Advertisment

8 ವರ್ಷಗಳಿಂದ ಶಾಸಕ ಮುನಿರತ್ನ ಜೊತೆಯಲ್ಲೇ ಇದ್ದ ಚಲುವರಾಜು; ದಿಢೀರ್​ ಸಮರ ಸಾರಿದ್ದೇಕೆ?

author-image
Gopal Kulkarni
Updated On
8 ವರ್ಷಗಳಿಂದ ಶಾಸಕ ಮುನಿರತ್ನ ಜೊತೆಯಲ್ಲೇ ಇದ್ದ ಚಲುವರಾಜು; ದಿಢೀರ್​ ಸಮರ ಸಾರಿದ್ದೇಕೆ?
Advertisment
  • 8 ವರ್ಷದಿಂದ ಜೊತೆಗಿದ್ದವರೇ ಮುನಿರತ್ನ ಜೊತೆ ಮುನಿಸಿಕೊಂಡ್ರಾ..?
  • ಮುನಿರತ್ನ ಚೆಲುವರಾಜು ಬಳಿ 20 ಲಕ್ಷ ರೂಪಾಯಿ ಲಂಚ ಕೇಳಿದ್ರಾ?
  • ಸತ್ಯಕ್ಕೆ ಕೊನೆಗೆ ಜಯ ಆಗೋದು ಅಂದಿದ್ದೇಕೆ ಕಾರ್ಪೋರೇಟರ್ ರವಿ?

ಬೆಂಗಳೂರು: ಶಾಸಕ ಮುನಿರತ್ನ ವಿರುದ್ಧ ಕೇಳಿ ಬಂದಿರೋದು ಸಾಮಾನ್ಯ ಆರೋಪವಂತೂ ಅಲ್ಲ. ಆದರೇ, ಇದೊಂದು ಷಡ್ಯಂತ್ರ ಅಂತ ಖುದ್ದು ಮುನಿರತ್ನ ಹೇಳುತ್ತಿದ್ದಾರೆ. ಜನಪ್ರತಿನಿಧಿಗಳ ಕೋರ್ಟ್​​ನ ನ್ಯಾಯಮೂರ್ತಿಗಳ ಮುಂದೆಯೂ ತಪ್ಪು ಮಾಡಿಲ್ಲ ಅಂತಲೇ ಹೇಳಿದ್ದಾರೆ. ತನ್ನೊಂದಿಗೇ ಇದ್ದವರು ಬೇರೆಯವರೊಂದಿಗೆ ಸೇರಿಕೊಂಡು ಜಂಟಿ ಷಡ್ಯಂತ್ರದಲ್ಲಿ ಭಾಗಿಯಾಗಿದ್ದಾರೆ ಅಂತ ಮುನಿರತ್ನ ಅರೋಪಿಸುತ್ತಿದ್ದಾರೆ.

Advertisment

publive-image

8 ವರ್ಷಗಳಿಂದ ಜೊತೆಗಿದ್ದ ಚಲುವರಾಜು ಹೇಳ್ತಿರೋದೇನು?
ಇವತ್ತು ಮುನಿರತ್ನ ವಿರುದ್ಧ ಗಂಭೀರ ಆರೋಪ ಮಾಡಿರೋ ಚಲುವರಾಜು ಮೂಲತಃ ಬಿಬಿಎಂಪಿ ಗುತ್ತಿಗೆದಾರ. ರಾಜರಾಜೇಶ್ವರಿನಗರ ಹಾಗೂ ಲಕ್ಷ್ಮಿದೇವಿನಗರ ವಾರ್ಡ್​​ಗಳಲ್ಲಿ ಹಲವು ಕಾಂಟ್ರ್ಯಾಕ್ಟ್​ ಕೆಲಸಗಳನ್ನು ಮಾಡಿಕೊಂಡು ಬರುತ್ತಿದ್ದಾರೆ. ಬಿ.ಬಿ.ಎಂ.ಪಿ. ವ್ಯಾಪ್ತಿಯ ವಾರ್ಡ್ ನಂ. 42. ಲಕ್ಷ್ಮಿದೇವಿನಗರ ವಾರ್ಡ್‌ ನಲ್ಲಿ ಡಿ. ದೇವರಾಜು ಅರಸು ಟ್ರಕ್ ಟರ್ಮಿನಲ್ ಪ್ರದೇಶದ ಘನ ತ್ಯಾಜ್ಯ ಸಂಗ್ರಹಣೆ ಮತ್ತು ವಿಲೇವಾರಿ ಸಂಬಂಧ ಕೆಲಸ ಮಾಡಿಸುತ್ತಿದ್ದಾರೆ. ಇದೇ ಚಲುವರಾಜು ಇದೀಗ ಮುನಿರತ್ನ ವಿರುದ್ಧ ಲಂಚ ಬೇಡಿಕೆ ಆರೋಪ ಮಾಡಿದ್ದಾರೆ.
ಶಾಸಕ ಮುನಿರತ್ನ ಸೆಪ್ಟೆಂಬರ್​ 9ರಂದು 20 ಲಕ್ಷ ಹಣ ಕೇಳಿದ್ದಾರೆ. ಅಲ್ಲದೇ, ಹಣ ನೀಡದಿದ್ದರೆ ರೇಣುಕಾಸ್ವಾಮಿ ರೀತಿ ಕೊಲೆ ಮಾಡುವುದಾಗಿ ಮತ್ತು ಜಾತಿ ನಿಂದನೆ ಮಾಡಿದ್ದಾರೆ ಎಂದು ಆರೋಪಿಸಿ ಗುತ್ತಿಗೆದಾರ ಚಲುವರಾಜು ದೂರು ನೀಡಿದ್ರು. ಅಷ್ಟೇ ಅಲ್ಲ. ಖುದ್ದು ಸಿಎಂ ಸಿದ್ದರಾಮಯ್ಯರನ್ನ ಭೇಟಿ ಮಾಡಿ ಕ್ರಮ ಕೈಗೊಳ್ಳುವಂತೆ ಕೋರಿದ್ರು. ಇದೇ ಚಲುವರಾಜು ಬಗ್ಗೆ ಮುನಿರತ್ನ ಬೇರೆಯದ್ದೇ ಧಾಟಿಯಲ್ಲಿ ಮಾತಾಡುತ್ತಿದ್ದಾರೆ.

