Ola Season Sale: ಬರೀ 49,999 ರೂಪಾಯಿಗೆ ಓಲಾ ಎಲೆಕ್ಟ್ರಿಕ್​ ಸ್ಕೂಟರ್​​​​ ಖರೀದಿಸುವ ಅವಕಾಶ!

author-image
AS Harshith
Updated On
Ola Season Sale: ಬರೀ 49,999 ರೂಪಾಯಿಗೆ ಓಲಾ ಎಲೆಕ್ಟ್ರಿಕ್​ ಸ್ಕೂಟರ್​​​​ ಖರೀದಿಸುವ ಅವಕಾಶ!
Advertisment
  • ಗ್ರಾಹಕರಿಗಾಗಿ ಅತಿದೊಡ್ಡ ಓಲಾ ಸೀಸನ್​​ ಸೇಲ್
  • ಭರ್ಜರಿ ಆಫರ್​ಗೆ ಓಲಾ ಸ್ಕೂಟರ್​ ಖರೀದಿಸುವ ಆಯ್ಕೆ
  • 21 ಸಾವಿರ ರೂಪಾಯಿಗಳ ಪ್ರಯೋಜನ ಪಡೆಯುವ ಅವಕಾಶ

ಜನಪ್ರಿಯ ಓಲಾ ಎಲೆಕ್ಟ್ರಿಕ್​ ದಸರಾ ಹಬ್ಬದ ಸಮಯದಲ್ಲಿ ​ತನ್ನ ಗ್ರಾಹಕರಿಗಾಗಿ ಅತಿದೊಡ್ಡ ಓಲಾ ಸೀಸನ್​​ ಸೇಲ್​ ಹಬ್ಬಿಕೊಂಡಿದೆ. ಭರ್ಜರಿ ಆಫರನ್ನು ತೆರೆದಿಟ್ಟಿದೆ. ಜೊತೆಗೆ ಆಕರ್ಷಕ ಬೆಲೆ ಮಾರಾಟ ಮಾಡುತ್ತಿದೆ.

ಓಲಾ ಎಸ್​1 ಮೇಲೆ ಬೃಹತ್​ ರಿಯಾಯಿತಿ ನೀಡಿದೆ. ಅದರಲ್ಲೂ ಈ ಸ್ಕೂಟರನ್ನು ಬರೀ 49,999 ರೂಪಾಯಿಗೆ ಮಾರಾಟ ಮಾಡುತ್ತಿದೆ. ಅಂದಹಾಗೆಯೇ ಎಲೆಕ್ಟ್ರಿಕ್​ ಸ್ಕೂಟರ್​​ ಬಳಸಬೇಕೆಂದುಕೊಂಡವರಿಗೆ ಇದು ಉತ್ತಮ ಆಯ್ಕೆಯಾಗಿದೆ.

ಓಲಾ ಎಲೆಕ್ಟ್ರಿಕ್​ ಸಿಇಓ ಭವಿಷ್​​ ಅಗರ್ವಾಲ್​ ಓಲಾ ಸೀಸನ್​ ಬಗ್ಗೆ ಎಕ್ಸ್​ ಖಾತೆಯಲ್ಲಿ ಬರೆದುಕೊಂಡಿದ್ದು, ಓಲಾ ಎಲೆಕ್ಟ್ರಿಕ್​​ ಮಾರಾಟವು ಇಂದು ನಮ್ಮ ಅದ್ಭುತ ಸಮುದಾಯಕ್ಕೆ ಆರಂಭಿಕ ಪ್ರವೇಶಕ್ಕಾಗಿ ಮುಕ್ತವಾಗಿದೆ. ಕ್ರೇಜಿ ಕೊಡುಗೆಗಳು ಮತ್ತು ವಿಶೇಷ ಪ್ರಯೋಜನಗಳನ್ನು ನೀಡುತ್ತಿವೆ. Ola S1 ಸ್ಕೂಟರ್‌ಗಳು ಕೇವಲ ₹49,999 ರಿಂದ ಪ್ರಾರಂಭವಾಗುತ್ತವೆ. ಎಲ್ಲಾ ಉತ್ಪನ್ನಗಳು, ಬೆಲೆಗಳು, EV ಗಳ ಬಗ್ಗೆ ಮಾಹಿತಿ ಇಲ್ಲಿದೆ’ ಎಂದು ಬರೆದುಕೊಂಡಿದ್ದಾರೆ.

ಇದನ್ನೂ ಓದಿ: BSNL Foundation Day: ವಾರೆವ್ಹಾ! ಚಂದಾದಾರರಿಗೆ 24GB ಉಚಿತ ಡೇಟಾ ನೀಡಿದ ಟೆಲಿಕಾಂ ಕಂಪನಿ


">October 2, 2024

ಅಂದಹಾಗೆಯೇ, ಓಲಾ ಎಸ್​1 ಮೇಲೆ ಬರೋಬ್ಬರಿ 21 ಸಾವಿರ ರೂಪಾಯಿಯ ಪ್ರಯೋಜನ ನೀಡುತ್ತಿದೆ. ಅದರಲ್ಲಿ 10 ಸಾವಿರದ ವರೆಗೆ ರಿಯಾಯಿತಿ ಸಿಗಲಿದೆ. 5 ಸಾವಿರದವರೆಗೆ ವಿನಿಮಯ ಬೋನಸ್​​, 6 ಸಾವಿರ ಮೌಲ್ಯದ 140+MovesOD ವೈಶಿಷ್ಟ್ಯಗಳು, 7 ಸಾವಿರ ಮೌಲ್ಯದ 8 ವರ್ಷಗಳ ಬ್ಯಾಟರಿ ವ್ಯಾರಂಟಿ, 3 ಸಾವಿರ ಮೌಲ್ಯದ ಹೈಪರ್​​​ಚಾರ್ಜಿಂಗ್​​ ಕ್ರೆಡಿಟ್​​ ಸಿಗಲಿದೆ.

ಇದನ್ನೂ ಓದಿ: iPhone: ಅಪ್ಡೇಟ್​​ ಮಾಡಿದ ಬಳಿಕ ಕಾಣಿಸಿಕೊಂಡ ಬ್ಯಾಟರಿ ಸಮಸ್ಯೆ.. ಐಫೋನ್​ ಬಳಕೆದಾರರಿಗೆ ಸಂಕಷ್ಟ

ಇದಲ್ಲದೆ ಓಲಾ ಎಲೆಕ್ಟ್ರಿಕ್​​ ರೆಫರಲ್​ ಪ್ರೊಗ್ರಾಂ ಅನ್ನು ಪರಿಚಯಿಸಿದೆ. ಹೊಸ ಖರೀದಿದಾರರನ್ನು ರೆಫರ್​ ಮಾಡುವ ಗ್ರಾಹಕರು 3 ಸಾವಿರ ರೂಪಾಯಿ ರಿಯಾಯಿತಿ ಪಡೆಯುತ್ತಾರೆ. ರೆಫರಿಗಳು ಸ್ಕೂಟರ್​ ಖರೀದಿ ಮೇಲೆ 2 ಸಾವಿರ ರಿಯಾಯಿತಿ ಪಡೆಯುತ್ತಾರೆ. 100 ಸ್ಕೂಟರ್​ ರೆಫರಿ ಮಾಡುವ ಸದಸ್ಯರು 11,11,111ರವರೆಗಿನ ಮೌಲ್ಯದ ಬಹುಮಾನ ಗೆಲ್ಲುವ ಅವಕಾಶ ಹೊಂದಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment