/newsfirstlive-kannada/media/post_attachments/wp-content/uploads/2025/05/nelamangala1.jpg)
ನೆಲಮಂಗಲ: ಬೆಳ್ಳಂಬೆಳಗ್ಗೆ ಆಯಿಲ್ ಗೋದಾಮಿಗೆ ಧಗಧಗನೆ ಬೆಂಕಿ ಹೊತ್ತಿ ಉರಿದ ಘಟನೆ ನೆಲಮಂಗಲ ಬಳಿಯ ಅಡಕಮಾರನಹಳ್ಳಿ ಬಳಿ ನಡೆದಿದೆ.
ಇದನ್ನೂ ಓದಿ:IPL ಅಭಿಮಾನಿಗಳಿಗೆ ಗುಡ್ ನ್ಯೂಸ್.. ಹೊಸ ವೇಳಾಪಟ್ಟಿ ಬಿಡುಗಡೆ; RCB ಪಂದ್ಯ ಯಾವಾಗ?
ಬೆಂಕಿಗಾಹುತಿಯಾಗಿರೋ ಆಯಿಲ್ ಗೋದಾಮು ಮಾಜಿ ಕಂದಾಯ ಸಚಿವ ಎಚ್.ಸಿ ಶ್ರೀಕಂಠಯ್ಯ ಅಳಿಯ ಕೃಷ್ಣಪ್ಪ ಎಂಬುವರಿಗೆ ಸೇರಿದೆ. ಕೃಷ್ಣಪ್ಪ ಅವರು ಸೌತ್ ಕರ್ನಾಟಕ ಡಿಸ್ಟ್ರಿಬ್ಯೂಟರ್ ಆಗಿದ್ದಾರೆ. ರಾಜ್ಯದಲ್ಲಿ ಯಾವುದೇ ಆಯಿಲ್ ಸಮಸ್ಯೆ ಬಾರದಂತೆ ಸಂಗ್ರಹಣೆ ಮಾಡಲಾಗಿತ್ತು. ಹೀಗಾಗಿ ಶೆಲ್ ಕಂಪನಿಗೆ ಬಾಡಿಗೆ ನೀಡಲಾಗಿತ್ತು.
ಆದ್ರೆ, ಇಂದು ಬೆಳಗ್ಗಿನ ಜಾವ 3 ಗಂಟೆ ಸುಮಾರಿಗೆ ಈ ಘಟನೆ ನಡೆದಿದೆ. ಶಾರ್ಟ್ ಸರ್ಕ್ಯೂಟ್ನಿಂದ ಆಯಿಲ್ ಗೋದಾಮಿಗೆ ಬೆಂಕಿ ಹೊತ್ತಿಕೊಂಡಿದೆ ಎಂದು ಶಂಕಿಸಲಾಗಿದೆ. ಈ ವಿಷಯ ತಿಳಿದ ಕೂಡಲೇ ನೆಲಮಂಗಲ, ಪೀಣ್ಯಾ, ಯಶವಂತಪುರ ಭಾಗದ 8ಕ್ಕೂ ಹೆಚ್ಚು ಅಗ್ನಿಶಾಮಕ ಸಿಬ್ಬಂದಿ ದೌಡಾಯಿಸಿ ಬೆಂಕಿ ನಂದಿಸುತ್ತಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