ಇದನ್ನೂ ಓದಿ: ಶಾಸಕ ಮುನಿರತ್ನ ರೀತಿ ಚೆನ್ನಾರೆಡ್ಡಿ ಬಂಧನ ಏಕಾಗಿಲ್ಲ? ಸರ್ಕಾರದ ವಿರುದ್ಧ ಛಲವಾದಿ ನಾರಾಯಣಸ್ವಾಮಿ ಆಕ್ರೋಶ

publive-image

ಮುನಿರತ್ನ ಕ್ಷೇತ್ರದ ವ್ಯಾಪ್ತಿಯ ವಾರ್ಡ್​ ಸದಸ್ಯ ವೇಲು ನಾಯ್ಕರ್​!

ಸದ್ಯ ಮುನಿರತ್ನ ವಿರುದ್ಧ ಜಾತಿ ನಿಂದನೆ ದೂರು ದಾಖಲಿಸಿದ್ದು ಇದೇ ವೇಲು ನಾಯ್ಕರ್. ಮುನಿರತ್ನ ಶಾಸಕರಾಗಿರುವ ರಾಜರಾಜೇಶ್ವರಿ ನಗರ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಗೆ ಬರುವ ಲಕ್ಷ್ಮಿ ದೇವಿ ನಗರ ವಾರ್ಡ್​​ನ ಕಾರ್ಪೋರೇಟರ್​ ಆಗಿದ್ದವರು ಇದೇ ಎಂ. ವೇಲು ನಾಯ್ಕರ್. ಇದೀಗ ಮುನಿರತ್ನ ವಿರುದ್ಧ ಜಾತಿ ನಿಂದನೆಯ ದೂರು ದಾಖಲಿಸಿದ್ದಾರೆ. ಒಟ್ಟೊಟ್ಟಿಗೆ ಇದ್ದ ಚಲುವರಾಜು, ವೇಲು ನಾಯ್ಕರ್​ ಹಾಗೂ ಮುನಿರತ್ನ ಪರಸ್ಪರ ವಿರೋಧಿಗಳಂತೆ ಕಾಣುತ್ತಿದ್ದಾರೆ. ಇದೇ ಮುನಿರತ್ನ ವಿರುದ್ಧ ವೇಲು ನಾಯ್ಕರ್​ ಸಿಡಿ ಸ್ಟುಡಿಯೋ ಇಟ್ಟಿದ್ದಾರೆ ಅನ್ನೋ ಆರೋಪವನ್ನೂ ಮಾಡಿದ್ರು. ಬಂಧನ ಬಳಿಕ ವೇಲು ಸತ್ಯಕ್ಕೆ ಸಂದ ಜಯ ಅಂತಿದ್ದಾರೆ.

Advertisment

ಇದನ್ನೂ ಓದಿ:ಸಿಎಂ ಸಿದ್ದರಾಮಯ್ಯ ಕಾರ್ಯಕ್ರಮದಲ್ಲಿ ಭದ್ರತಾ ಲೋಪ.. ಓಡೋಡಿ ಬಂದು ವೇದಿಕೆ ಏರಿದ ಯುವಕ

ಬಂಧನಕ್ಕೂ ಮುನ್ನ ಮುನಿರತ್ನ ಸಹ ಇದೇ ವೇಲು ನಾಯ್ಕರ್​ ವಿರುದ್ಧ ಗಂಭೀರ ಆರೋಪವನ್ನೇ ಮಾಡಿದ್ರು. ಹಲವರ ಮೇಲೆ ಇದೇ ವೇಲು ನಾಯ್ಕರ್​​ ಜಾತಿ ನಿಂದನೆಯ ಕೇಸ್​​ ಹಾಕಿದ್ದಾರೆ ಅಂತ ಹೇಳಿದ್ರು.ಮುನಿರತ್ನ ವಿರುದ್ಧ ಇದೀಗ ವೇಲು ನಾಯ್ಕರ್ ಹಾಗೂ ಚಲುವರಾಜು ಜಂಟಿಯಾಗಿಯೇ ಯುದ್ಧ ಸಾರಿದಂತೆ ಕಾಣುತ್ತಿದೆ. ಆದರೇ, ಮುನಿರತ್ನ ಮೇಲೆ ಬಂದಿರೋ ಆರೋಪ ಸತ್ಯವೇ ಆಗಿದ್ದರೇ ಬಹುದೊಡ್ಡ ಕಂಟಕ ಎದುರಾದ್ರೂ ಅಚ್ಚರಿ ಇಲ್ಲ. ಎಷ್ಟೇ ಕಷ್ಟಪಟ್ಟು ಬೆಳೆದರೂ ಹಾದಿಯನ್ನು ನೆನೆಯದೇ ದಾರಿ ತಪ್ಪಿದರೇ ಸಂಕಷ್ಟ ಕಟ್ಟಿಟ್ಟ ಬುತ್ತಿ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment