/newsfirstlive-kannada/media/post_attachments/wp-content/uploads/2024/07/OIL-TANKER.jpg)
ಓಮನ್ ಕರಾವಳಿಯಲ್ಲಿ ತೈಲ ಟ್ಯಾಂಕರ್ ಹಡಗು ಮುಳುಗಿದ್ದು 13 ಭಾರತೀಯರು ಸೇರಿ ಒಟ್ಟು 16 ಸಿಬ್ಬಂದಿ ನಾಪತ್ತೆಯಾಗಿದ್ದಾರೆ. ತೈಲ ಟ್ಯಾಂಕರ್ ಯೆಮೆನ್​​​ನ ಏಡನ್ ಬಂದರ್​ನಿಂದ ಹೊರಟಿತ್ತು.
ಸದ್ಯ ನೀರಿನಲ್ಲಿ ಮುಳಗಿದವರನ್ನು ರಕ್ಷಣೆ ಮಾಡಲು ಶೋಧಕಾರ್ಯ ನಡೆಯುತ್ತಿದೆ. ಟ್ಯಾಂಕರ್ ಹಡಗಿನಲ್ಲಿ 13 ಬಾರತೀಯ ಸಿಬ್ಬಂದಿ ಹಾಗೂ ಮೂವರು ಶ್ರೀಲಂಕಾದವರು ಇದ್ದರು. ಓಮನ್ ಬಂದರು ಡುಕ್ಮ್​ ಬಳಿಯ ಆಗ್ನೇಯಕ್ಕೆ 25 ನಾಟಿಕಲ್ ಮೈಲು ದೂರ ಹೋಗುತ್ತಿದ್ದಂತೆಯೇ ಹಡಗು ಮುಳುಗಿದೆ ಎಂಬ ವರದಿ ಇದೆ. ಓಮನ್ ನೃಋತ್ಯದ ಕರಾವಳಿಯಲ್ಲಿರುವ ಡುಕ್ಮ್​​ ಬಂದರು ದೇಶದ ಪ್ರಮುಖ ತೈಲ ಮತ್ತು ಅನಿಲ ಗಣಿಗಾರಿಕೆ ಯೋಜನೆಗಳ ಪ್ರಮುಖ ಕೇಂದ್ರವಾಗಿದೆ.
ಎಲ್​​ಎಸ್​ಇಜಿ ಶಿಪ್ಪಿಂಗ್ ಡೇಟಾ ಪ್ರಕಾರ.. ಟ್ಯಾಂಕರ್​ ಯೆಮೆನ್​​​ ಏಡನ್ ಬಂದರ್​ನಿಂದ ಹೊರಟಿತ್ತು. ತೈಲ ಟ್ಯಾಂಕರ್​ ತಲೆ ಕೆಳಗಾಗಿ ನೀರಿನಲ್ಲಿ ಮುಳಗಿದೆ. ಮುಳುಗಿರುವ ಹಡಗು ಹಾಗೆಯೇ ಇದೆಯೇ ಅಥವಾ ತೈಲ ಸೋರಿಕೆ ಆಗುತ್ತಿದೆಯೇ ಅನ್ನೋದು ಇನ್ನು ಖಚಿತವಾಗಿಲ್ಲ. 2007ರಲ್ಲಿ ನಿರ್ಮಿಸಲಾದ 117 ಮೀಟರ್​ ಉದ್ದದ ತೈಲ ಉತ್ಪನ್ನ ಟ್ಯಾಂಕರ್ ಅದಾಗಿದೆ ಎಂದು ತಿಳಿಸಿದೆ.
ಇದನ್ನೂ ಓದಿ:ಇನ್ನೂ ಎಷ್ಟು ದಿನ ಭಯಂಕರ ಮಳೆ ಸುರಿಯಲಿದೆ? ಕರಾವಳಿ ಜನರ ಆತಂಕ ಹೆಚ್ಚಿಸಿದ ಹವಾಮಾನ ವರದಿ
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us