‘ಓಕೆ‘ ಎಂದ ಸ್ಟೇಷನ್ ಮಾಸ್ಟರ್​, ನಕ್ಸಲ್​ ಬಾಹುಳ್ಯ ಪ್ರದೇಶದಲ್ಲಿ ನಿಂತ ರೈಲು! ಇಲಾಖೆಗೆ 3 ಕೋಟಿ ರೂಪಾಯಿ ಲಾಸ್​! ಆಗಿದ್ದೇನು?

author-image
Gopal Kulkarni
Updated On
‘ಓಕೆ‘ ಎಂದ ಸ್ಟೇಷನ್ ಮಾಸ್ಟರ್​, ನಕ್ಸಲ್​ ಬಾಹುಳ್ಯ ಪ್ರದೇಶದಲ್ಲಿ ನಿಂತ ರೈಲು! ಇಲಾಖೆಗೆ 3 ಕೋಟಿ ರೂಪಾಯಿ ಲಾಸ್​! ಆಗಿದ್ದೇನು?
Advertisment
  • ಬಾರಿ ದುಬಾರಿಯಾದ ಸ್ಟೇಷನ್ ಮಾಸ್ಟರ್​ನ ಓಕೆ ಎಂದ ಒಂದು ಪದ
  • ಪತ್ನಿಗೆ ಓಕೆ ಎಂದಿದ್ದನ್ನು ನನಗೆ ಹೇಳಿದ್ದು ಎಂದುಕೊಂಡ ಲೊಕೊ ಪೈಲೆಟ್​
  • ನಿರ್ಬಂಧಿತ ಪ್ರದೇಶದತ್ತ ಹೊರಳಿದ ರೈಲು, 3 ಕೋಟಿ ರೂಪಾಯಿ ನಷ್ಟ

ರೈಲ್ವೆ ಇಲಾಖೆಯಲ್ಲಿ ಕೆಲಸ ಮಾಡಬೇಕು ಅಂದ್ರೆ ಮೈಯೆಲ್ಲಾ ಕಣ್ಣಾಗಿ, ಕಿವಿಯಾಗಿದ್ದುಕೊಂಡು ಕಾರ್ಯನಿರ್ವಹಿಸಬೇಕು. ಒಂದೇ ಒಂದು ಯಡವಟ್ಟು, ಒಂದೇ ಒಂದು ನಿರ್ಲಕ್ಷ್ಯ ದೊಡ್ಡ ಅಪಾಯವನ್ನೇ ತಂದೊಡ್ಡುತ್ತದೆ. ರೈಲ್ವೆ ಇಲಾಖೆಯ ಸಿಬ್ಬಂದಿ ಹಾಗೂ ಆತನ ಪತ್ನಿ ನಡುವೆ ನಡೆದ ಒಂದು ಗಲಾಟೆ ರೈಲನ್ನು ಬೇರೆ ದಿಕ್ಕಿನೆಡೆಗೆ ಕರೆದುಕೊಂಡು ಹೋಗಿ ನಿಲ್ಲಿಸುವಂತೆ ಮಾಡಿದ ಘಟನೆಯೊಂದು ನಡೆದಿದೆ. ನಕ್ಸಲ್ ಬಾಹುಳ್ಯ ಪ್ರದೇಶದಲ್ಲಿ ನಿಂತ ಟ್ರೈನ್​​ನನ್ನು ಮತ್ತೆ ವಾಪಸ್ ತೆಗೆದುಕೊಂಡು ಬರಲು ರೈಲ್ವೆ ಇಲಾಖೆ ಮೂರು ಕೋಟಿ ರೂಪಾಯಿ ಖರ್ಚು ಮಾಡುವ ಪರಿಸ್ಥಿತಿ ಬಂದಿದೆ.

ಇದನ್ನೂ ಓದಿ:ಮತ್ತೊಂದು ರೈಲು ಅನಾಹುತ; ಬೆಳ್ಳಂಬೆಳಗ್ಗೆ ಹಳಿಯಿಂದ ಜಾರಿದ 3 ಬೋಗಿಗಳು..

