳ ಸ್ಯಾಲರಿ ಎಷ್ಟು?
1,20,000 ದಿಂದ 2,80,000 ರೂಪಾಯಿಗಳು
ಇದನ್ನೂ ಓದಿ:ಅಭ್ಯರ್ಥಿಗಳ ಬೃಹತ್ ಪ್ರತಿಭಟನೆಗೆ ಮಣಿದ ಸರ್ಕಾರ.. ಒಂದೇ ಹಂತದಲ್ಲಿ ಪರೀಕ್ಷೆ ನಡೆಸಲು CM ಸೂಚನೆ
ಹುದ್ದೆಗಳ ಹೆಸರು
ಚೀಫ್ ಜನರಲ್ ಮ್ಯಾನೇಜರ್ (ಕ್ರಿಟಿಕಲ್ ಮಿನರಲ್ಸ್)
ಜನರಲ್ ಮ್ಯಾನೇಜರ್ (ಕ್ರಿಟಿಕಲ್ ಮಿನರಲ್ಸ್)
ಒಟ್ಟು ಹುದ್ದೆಗಳು- 02
ವಯಸ್ಸಿನ ಮಿತಿ ಎಷ್ಟು ಇದೆ?
56 ರಿಂದ 58 ವರ್ಷದ ಒಳಗಿನವರಿಗೆ ಅವಕಾಶ
ವಿದ್ಯಾರ್ಹತೆ ಬಗ್ಗೆ ಮಾಹಿತಿ
ಸ್ನಾತಕೋತ್ತರ ಪದವಿಯಲ್ಲಿ ಭೂವಿಜ್ಞಾನ/ಅನ್ವಯಿಕ ಭೂವಿಜ್ಞಾನ (Geology/Applied Geology).
ಅಥವಾ ಪದವಿಯಲ್ಲಿ ಮೈನಿಂಗ್ ಇಂಜಿನಿಯರಿಂಗ್ ಪೂರ್ಣಗೊಳಿಸಿರಬೇಕು.
ಆಯ್ಕೆ ಪ್ರಕ್ತಿಯೆ
ವೈಯಕ್ತಿಕ ಸಂದರ್ಶನದಲ್ಲಿ ಪರ್ಫಾಮೆನ್ಸ್ ಆಧಾರದ ಮೇಲೆ ಆಯ್ಕೆ ಮಾಡಲಾಗುತ್ತದೆ.
ಅರ್ಜಿ ಸಲ್ಲಿಸುವ ವಿಳಾಸ
CGM (HR Acquisitions),
HR Acquisitions Department,
ಆಯಿಲ್ ಇಂಡಿಯಾ ಲಿಮಿಟೆಡ್
ಫೀಲ್ಡ್ ಹೆಡ್ ಕ್ವಾಟರ್ಸ್
ದುಲಿಯಾಜನ್, ಅಸ್ಸಾಂ- 786 602
ಇ-ಮೇಲ್- [email protected]
ಅರ್ಜಿಗೆ ಕೊನೆಯ ದಿನಾಂಕ- 02 ಡಿಸೆಂಬರ್ 2024
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