/newsfirstlive-kannada/media/post_attachments/wp-content/uploads/2024/12/JOB_50_YEARS.jpg)
ಸಾಕಷ್ಟು ಅನುಭವ ಇರುವ ಅಭ್ಯರ್ಥಿಗಳಿಂದ ಆಯಿಲ್ ಇಂಡಿಯಾ ಲಿಮಿಟೆಡ್ (ಒಐಎಲ್) ಮಹತ್ವದ ಹುದ್ದೆಗಳ ನೇಮಕಾತಿಗಾಗಿ ಅರ್ಜಿಗಳನ್ನು ಆಹ್ವಾನ ಮಾಡಿದೆ. ಈ ಹುದ್ದೆಗಳು ಕೇವಲ ನುರಿತ ಅಭ್ಯರ್ಥಿಗಳು ಮಾತ್ರ ಅನ್ವಯಿಸುತ್ತವೆ. ಉದ್ಯೋಗದಲ್ಲಿ 15 ವರ್ಷಕ್ಕೂ ಹೆಚ್ಚು ಅನುಭವ ಇರುವಂತವರು ಅಪ್ಲೇ ಮಾಡಬಹುದು.
ಅಪ್ಲೇ ಮಾಡಬೇಕು ಎನ್ನುವ ಅಭ್ಯರ್ಥಿಗಳು ಅರ್ಜಿ ಪ್ರತಿಯನ್ನು ಇಲಾಖೆಯ ವೆಬ್​ಸೈಟ್​ನಿಂದ ಡೌನ್​ಲೋಡ್ ಮಾಡಿಕೊಳ್ಳಬೇಕು. ಇನ್ನು ವೇತನ ಶ್ರೇಣಿ, ವಯಸ್ಸಿನ ಮಿತಿ, ಅರ್ಹತೆ, ಯಾವ ಕೋರ್ಸ್ ಮಾಡಿದವರಿಗೆ ಅವಕಾಶ ಇದೆ ಎನ್ನುವ ವಿವರ ಇಲ್ಲಿದೆ. ಒಂದು ವೇಳೆ ಹುದ್ದೆಗೆ ನೇಮಕವಾದ್ರೆ ಅಭ್ಯರ್ಥಿಗಳನ್ನ ದೇಶದ ವಿವಿಧೆಡೆ ಇರುವ ಆಯಿಲ್ ಇಂಡಿಯಾ ಲಿಮಿಟೆಡ್​ನ ಯಾವುದೇ ಕಚೇರಿಗಳಲ್ಲಿ ನೇಮಕ ಮಾಡಬಹುದು.
ಹುದ್ದೆಗಳ ಹೆಸರು, ಒಟ್ಟು ಕೆಲಸಗಳು?
- ಚೀಫ್ ಜನರಲ್ ಮ್ಯಾನೇಜರ್ (ಕ್ರಿಟಿಕಲ್ ಮಿನರಲ್ಸ್)
- ಜನರಲ್ ಮ್ಯಾನೇಜರ್ (ಕ್ರಿಟಿಕಲ್ ಮಿನರಲ್ಸ್)
- ಒಟ್ಟು ಹುದ್ದೆಗಳು- 02
- ಇವೆಲ್ಲಾ ಕಾಂಟ್ರಾಕ್ಟ್ ಬೇಸ್​ ಹುದ್ದೆಗಳು ಆಗಿವೆ
ಇದನ್ನೂ ಓದಿ: ಕರ್ನಾಟಕ ಲೋಕಸೇವಾ ಆಯೋಗ; ಹುದ್ದೆಗಳ ನೇಮಕಾತಿ.. ಈ ದಿನಾಂಕದ ಒಳಗೆ ಅರ್ಜಿ ಸಲ್ಲಿಸಿ
/newsfirstlive-kannada/media/post_attachments/wp-content/uploads/2024/12/JOBS_50_YEARS.jpg)
ವಿದ್ಯಾರ್ಹತೆ ಬಗ್ಗೆ ಮಾಹಿತಿ
ಸ್ನಾತಕೋತ್ತರ ಪದವಿ (Geology/Applied Geology).
ಅಥವಾ ಪದವಿಯಲ್ಲಿ ಮೈನಿಂಗ್ ಇಂಜಿನಿಯರಿಂಗ್
ಸ್ಯಾಲರಿ ಎಷ್ಟು ಕೊಡುತ್ತಾರೆ?
1,20,000 ದಿಂದ 2,80,000 ರೂಪಾಯಿ
ವಯಸ್ಸಿನ ಮಿತಿ ಎಷ್ಟು ಇದೆ?
56 ರಿಂದ 58 ವರ್ಷದ ಒಳಗಿನವರಿಗೆ ಅವಕಾಶ
ಆಯ್ಕೆ ಪ್ರಕ್ತಿಯೆ
ವೈಯಕ್ತಿಕ ಸಂದರ್ಶನದಲ್ಲಿ ಪರ್ಫಾಮೆನ್ಸ್​ ಮೇಲೆ ಆಯ್ಕೆ
ಅರ್ಜಿ ಸಲ್ಲಿಸುವ ವಿಳಾಸ
CGM (HR Acquisitions),
HR Acquisitions Department,
ಆಯಿಲ್ ಇಂಡಿಯಾ ಲಿಮಿಟೆಡ್
ಫೀಲ್ಡ್​ ಹೆಡ್​ ಕ್ವಾಟರ್ಸ್​
ದುಲಿಯಾಜನ್, ಅಸ್ಸಾಂ- 786 602
ಇ-ಮೇಲ್- [email protected]
ಅರ್ಜಿಗೆ ಕೊನೆಯ ದಿನಾಂಕ- 02 ಡಿಸೆಂಬರ್ 2024
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us