ಸ್ಟೇಷನ್ ಮಾಸ್ಟರ್ ಮಾಡಿದ ಯಡವಟ್ಟೊಂದು ಇಂತಹ ಪರಿಸ್ಥಿತಿಯನ್ನು ನಿರ್ಮಿಸಿದೆ. ಸ್ಟೇಷನ್ ಮಾಸ್ಟರ್​ ಪತ್ನಿಯೊಂದಿಗೆ ಮೊಬೈಲ್​ನಲ್ಲಿ ತಾರಕಕ್ಕೇರಿದ ಜಗಳದಲ್ಲಿ ನಿರತನಾಗಿದ್ದ. ಈ ವೇಳೆ ಅವನ ಮೈಕ್ರೊಫೋನ್ ಕೂಡ ಆನ್ ಇತ್ತು, ಹೀಗೆ ಜಗಳ ನಡೆದ ಸಂದರ್ಭದಲ್ಲಿ ಆತ ಪತ್ನಿಗೆ ಓಕೆ ಎಂದು ಹೇಳಿದ್ದಾನೆ. ಇದನ್ನು ನನಗೆ ಹೇಳಿದ್ದಾನೆ ಎಂದು ತಿಳಿದ ಗೂಡ್ಸ್ ರೈಲಿನ ಲೊಕೊ ಪೈಲೆಟ್ ಬೇರೆ ದಿಕ್ಕಿನತ್ತ ತನ್ನ ಟ್ರೇನ್​ನನ್ನು ಹೊರಳಿಸಿದ್ದಾನೆ. ಅದು ಕೂಡ ನಕ್ಸಲರ ಹೆಚ್ಚು ಚಟುವಟಿಕೆಯಿಂದ ಇದ್ದ ಏರಿಯಾದಲ್ಲಿ ಟ್ರೇನ್ ಬಂದು ನಿಂತಿದೆ. ಅದನ್ನು ಮರಳಿ ಹೋಗಬೇಕಾದ ಸ್ಥಾನಕ್ಕೆ ಹೋಗುವಂತೆ ಮಾಡಲು ರೈಲ್ವೆ ಇಲಾಖೆಗೆ ಮೂರು ಕೋಟಿ ರೂಪಾಯಿ ವೆಚ್ಚ ಮಾಡಬೇಕಾದ ಪರಿಸ್ಥಿತಿ ಬಂದಿದೆ.
ಕರ್ತವ್ಯದಲ್ಲಿ ಈ ರೀತಿ ಲೋಪತೋರಿದ ಸ್ಟೇಷನ್ ಮಾಸ್ಟರ್​ನನ್ನು ರೈಲ್ವೆ ಇಲಾಖೆ ಸಸ್ಪೆಂಡ್ ಮಾಡಿದೆ.

ಇದನ್ನೂ ಓದಿ:ಯೋಗ ಶಿಕ್ಷಕಿಯ ಅಪಹರಣ ಕೇಸ್​; ರಾಯರ ಸನ್ನಿಧಿಯಲ್ಲಿ ಸಿಕ್ಕಿಬಿದ್ದ ಆರೋಪಿಗಳ ಫೊಟೋಸ್ ಈಗ ಲಭ್ಯ

