/newsfirstlive-kannada/media/post_attachments/wp-content/uploads/2025/03/ola-uber.jpg)
ಬೆಂಗಳೂರು: ಸಿಲಿಕಾನ್​ ಸಿಟಿ ಮಂದಿ ಎಲ್ಲಿಯಾದರೂ ಹೋಗಬೇಕು ಅಂತ ಯೋಚನೆ ಮಾಡಿದ್ರೆ ಅವರ ತಲೆಗೆ ಥಟ್​ ಅಂತ ನೆನಪಿಗೆ ಬರುವುದೇ ಓಲಾ ಮತ್ತು ಉಬರ್. ಈ ವಾಹನಗಳು ಬುಕ್ ಮಾಡಿದ ಕೆಲವೇ ನಿಮಿಷಗಳಲ್ಲಿ ಮನೆ ಬಾಗಿಲಿಗೆ ಬರುತ್ತವೆ. ಪ್ರಯಾಣಿಕರಿಗೆ ಕಡಿಮೆ ದರದಲ್ಲಿ ಸೇವೆ ಒದಗಿಸುವ ಉದ್ದೇಶದಿಂದ ಜಾರಿಗೆ ಬಂದಿರೋ ಈ ಆನ್​ಲೈನ್ ಸಂಸ್ಥೆಗಳು ಇದೀಗ ‘ಟಿಪ್ಸ್​’ ಹೆಸರಲ್ಲಿ ವಂಚನೆಗೆ ಇಳಿದಿವೆ.
/newsfirstlive-kannada/media/post_attachments/wp-content/uploads/2024/02/uber.jpg)
ಹೌದು, ಓಲಾ, ಊಬರ್, ರಾಪಿಡೊ, ನಮ್ಮ ಯಾತ್ರಿಗಳು ಟಿಪ್ಸ್​ ಆಡ್​ ನೆಪದಲ್ಲಿ ಗ್ರಾಹಕರ ಸುಲಿಗೆ ಮಾಡುತ್ತಿವೆ. ಬುಕ್ಕಿಂಗ್ ಮಾಡುವಾಗ ಹೆಚ್ಚುವರಿಯಾಗಗಿ ₹10-₹50ರೂ.ಗೆ ಬೇಡಿಕೆ ಇಡುತ್ತಿದ್ದಾರೆ. ಅಲ್ಲದೇ ಗ್ರಾಹಕರು ಆಟೋ, ಕಾರು ಬುಕ್​ ಮಾಡಿ ಟಿಪ್ಸ್ Add ಮಾಡಿದ್ರೆ ಮಾತ್ರ ಬುಕ್ಕಿಂಗ್ ಅಕ್ಸೆಪ್ಟ್ ಆಗುತ್ತಿದೆ. ತುರ್ತು ಸಮಯದಲ್ಲಿ ಟಿಪ್ಸ್ ಮೂಲಕ ಗ್ರಾಹಕರ ಜೇಬಿಗೆ ಕತ್ತರಿ ಹಾಕುತ್ತಿದ್ದಾರೆ. ಆನ್​ಲೈನ್​ ಆ್ಯಪ್​ಗಳ ಸುಲಿಗೆ ಆಟಕ್ಕೆ ಗ್ರಾಹಕರು ವ್ಯಂಗ್ಯ ಮಾಡುತ್ತಿದ್ದಾರೆ. ಹೀಗಾಗಿ ಖಾಸಗಿ ಸಾರಿಗೆ ಒಕ್ಕೂಟದಿಂದ ಈ ಬಗ್ಗೆ ಕ್ರಮಕ್ಕೆ ಮನವಿ ಕೋರಿದ್ದಾರೆ.
/newsfirstlive-kannada/media/post_attachments/wp-content/uploads/2025/03/ola-uber1.jpg)
ಸುಲಿಗೆ ‘ಟಿಪ್ಸ್​’!
ಇನ್ನೂ ರಾಪಿಡೊ, ಓಲಾ, ಊಬರ್, ರಾಪಿಡೊ, ನಮ್ಮ ಯಾತ್ರಿಗಳು ಟಿಪ್ಸ್​ ಆಡ್​ ಬಗ್ಗೆ ನೆಟ್ಟಿಗರು ಕಿಡಿ ಕಾರುತ್ತಿದ್ದಾರೆ. ಹೀಗೆ ನೆಟ್ಟಿಗರು ಹೋಟೆಲ್​ ಮೆನು ತಯಾರಿ ಮಾಡಿ 10 ರೂ. ಟೀಗೆ 10ರೂಪಾಯಿ ಟಿಪ್ಸ್, ₹12 ಬಾದಾಮ್ ಮಿಲ್ಕ್​ಗೆ ₹10 ರೂಪಾಯಿ ಟಿಪ್ಸ್ ಎಂದು ವ್ಯಂಗ್ಯ ಮಾಡುತ್ತಿದ್ದಾರೆ. ಈ ಮೂಲಕ ಗ್ರಾಹಕರು ತಮ್ಮ ಆಕ್ರೋಶ ಹೊರ ಹಾಕುತ್ತಿದ್ದಾರೆ. ಈ ಬಗ್ಗೆ ಕ್ರಮತೆಗೆದುಕೊಳ್ಳುವಂತೆ ಖಾಸಗಿ ಸಾರಿಗೆ ಒಕ್ಕೂಟದಿಂದ ಸಾರಿಗೆ ಇಲಾಖೆಗೆ ಮನವಿ ಸಲ್ಲಿಸಲಾಗಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us