newsfirstkannada.com

ಓಲಾ ಪರಿಚಯಿಸಿದೆ ಹೊಸ ಎಲೆಕ್ಟ್ರಿಕ್​ ಬೈಕ್​​.. ಜಸ್ಟ್​​ 75 ಸಾವಿರಕ್ಕೆ ಸಿಗುತ್ತೆ! ಮೈಲೇಜ್​ ಎಷ್ಟು ಗೊತ್ತಾ?

Share :

Published August 19, 2024 at 3:11pm

    ಓಲಾ ಭಾರತದ ಅತಿದೊಡ್ಡ ಎಲೆಕ್ಟ್ರಿಕ್​​ ವಾಹನ ತಯಾರಕ

    ಮೂರು ಹೊಚ್ಚ ಹೊಸ ಮಾದರಿಯನ್ನು ಬೈಕ್​ ಬಿಡುಗಡೆ

    2.8 ಸೆಕೆಂಡಿನಲ್ಲಿ 0 ಯಿಂದ 40 ಕಿ.ಮೀ ವೇಗವನ್ನು ತಲುಪುತ್ತೆ

ಭಾರತದ ಅತಿದೊಡ್ಡ ಎಲೆಕ್ಟ್ರಿಕ್​​ ವಾಹನ ತಯಾರಕ ಓಲಾ ಎಲೆಕ್ಟ್ರಿಕ್​ ತನ್ನ ಮೊದಲ EV ಬೈಕ್​ ಅನ್ನು ಸಿದ್ಧಪಡಿಸಿ ಮಾರುಕಟ್ಟೆಗೆ ಬಿಡುಗಡೆ ಮಾಡಿದೆ. ನೂತನ ಬೈಕ್​ನ ಲುಕ್​ ವಿಭಿನ್ನವಾಗಿದ್ದು, ಮಾರುಕಟ್ಟೆಯಲ್ಲಿ ಪೈಪೋಟಿ ನೀಡಲು ಸಜ್ಜಾಗಿದೆ.

ಓಲಾ ಎಲೆಕ್ಟ್ರಿಕ್​ ವಿಭಾಗದ ಸಿಇಒ ಭವಿಶ್​ ಅಗರ್ವಾಲ್​​ ಮೂರು ಹೊಚ್ಚ ಹೊಸ ಮಾದರಿಯನ್ನು ಬಿಡುಗಡೆ ಮಾಡಿದ್ದೇವೆ ಎಂದು ಹೇಳಿದ್ದಾರೆ. ಗ್ರಾಹಕರಿಗಾಗಿ ರೋಡ್​​ಸ್ಟರ್​ ಎಕ್ಸ್​, ರೋಡ್​​ಸ್ಟರ್​​ ಮತ್ತು ರೋರ್ಡ್​​ಸ್ಟರ್​ ಪ್ರೊ ಮಾರುಕಟ್ಟೆಗೆ ಬಿಟ್ಟಿದ್ದೇವೆ ಎಂದಿದ್ದಾರೆ. ನೂತನ ಎಲೆಕ್ಟ್ರಿಕ್​ ಬೈಕ್​ಗಳು 74,999 ರೂಪಾಯಿಯಿಂದ ಪ್ರಾರಂಭವಾಗಿ 2.49 ಲಕ್ಷರವರೆಗೆ ಸಿಗಲಿದೆ. ಈಗಾಗಲೇ ಕಂಪನಿಯು ಬುಕ್ಕಿಂಗ್​ ಶುರು ಮಾಡಿದೆ.

ರೋಡ್​​ಸ್ಟರ್​​ ಎಕ್ಸ್ ವಿಶೇಷತೆ

ರೋಡ್​​ಸ್ಟರ್​​ ಎಕ್ಸ್​ ಬೈಕ್​​ 11ಕಿವಿ ಎಲೆಕ್ಟ್ರಿಕ್​ ಮೋಟಾರನ್ನು ಹೊಂದಿದೆ. ನೂತನ ಬೈಕ್​ನಲ್ಲಿ ಮೂರು ಬ್ಯಾಟರಿ ಆಯ್ಕೆಯನ್ನು ಹೊಂದಿದೆ. ಅಂದರೆ 2.5kWh, 3.5 kWh ಮತ್ತು 4.5 kWh ಬ್ಯಾರಿಯ ಆಯ್ಕೆಯಲ್ಲಿ ಸಿಗಲಿದೆ. ಟಾಪ್​ ಮಾಡೆಲ್​​ 2.8 ಸೆಕೆಂಡಿನಲ್ಲಿ 0 ಯಿಂದ 40 ಕಿ.ಮೀ ವೇಗವನ್ನು ತಲುಪುತ್ತದೆ. 124 ಕಿಮೀ ವೇಗವನ್ನು ವೇಗವಾಗಿ ಕ್ರಮಿಸುತ್ತದೆ.

ಓಲಾ ನೂತನ ಎಲೆಕ್ಟ್ರಿಕ್​ ಬೈಕ್​ನಲ್ಲಿ MoveOS 5 ನಿಂದ ಚಾಲಿತವಾದ 4.3 ಇಂಚಿನ ಎಲ್​ಸಿಡಿ ಡಿಸ್​ಪ್ಲೇ ಮತ್ತು ಕಾಂಬಿ ಬ್ರೇಕಿಂಗ್​ ಸಿಸ್ಟಮ್​​ ಹೊಂದಿದೆ. ಅಂದಹಾಗೆಯೇ ರೋಡ್​​ಸ್ಟರ್​​ ಎಕ್ಸ್ 74,999 ರೂಪಾಯಿ ಬೆಲೆಗೆ ಖರೀದಿಗೆ ಸಿಗುತ್ತದೆ. ಮುಂದಿನ ವರ್ಷ ಜನವರಿಯಲ್ಲಿ ವಿತರಿಸಲು ಕಂಪನಿ ಮುಂದಾಗಿದೆ.

ರೋಡ್​​ಸ್ಟರ್​​ ವಿಶೇಷತೆ

ರೋಡ್​​ಸ್ಟರ್​​ ಎಲೆಕ್ಟ್ರಿಕ್​ ಬೈಕ್​ ಸ್ಫೋರ್ಟಿಯರ್​ ವಿನ್ಯಾಸದ ಜೊತೆಗೆ 13kW ಎಲೆಕ್ಟ್ರಿಕ್​ ಮೋಟಾರ್​​ ಅಳವಡಿಸಿಕೊಂಡಿದೆ. 3.5kWh, 4.5kWh ಮತ್ತು 6kWh ರೂಪಾಂತರದೊಂದಿಗೆ ಬರಲಿದೆ. 248 ಕಿಮೀ ಕ್ರಮಿಸುವ ಶಕ್ತಿಯನ್ನು ಹೊಂದಿದೆ.

ರೋಡ್​​ಸ್ಟರ್​​ ನಾಲ್ಕು ರೈಡಿಂಗ್ ಮೋಡ್​​ನೊಂದಿಗೆ ಬರುತ್ತಿದೆ. 8.8 ಇಂಚಿನ ಟಿಎಫ್​ಟಿ ಟಚ್​ಸ್ಕ್ರೀನ್​ ಇದರಲ್ಲಿದೆ. ಕ್ರೂಸ್​ ಕಂಟ್ರೋಲ್​ ಮತ್ತು AI ಚಾಲಿತ ಕ್ರುಟಿಮ್​​ ಅಸಿಸ್ಟೆಂಟ್​​ನಂತರ ಪ್ರಿಮಿಯಂ ವೈಶಿಷ್ಟ್ಯ ಇದರಲ್ಲಿದೆ. ಗ್ರಾಹಕರಿಗಾಗಿ 1.05 ಲಕ್ಷ ರೂಪಾಯಿಯಲ್ಲಿ ಗ್ರಾಹಕರ ಖರೀದಿಗೆ ಸಿಗಲಿದೆ.

​ರೋಡ್​​ಸ್ಟರ್​ ಪ್ರೊ

ರೋಡ್​​ಸ್ಟರ್​ ಪ್ರೊ ಬೈಕ್​​ 52 kW ಮೋಟಾರ್​ನಿಂದ ಚಾಲಿತವಾಗಿದೆ. ಉನ್ನತ ಮಟ್ಟದ ರೂಪಾಂತರವು 16kWhನೊಂದಿಗೆ 1.2 ಸೆಕೆಂಡುಗಳಲ್ಲಿ 0 ಯಿಂದ 40kmph ಕ್ರಮಿಸುತ್ತದೆ. 194 kmph ವೇಗವನ್ನು ನೀಡುತ್ತದೆ.

ರೋಡ್​​ಸ್ಟರ್ ಪ್ರೊ 10 ಇಂಚಿನ ಟಿಎಫ್​ಟಿ ಟಚ್​ಸ್ಕ್ರೀನ್​​ ಮತ್ತು ADAS ಮತ್ತು ಸುಧಾರಿತ ಡಿಜಿಟಲ್​​ ವೈಶಿಷ್ಟ್ಯಗಳನ್ನು ಒಳಗೊಂಡಿದೆ. ಅತ್ಯಾಧುನಿಕ ತಂತ್ರಜ್ಞಾನವನ್ನು ಇಂದು ಹೊಂದಿದೆ. 8kWh ಮತ್ತು 16kWh ರೂಪಾಂತರದ ಬೆಲೆಯು 1.99 ಲಕ್ಷ ರೂಪಾಯಿಂದ ಪ್ರಾರಂಭವಾಗಿ 2.49 ಲಕ್ಷ ರೂಪಾಯಿವರೆಗೆ ಇರಲಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಓಲಾ ಪರಿಚಯಿಸಿದೆ ಹೊಸ ಎಲೆಕ್ಟ್ರಿಕ್​ ಬೈಕ್​​.. ಜಸ್ಟ್​​ 75 ಸಾವಿರಕ್ಕೆ ಸಿಗುತ್ತೆ! ಮೈಲೇಜ್​ ಎಷ್ಟು ಗೊತ್ತಾ?

https://newsfirstlive.com/wp-content/uploads/2024/08/Ola-Bike.jpg

Load More