ಸ್ಟೇಷನ್ ಮಾಸ್ಟರ್ ವಿಶಾಖಪಟ್ಟಣಮ್ ನಿವಾಸಿ ಎಂದು ಗುರುತಿಸಲಾಗಿದ್ದು ದುರ್ಗ್ ಪ್ರದೇಶದ ಯುವತಿಯನ್ನು ಆತ ಮದುವೆಯಾಗಿದ್ದ. ಕೋರ್ಟ್​​ನ ವಿವರಗಳು ಹೇಳುವ ಪ್ರಕಾರ 2011ರಲ್ಲಿ ಅವರ ಮದುವೆಯಾಗಿದೆ. ಆದ್ರೆ ಆತನ ಪತ್ನಿ ತನ್ನ ಮಾಜಿ ಪ್ರಿಯಕರನೊಂದಿಗೆ ಇಂದಿಗೂ ಕೂಡ ಸಂಪರ್ಕದಲ್ಲಿರುವುದು ಗೊತ್ತಾಗಿದೆ. ಅದನ್ನು ಆಕೆ ತನ್ನ ಪತಿಯ ಎದುರು ಕೂಡ ಹೇಳಿಕೊಂಡಿದ್ದಾಳೆ. ನನ್ನ ಆತನ ನಡುವೆ ಒಂದು ಭಾವುಕ ಸಂಬಂಧವೊಂದಿದೆ ಅದನ್ನು ಬಿಟ್ಟು ಇರಲು ಆಗುವುದಿಲ್ಲ ಎಂದು ಹೇಳಿದ್ದಾಳೆ. ಅವನೊಂದಿಗೆ ಸಂಪರ್ಕವನ್ನು ಮುಂದುವರಿಸಿದ್ದಾಳೆ. ಪತಿಯ ಉಪಸ್ಥಿತಿಯಲ್ಲಿಯೇ ಆತನೊಂದಿಗೆ ಮೊಬೈಲ್​ನಲ್ಲಿ ಮಾತನಾಡುತ್ತಿದ್ದಳಂತೆ. ಹೀಗಾಗಿ ಇಬ್ಬರ ನಡುವಿನ ವೈವಾಹಿಕ ಜೀವನದ ಬುಡವೇ ಅಲ್ಲಾಡಿ ಹೋಗಿತ್ತು.

ಇದೇ ವಿಚಾರವಾಗಿ ಆ ದಿನ ರಾತ್ರಿ ಇಬ್ಬರ ನಡುವೆ ಜೋರಾದ ವಾಗ್ವಾದ ಶುರುವಾಗಿದೆ. ಮಾತಿಗೆ ಮಾತು ಬೆಳೆದು ಜಗಳ ತೀವ್ರಕ್ಕೆ ಹೋಗಿದೆ. ಆವಾಗ ಸ್ಟೇಷನ್​ ಮಾಸ್ಟರ್ ಇದೆಲ್ಲವೂ ಮನೆಗೆ ಬಂದ ಮೇಲೆ ಮಾತಾಡೋಣ ಓಕೆ, ಎಂದಿದ್ದಾನೆ. ಸ್ಟೇಷನ್ ಮಾಸ್ಟರ್​ ಮೈಕ್ರೋಫೋನ್ ಆನ್ ಇದ್ದ ಕಾರಣ ಲೊಕೊ ಪೈಲೆಟ್ ಈ ಓಕೆ ನನಗೆ ಇರಬಹುದು ಎಂದು ಸಿಗ್ನಲ್​ನ್ನು ತಪ್ಪಾಗಿ ತೆಗೆದುಕೊಂಡು ನಿರ್ಬಂಧಿತ ಪ್ರದೇಶದತ್ತ ರೈಲನ್ನು ಹೊರಳಿಸಿದ್ದಾನೆ. ಈ ಘಟನೆಯಿಂದ ದೊಡ್ಡ ಸಮಸ್ಯೆಯೇ ಸೃಷ್ಟಿಯಾಗಿದ್ದು. ಅದೃಷ್ಟವಶಾತ್ ಯಾವುದೇ ರೀತಿಯ ಅಪಘಾತಗಳು ನಡೆದಿಲ್ಲ. ಆದ್ರೆ ರಾತ್ರಿ ವೇಳೆಯ ನಿಯಮಗಳ ಉಲ್ಲಂಘನೆಯಿಂದಾಗಿ ರೈಲ್ವೆ ಇಲಾಖೆಗೆ ಮೂರು ಕೋಟಿ ರೂಪಾಯಿ ಲಾಸ್ ಆಗಿದೆ ಎಂದು ತಿಳಿದು ಬಂದಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment